ವಾಹನ ಸಂಚಾರಕ್ಕೆ ತೊಡರುಗಾಲು ಹಾಕಿದ ರಸ್ತೆಯಲ್ಲೇ ನಡೆದ ಕುರಿ ಸಂತೆ!

ವಾಹನ ಸಂಚಾರಕ್ಕೆ ತೊಡರುಗಾಲು ಹಾಕಿದ ರಸ್ತೆಯಲ್ಲೇ ನಡೆದ ಕುರಿ ಸಂತೆ!

ಬೆಂಗಳೂರು ಗ್ರಾಮಾಂತರ: ರಸ್ತೆಯಲ್ಲೇ ಕುರಿ ಸಂತೆ ನಡೆಸಿದ್ದರಿಂದ ಟ್ರಾಫಿಕ್ ​ಜಾಮ್ ಎದುರಾದ ಘಟನೆ ಜಿಲ್ಲೆಯ ನೆಲಮಂಗಲ ಪಟ್ಟಣದ ನೆಲಮಂಗಲ-ಸೊಂಡೆಕೊಪ್ಪ ರಸ್ತೆಯಲ್ಲಿ ಕಂಡುಬಂತು.

ಇದುವರೆಗೆ ಖಾಸಗಿ ಜಮೀನು ಒಂದರಲ್ಲಿ ಕುರಿ ಸಂತೆ ನಡೆಸಲಾಗುತ್ತಿತ್ತು. ಆದರೆ, ಜಮೀನಿನ ಮಾಲೀಕರು ಬೇಲಿ ಹಾಕಿದ್ದರ ಪರಿಣಾಮ ಬೇರೆಡೆ ಜಾಗವಿಲ್ಲದೆ ರೈತರು ರಸ್ತೆಯಲ್ಲೇ ಸಂತೆ ನಡೆಸ್ತಿರುವ ದೃಶ್ಯ ಕಂಡುಬಂತು. ಆದರೆ, ಕುರಿ ಸಂತೆಯಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಎದುರಾಯ್ತು.

ನೆಲಮಂಗಲ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯಿದ್ದರೂ ಸ್ಥಳ ನಿಗದಿಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಯಲ್ಲೇ ಕುರಿಸಂತೆ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ರೈತರಿಗೂ ಸಂಕಷ್ಟ ಆಗುವ ಜೊತೆಗೆ ಟ್ರಾಫಿಕ್ ​ಜಾಮ್​ನಿಂದ ಸಂಕಷ್ಟ ಸಹ ಉಂಟಾಗಿದೆ.

ಒಂದು ವೇಳೆ ಏನಾದರು ಅನಾಹುತ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಕಿಡಿಕಾರಿದ ರೈತರು ಮತ್ತು ಸ್ಥಳೀಯರು ರಸ್ತೆಯಲ್ಲಿ ಕಾಣಸಿಗದ ಸಂಚಾರಿ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದರು. ಜೊತೆಗೆ, ಕುರಿ ಸಂತೆಗೆ ಸ್ಥಳ ನಿಗದಿ ಮಾಡುವಂತೆ ನಗರಸಭೆಗೆ ಒತ್ತಾಯ ಸಹ ಮಾಡಿದ್ದಾರೆ.

Click on your DTH Provider to Add TV9 Kannada