ಜೈಲಿನಿಂದ ಹೊರ ಬಂದ ರಿಯಾ ಚಕ್ರವರ್ತಿ ಏನು ಮಾಡುತ್ತಿದ್ದಾರೆ ಗೊತ್ತಾ?

ಈ ಪ್ರಕರಣದ ವಿಚಾರಣೆ ನಡೆಸಿದ್ದ ಎನ್​ಸಿಬಿ ಅಧಿಕಾರಿಗಳು ರಿಯಾ ಅವರನ್ನು ಸೆಪ್ಟೆಂಬರ್​ 8ರಂದು ಬಂಧಿಸಿದ್ದರು.  ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್​ 7ರಂದು ಅವರಿಗೆ ಜಾಮೀನು ಸಿಕ್ಕಿತ್ತು.

ಜೈಲಿನಿಂದ ಹೊರ ಬಂದ ರಿಯಾ ಚಕ್ರವರ್ತಿ ಏನು ಮಾಡುತ್ತಿದ್ದಾರೆ ಗೊತ್ತಾ?
ಮನೆಯಿಂದ ಹೊರ ಬಂದ ರಿಯಾ ಚಕ್ರವರ್ತಿ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 03, 2021 | 5:47 PM

ಡ್ರಗ್​ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಸೇರಿದ್ದ ಸುಶಾಂತ್​ ಸಿಂಗ್​ ರಜಪೂತ್​ರ ಮಾಜಿ ಗೆಳತಿ ಹಾಗೂ ನಟಿ ರಿಯಾ ಚಕ್ರವರ್ತಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಜೈಲಿನಿಂದ ಹೊರ ಬಂದ ನಂತರ ಮನೆ ಸೇರಿದ್ದ ಅವರು ಈಗ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಸುಶಾಂತ್​ ಸಿಂಗ್ ಆತ್ಮಹತ್ಯೆ ನಂತರದಲ್ಲಿ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ಅವರ ಖಾತೆಯಿಂದ ರಿಯಾ ಹಣ ವರ್ಗಾವಣೆ ಮಾಡಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆಗೆ ಮುಂದಾದ ಜಾರಿ ನಿರ್ದೇಶನಲಾಯಕ್ಕೆ (ಇಡಿ) ಡ್ರಗ್​ ಜಾಲದ ವಾಸನೆ ಸಿಕ್ಕಿತ್ತು. ರಿಯಾ ಡ್ರಗ್​ ಡೀಲರ್​ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾದಕ ದ್ರವ್ಯ ನಿಯಂತ್ರಣ ಮಂಡಳಿಗೆ (ಎನ್​ಸಿಬಿ) ತಿಳಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಎನ್​ಸಿಬಿ ಅಧಿಕಾರಿಗಳು ರಿಯಾ ಅವರನ್ನು ಸೆಪ್ಟೆಂಬರ್​ 8ರಂದು ಬಂಧಿಸಿದ್ದರು.  ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್​ 7ರಂದು ಅವರಿಗೆ ಜಾಮೀನು ಸಿಕ್ಕಿತ್ತು. ಇದಾದ ನಂತರ ರಿಯಾ ತಮ್ಮ ಮನೆ ಸೇರಿದ್ದರು. ಈಗ ಹೊಸ ವರ್ಷ ಆರಂಭವಾದ ನಂತರದಲ್ಲಿ ರಿಯಾ ಮನೆಯಿಂದ ಹೊರ ಬಂದಿದ್ದಾರೆ. ಈ ಮೂಲಕ ಸುಮಾರು 3 ತಿಂಗಳು ಮನೆಯಲ್ಲೇ ಕಾಲ ಕಳೆದಿದ್ದಾರೆ.

ರಿಯಾ ಹಾಗೂ ಸಹೋದರ ಶೋವಿಕ್​ ಬಾಂದ್ರಾದ ನಿವಾಸದಿಂದ ಹೊರಗೆ ಕಾಣಿಸಿಕೊಂಡಿದ್ದಾರೆ. ಅವರು ತಮ್ಮನ ಜೊತೆ ವಾಕಿಂಗ್​ ನಡೆಸಿದ್ದಾರೆ.

ರಿಯಾ ಚಕ್ರವರ್ತಿ ಮುಕ್ತ, ಮುಕ್ತ, ಮುಕ್ತಾ.. ಸಿಕ್ತು ಷರತ್ತು ಬದ್ಧ ಜಾಮೀನು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada