ಕುಂದಾನಗರಿಯಲ್ಲಿ ಮಸಣದ ಹಾದಿಯಾಯ್ತು ನರಕ ಸದೃಶ
ಬೆಳಗಾವಿ: ಜಲಾವೃತವಾದ ರಸ್ತೆಯಲ್ಲಿ ಮಸಣಕ್ಕೆ ಮೃತ ವ್ಯಕ್ತಿಯೊಬ್ಬನ ಶವ ಸಾಗಿಸಲು ಆತನ ಸಂಬಂಧಿಕರು ಪರದಾಡಿದ ದೃಶ್ಯ ಬೆಳಗಾವಿಯ ಸಾಯಿನಗರದಲ್ಲಿ ಕಂಡು ಬಂತು. ಬಡಾವಣೆಯ ಬಳಿ ಇರುವ ಬಳ್ಳಾರಿ ನಾಲೆ ಧಾರಾಕಾರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದ್ದರಿಂದ, ನಾಲೆಯಿಂದ ಬಡವಾಣೆಗೆ ನೀರು ನುಗ್ಗಿದ ಪರಿಣಾಮ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಇದರಿಂದ ಮೃತದೇಹ ಸಾಗಿಸುವ ವಾಹನಕ್ಕೆ ತೆರಳಲು ಅಡ್ಡಿಯಾಯ್ತು. ಕೊನೆಗೆ ಮೃತನ ಸಂಬಂಧಿಕರೇ ಹೆಗಲುಕೊಟ್ಟು ಶವವನ್ನು ಸಾಗಿಸಿದರು.

ಬೆಳಗಾವಿ: ಜಲಾವೃತವಾದ ರಸ್ತೆಯಲ್ಲಿ ಮಸಣಕ್ಕೆ ಮೃತ ವ್ಯಕ್ತಿಯೊಬ್ಬನ ಶವ ಸಾಗಿಸಲು ಆತನ ಸಂಬಂಧಿಕರು ಪರದಾಡಿದ ದೃಶ್ಯ ಬೆಳಗಾವಿಯ ಸಾಯಿನಗರದಲ್ಲಿ ಕಂಡು ಬಂತು.

ಬಡಾವಣೆಯ ಬಳಿ ಇರುವ ಬಳ್ಳಾರಿ ನಾಲೆ ಧಾರಾಕಾರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದ್ದರಿಂದ, ನಾಲೆಯಿಂದ ಬಡವಾಣೆಗೆ ನೀರು ನುಗ್ಗಿದ ಪರಿಣಾಮ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು.
ಇದರಿಂದ ಮೃತದೇಹ ಸಾಗಿಸುವ ವಾಹನಕ್ಕೆ ತೆರಳಲು ಅಡ್ಡಿಯಾಯ್ತು. ಕೊನೆಗೆ ಮೃತನ ಸಂಬಂಧಿಕರೇ ಹೆಗಲುಕೊಟ್ಟು ಶವವನ್ನು ಸಾಗಿಸಿದರು.
Published On - 3:28 pm, Mon, 17 August 20



