
ಹಾಸನ: ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದೆ. ಈ ಪರಿಣಾಮ ಅನೇಕ ಅನಾಹುತಗಳಾಗುತ್ತಿವೆ. ಈ ನಡುವೆ ಹಾಸನದಲ್ಲಿ ಮಳೆಯಿಂದಾಗಿ ಕೆಲ ಮನೆಗಳಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ನಿನ್ನೆ ಸುರಿದ ಭಾರಿ ಮಳೆಗೆ ಹಾವುಗಳು ಮನೆಯೊಳಗೆ ನುಗ್ಗಿದ ಘಟನೆ ವಿದ್ಯಾನಗರದ ಮನೆಯೊಂದರಲ್ಲಿ ನಡೆದಿದೆ. ಇದನ್ನು ಕಂಡು ಜನ ಭಯಭೀತರಾಗಿದ್ದಾರೆ.
ವಿದ್ಯಾನಗರದ ದಿವ್ಯ ಎಂಬುವರ ಮನೆಯೊಳಗೆ ಕೊಳಕು ಮಂಡಲ ಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿ ಮನೆ ಮಂದಿ ಗಾಬರಿಗೊಂಡಿದ್ದಾರೆ. ಕೂಡಲೆ ಸ್ನೇಕ್ ಶೇಷಪ್ಪ ಹಾವು ರಕ್ಷಿಸಿ ಜನರ ಆತಂಕ ದೂರಮಾಡಿದ್ದಾರೆ. ಇನ್ನು ಮತ್ತೊಂದು ಕಡೆ ಜಯನಗರ ಬಡಾವಣೆಯ ಬೈಕ್ ಎಂಜಿನ್ ಒಳಗೆ ಅಡಗಿ ಕೂತು ಆತಂಕ ಸೃಷ್ಟಿಸಿದ್ದ ನಾಗರ ಹಾವನ್ನೂ ಸಹ ಸ್ನೇಕ್ ಶೇಷಪ್ಪ ರಕ್ಷಣೆ ಮಾಡಿದ್ದು, ಹಿಡಿದ ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.
Published On - 3:32 pm, Thu, 22 October 20