ಪ್ರೀ ವೆಡ್ಡಿಂಗ್ ಫೋಟೋಶೂಟ್ ದುರಂತ ಸಂಭವಿಸಿದ್ದು ಹೇಗೆ? ಪ್ರತ್ಯಕ್ಷದರ್ಶಿಗಳಿಂದ ಪಿನ್ ಟು ಪಿನ್ ಮಾಹಿತಿ..
ಮೈಸೂರು: ಮದುವೆಯಾಗಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಿದ್ದ ಜೋಡಿ ಹಕ್ಕಿಗಳು ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತಲಕಾಡಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸುವಾಗ ತೆಪ್ಪ ಮುಳುಗಿ ನವ ಜೋಡಿ ನೀರುಪಾಲಾಗಿತ್ತು. ಪ್ರಕರಣ ಸಂಬಂಧ ಈ ದುರಂತಕ್ಕೆ ಕಾರಣವೇನು ಎಂಬುವುದರ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಹೀಲ್ಡ್ ಚಪ್ಪಲಿ ಎಡವಟ್ಟಿನಿಂದ ಪ್ರಾಣಕ್ಕೆ ಸಂಚಕಾರ: ಹೊಸದಾಗಿ ಮದುವೆ ಆಗುವವರಿಗೆ ಮದುವೆ ಮುಂಚೆ ಡಿಫೆರೆಂಟ್ ಆಗಿ ಫೋಟೋಶೂಟ್ ಮಾಡಿಸಬೇಕು ಎಂಬ ಆಸೆ ಇರುತ್ತೆ. ಆದರೆ ಇದೇ ಆಸೆ ಪ್ರಾಣಕ್ಕೆ […]
ಮೈಸೂರು: ಮದುವೆಯಾಗಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಿದ್ದ ಜೋಡಿ ಹಕ್ಕಿಗಳು ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತಲಕಾಡಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸುವಾಗ ತೆಪ್ಪ ಮುಳುಗಿ ನವ ಜೋಡಿ ನೀರುಪಾಲಾಗಿತ್ತು. ಪ್ರಕರಣ ಸಂಬಂಧ ಈ ದುರಂತಕ್ಕೆ ಕಾರಣವೇನು ಎಂಬುವುದರ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಹೀಲ್ಡ್ ಚಪ್ಪಲಿ ಎಡವಟ್ಟಿನಿಂದ ಪ್ರಾಣಕ್ಕೆ ಸಂಚಕಾರ: ಹೊಸದಾಗಿ ಮದುವೆ ಆಗುವವರಿಗೆ ಮದುವೆ ಮುಂಚೆ ಡಿಫೆರೆಂಟ್ ಆಗಿ ಫೋಟೋಶೂಟ್ ಮಾಡಿಸಬೇಕು ಎಂಬ ಆಸೆ ಇರುತ್ತೆ. ಆದರೆ ಇದೇ ಆಸೆ ಪ್ರಾಣಕ್ಕೆ ಕುತ್ತು ತರುತ್ತೇ ಅಂತ ಯಾರೂ ಊಹಿಸಿರಲ್ಲ. ಇಲ್ಲಿ ನಡೆದಿದ್ದೂ ಅದೇ. ಇದೇ ತಿಂಗಳು ಮದುವೆಯಾಗಿ ಸುಖ ಜೀವನ ಸಾಗಿಸಬೇಕಿದ್ದ ಶಶಿಕಲಾ ಮತ್ತು ಚಂದ್ರು ಮೈಸೂರಿನಿಂದ ಫೋಟೋಶೂಟ್‌ಗಾಗಿ ಮುಡುಕುತೊರೆಗೆ ಬಂದಿದ್ರು. ಇವರ ಜೊತೆ ಫೋಟೋಗ್ರಾಫರ್ ಕೀರ್ತಿ ಇದ್ರು. ಅಂದುಕೊಂಡ ಹಾಗೇ ಫೋಟೋಶೂಟ್ ನಡೆಯುತ್ತಿತ್ತು. ಅಷ್ಟಕ್ಕೆ ವಾಪಾಸ್ ಬಂದಿದ್ರೆ.. ಇವತ್ತು ಈ ಜೋಡಿ ಬದುಕುಳಿತಿತ್ತು.. ಆದ್ರೆ ವಿಧಿ.
ಆದರೆ ನದಿ ನೋಡಿದ ಮೇಲೆ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ಈ ಜೋಡಿ ನಿರ್ಧಾರ ಮಾಡಿತ್ತು. ನಂತರ ತೆಪ್ಪ ಹತ್ತಿದ ಮೇಲೆ ವಧು ಶಶಿಕಲಾ ಕೆಲ ನಿಮಿಷ ನಿಂತುಕೊಂಡೇ ಇದ್ದರು. ಬಳಿಕ ಕುಳಿತುಕೊಳ್ಳುವಾಗ ಅವರ ಹೀಲ್ಡ್ ಚಪ್ಪಲಿ ಸ್ಲಿಪ್ ಆಗಿದೆ. ಹಾಗೂ ಭಾರದ ಡ್ರೆಸ್ ಹಾಕಿದ್ದ ಕಾರಣ ಆಯತಪ್ಪಿದ ತೆಪ್ಪ ಏಕಾಏಕಿ ಮಗುಚಿ ಬಿದ್ದಿದೆ. ಈಜುಬಾರದೆ ಚಂದ್ರು, ಶಶಿಕಲಾ ಮೃತಪಟ್ಟಿದ್ದಾರೆ. ಈ ಬಗ್ಗೆ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾವಿಕ ಮೂಗಪ್ಪ ಹಾಗೂ ಫೋಟೋಗ್ರಾಫರ್ ಕೀರ್ತಿ ಮೇಲೆ ಪ್ರಕರಣ ದಾಖಲಾಗಿದೆ. ಘಟನೆ ವೇಳೆ ಅಲ್ಲಿದ್ದ ಕೆಲ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಈ ಮಾಹಿತಿಯನ್ನು ನೀಡಿದ್ದಾರೆ.
ನದಿ ಬಳಿ ಬರುವವರ ಮೇಲೆ ನಿಗಾ: ಇನ್ನು ಘಟನೆ ಬಳಿಕ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ನದಿ ಬಳಿ ಬರುವವರ ಮೇಲೆ ನಿಗಾ ವಹಿಸಲು ಹಾಗೂ ಲೈಫ್ ಜಾಕೆಟ್ ಕಡ್ಡಾಯಗೊಳಿಸುವ ಸಂಬಂಧ ನೀರಾವರಿ ಇಲಾಖೆಗೆ ಪತ್ರ ಬರೆಯಲು ಎಸ್ ಪಿ ರಿಷ್ಯಂತ್ ಚಿಂತನೆ ನಡೆಸಿದ್ದಾರೆ. ತೆಪ್ಪ ನಡೆಸುವವರ ಮೇಲೂ ನಿಗಾ ಇಡಲಾಗುತ್ತೆ ಹಾಗೂ ತಕ್ಷಣವೇ ಈ ಬಗ್ಗೆ ಪತ್ರ ಬರೆಯುವುದಾಗಿ ಮೈಸೂರು ಜಿಲ್ಲಾ ಪೊಲೀಸ್ ಎಸ್ಪಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.