ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಎಂಟಿಸಿ ಆ್ಯಪ್! ಇದು MyBMTC ಅಲ್ಲ! Why ಬಿಎಂಟಿಸಿ ಆ್ಯಪ್?

ಬೆಂಗಳೂರು: ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಜನಸಾಮಾನ್ಯರಿಗೆ ಬಸ್ ಮಾರ್ಗ, ಸಮಯ, ಇನ್ನಿತರ ಮಾಹಿತಿಗಳನ್ನು ನೀಡುವ ಮಹದುದ್ದೇಶದಿಂದ ಆರಂಭವಾದ ‘ಮೈ ಬಿಎಂಟಿಸಿ ಮೊಬೈಲ್ ಆ್ಯಪ್’ ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದ ಬಸ್ಸಿನಂತಾಗಿದೆ! 2019ರ ಡಿಸೆಂಬರ್ 29ರಂದು ಬಿಡುಗಡೆಯಾದ ‘ಮೈ ಬಿಎಂಟಿಸಿ ಮೊಬೈಲ್ ಆ್ಯಪ್’ ಮೂಲಕ ಬಸ್ ವೇಳಾಪಟ್ಟಿ, ಬಸ್ ಆಗಮಿಸುವ ಸಮಯ, ಸಮೀಪದ ಬಸ್ ನಿಲ್ದಾಣ, ಮಾರ್ಗಗಳ ಸಂಖ್ಯೆ ಮುಂತಾದ ಅವಶ್ಯಕ ಮಾಹಿತಿಗಳನ್ನು ನೀಡುವುದಾಗಿ ಬಿಎಂಟಿಸಿ ಭರವಸೆ ನೀಡಿತ್ತು. ಅಷ್ಟೇ ಅಲ್ಲದೇ, 2020ರ ಜನವರಿ ವೇಳೆಗೆ ಐಫೋನ್ […]

ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಎಂಟಿಸಿ ಆ್ಯಪ್! ಇದು MyBMTC ಅಲ್ಲ! Why ಬಿಎಂಟಿಸಿ ಆ್ಯಪ್?
Follow us
ಸಾಧು ಶ್ರೀನಾಥ್​
|

Updated on:Nov 11, 2020 | 12:06 PM

ಬೆಂಗಳೂರು: ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಜನಸಾಮಾನ್ಯರಿಗೆ ಬಸ್ ಮಾರ್ಗ, ಸಮಯ, ಇನ್ನಿತರ ಮಾಹಿತಿಗಳನ್ನು ನೀಡುವ ಮಹದುದ್ದೇಶದಿಂದ ಆರಂಭವಾದ ‘ಮೈ ಬಿಎಂಟಿಸಿ ಮೊಬೈಲ್ ಆ್ಯಪ್’ ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದ ಬಸ್ಸಿನಂತಾಗಿದೆ!

2019ರ ಡಿಸೆಂಬರ್ 29ರಂದು ಬಿಡುಗಡೆಯಾದ ‘ಮೈ ಬಿಎಂಟಿಸಿ ಮೊಬೈಲ್ ಆ್ಯಪ್’ ಮೂಲಕ ಬಸ್ ವೇಳಾಪಟ್ಟಿ, ಬಸ್ ಆಗಮಿಸುವ ಸಮಯ, ಸಮೀಪದ ಬಸ್ ನಿಲ್ದಾಣ, ಮಾರ್ಗಗಳ ಸಂಖ್ಯೆ ಮುಂತಾದ ಅವಶ್ಯಕ ಮಾಹಿತಿಗಳನ್ನು ನೀಡುವುದಾಗಿ ಬಿಎಂಟಿಸಿ ಭರವಸೆ ನೀಡಿತ್ತು. ಅಷ್ಟೇ ಅಲ್ಲದೇ, 2020ರ ಜನವರಿ ವೇಳೆಗೆ ಐಫೋನ್ ಬಳಕೆದಾರರಿಗೂ ಆ್ಯಪ್ ಲಭ್ಯವಾಗಲಿದೆ ಎಂದು ತಿಳಿಸಿತ್ತು.

15 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿ ಮಾ. ನಿಹಾರ್ ಠಕ್ಕರ್ nihar thakkar ವಿನ್ಯಾಸಗೊಳಿಸಿದ್ದ ಆ್ಯಪ್ ಅನ್ನು ತೆಕ್ಕೆಗೆ ತೆಗೆದುಕೊಂಡಿದ್ದ ಬಿಎಂಟಿಸಿ, ಅದಕ್ಕೂ ಮುನ್ನ ಜುಲೈ 2019ರಲ್ಲಿ ಆತ ರಚಿಸಿದ್ದ ಆ್ಯಪ್ ಅನ್ನು ಭದ್ರತಾ ವಿಚಾರದ ಕಾರಣ ಸ್ಥಗಿತಗೊಳಿಸಿ ಹೊಸ ಆ್ಯಪ್ ಅನ್ನು ‘ಮೈ ಬಿಎಂಟಿಸಿ’ ಹೆಸರಿನೊಂದಿಗೆ ಅಧಿಕೃತಗೊಳಿಸಿತ್ತು.

ಸಮರ್ಪಕವಾಗಿ ಪ್ರತಿಕ್ರಿಯೆ ನೀಡದೆ ಜಾರಿಕೊಂಡ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅದಾದ ನಂತರ ಫೆಬ್ರವರಿ 2020ರಲ್ಲಿ ಅಪ್ಡೇಟ್ ಆಗಿರುವ ಮೈ ಬಿಎಂಟಿಸಿ ಅಧಿಕೃತ ಆ್ಯಪ್ ಸದ್ಯ ಬಳಸಲಾರದ ಸ್ಥಿತಿಯಲ್ಲಿದೆ. ಈಗಲೂ ಪ್ಲೇ ಸ್ಟೋರ್ನಲ್ಲಿ ಆ್ಯಪ್ ಲಭ್ಯವಿದೆಯಾದರೂ ಡೌನ್ಲೋಡ್ ಮಾಡಿಕೊಂಡ ನಂತರ ಯಾವ ಮಾಹಿತಿಯೂ ಸಿಗುವುದಿಲ್ಲ. ಈ ಕುರಿತು ಮಾಹಿತಿ ಪಡೆಯಲು ಟಿವಿ9 ಡಿಜಿಟಲ್ ತಂಡ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿಯವರನ್ನು ಸಂಪರ್ಕಿಸಲು ಯತ್ನಿಸಿತಾದರೂ ಅವರು ಸಮರ್ಪಕವಾಗಿ ಪ್ರತಿಕ್ರಿಯಿಸಲಿಲ್ಲ.

ಲಾಕ್ಡೌನ್ ನಂತರ ಜನ ಸಾಮಾನ್ಯರು ಬಿಎಂಟಿಸಿಯಲ್ಲಿ ಓಡಾಟ ಆರಂಭಿಸಿದ್ದು. ಪ್ರಸ್ತುತ ಸಂದರ್ಭದಲ್ಲಿ ಜನ ಸಂದಣಿ, ಬಸ್ ಸಮಯ, ಮಾರ್ಗ, ವೇಳಾಪಟ್ಟಿಯ ಮಾಹಿತಿ ನೀಡುವ ಆ್ಯಪ್ ನ ಅವಶ್ಯಕತೆ ಹೆಚ್ಚಿದೆ. ಆದರೆ, ಈ ಸಂದರ್ಭದಲ್ಲೇ ನಿರ್ವಹಣೆಯಿಲ್ಲದೆ ಪಾಳು ಬಿದ್ದಿರುವ ಆ್ಯಪ್ ಪರಿಸ್ಥಿತಿಯನ್ನು ನೋಡಿದರೆ ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ಮಾತು ನೆನಪಾಗುತ್ತದೆ.

Published On - 12:05 pm, Wed, 11 November 20

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್