Decision Review System ವಿರುದ್ಧ ಕ್ರಿಕೆಟ್​ ದೇವರು ಕಿಡಿಕಿಡಿ, DRS ನೀತಿಯನ್ನೇ ರಿವ್ಯೂ ಮಾಡಿ ಎಂದ ತೆಂಡೂಲ್ಕರ್

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ 'ಅಂಪೈರ್ಸ್ ಕಾಲ್' ಆಸೀಸ್ ಆಟಗಾರರನ್ನ ಎರಡು ಬಾರಿ ರಕ್ಷಿಸಿತು. ಹೀಗಾಗಿ ಅಂಪೈರ್ಸ್ ಕಾಲ್ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಸಚಿನ್​ ಟ್ವಿಟ್​ ಮಾಡುವ ಮೂಲಕ ತಮ್ಮ ಅಸಮಾದಾನ ಹೊರಹಾಕಿದ್ದಾರೆ.

Decision Review System ವಿರುದ್ಧ ಕ್ರಿಕೆಟ್​ ದೇವರು ಕಿಡಿಕಿಡಿ, DRS ನೀತಿಯನ್ನೇ ರಿವ್ಯೂ ಮಾಡಿ ಎಂದ ತೆಂಡೂಲ್ಕರ್
ಔಟಾದ ನಿರಾಶೆಯಲ್ಲಿ ಸಚಿನ್​ ತೆಂಡೂಲ್ಕರ್​
Follow us
ಪೃಥ್ವಿಶಂಕರ
|

Updated on:Dec 28, 2020 | 12:39 PM

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) DRS ( Decision Review System )ನ್ನು ಮರು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ DRS ನಲ್ಲಿರುವ ನ್ಯೂನತೆಗೆಳ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಆನ್-ಫೀಲ್ಡ್ ಅಂಪೈರ್ ನಿರ್ಧಾರಗಳಿಂದ ಹೆಚ್ಚು ಸಂತ್ರಸ್ತರಾಗಿರುವ ತೆಂಡೂಲ್ಕರ್! ಈ ವಿಚಾರದ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಸ್ಟರ್​ ಬ್ಲಾಸ್ಟರ್​, ಆಟಗಾರರು DRS ಆರಿಸಿಕೊಳ್ಳಲು ಕಾರಣವೆಂದರೆ, ಅವರು ಆನ್-ಫೀಲ್ಡ್ ಅಂಪೈರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿರುತ್ತಾರೆ. ಹೀಗಾಗಿ ಡಿಆರ್​ಎಸ್ ವ್ಯವಸ್ಥೆಯನ್ನು, ಐಸಿಸಿ ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ವಿಶೇಷವಾಗಿ ‘ಅಂಪೈರ್ಸ್ ಕರೆ’ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕೆಂದು ಕೇಳಿಕೊಂಡಿದ್ದಾರೆ.

ಆನ್-ಫೀಲ್ಡ್ ಅಂಪೈರ್ ನಿರ್ಧಾರಗಳಿಂದ ಸಚಿನ್ ತೆಂಡೂಲ್ಕರ್ ಹೆಚ್ಚು ಸಂತ್ರಸ್ತರಾಗಿರುವುದು ಸತ್ಯದ ಮಾತು! ಅದರಲ್ಲೂ ತಾವು ಅದ್ಭುತ ಫಾರಂನಲ್ಲಿದ್ದು ಬ್ಯಾಟ್​ ಮಾಡುತ್ತಿದ್ದಾಗ  90s ನಲ್ಲಿ ಅಂಪೈರುಗಳ ಕೆಟ್ಟ ನಿರ್ಧಾರಗಳಿಂದ ಸಚಿನ್ ತೆಂಡೂಲ್ಕರ್ ಔಟ್​ ಆಗುತ್ತಿದ್ದ ಸಂದರ್ಭಗಳು ಅನೇಕವಿವೆ. ಇಲ್ಲವಾದಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯಲ್ಲಿ ಇನ್ನೂ ಅನೇಕ ಶತಕಗಳು ಸೇರ್ಪಡೆಯಾಗುತ್ತಿದ್ದವು.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ‘ಅಂಪೈರ್ಸ್ ಕಾಲ್’ ಆಸೀಸ್ ಆಟಗಾರರನ್ನ ಎರಡು ಬಾರಿ ರಕ್ಷಿಸಿತು. ಹೀಗಾಗಿ ಅಂಪೈರ್ಸ್ ಕಾಲ್ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಸಚಿನ್​ ಟ್ವಿಟ್​ ಮಾಡುವ ಮೂಲಕ ತಮ್ಮ ಅಸಮಾದಾನ ಹೊರಹಾಕಿದ್ದಾರೆ.

ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಜಸ್ಪ್ರಿತ್ ಬುಮ್ರಾ ಅವರ ಯಾರ್ಕರ್‌ ಎಸೆತವನ್ನು ಎದುರಿಸಿದ ಜೋ ಬರ್ನ್ಸ್, ಆ ಬಾಲನ್ನು ತಮ್ಮ ಕಾಲಿಗೆ ತಗುಲಿಸಿಕೊಂಡರು. ಹೀಗಾಗಿ ಟೀಂ ಇಂಡಿಯಾ ಔಟ್​ಗಾಗಿ ಅಂಪೈರ್ ಬಳಿ ಮನವಿ ಮಾಡಿತು. ಆದರೆ ಅಂಪೈರ್ ಅದನ್ನು ನಾಟ್ ಔಟ್​ ಎಂದು ತೀರ್ಪು ನೀಡಿದರು. ಬಳಿಕ ಭಾರತ DRS ತೆಗೆದುಕೊಂಡಿತು. DRSನಲ್ಲಿ ಜೋ ಬರ್ನ್ಸ್ ಔಟ್​ ಎಂಬುದು ಸಾಬೀತಾಗಿತ್ತು. ಆದರೆ ಅದು ಅಂಪೈರ್ಸ್ ಕಾಲ್ ಆಗಿದ್ದರಿಂದ ಜೋ ಬರ್ನ್ಸ್ ನಾಟ್​ಔಟಾಗಿ ಉಳಿದರು.

ಹಾಗೆಯೇ ಮಾರ್ನಸ್ ಲಾಬುಸ್ಚಾಗ್ನೆ ಕೂಡ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಔಟಾಗಿದ್ದರು. ಆದರೆ ಅಂಪೈರ್ ಅದನ್ನು ನಾಟ್ ಔಟ್​ ಎಂದು ಸಾರಿದರು. ಹೀಗಾಗಿ DRS ನಲ್ಲಿ ಔಟಾಗಿರುವುದು ಸ್ಪಷ್ಟವಾಗಿದ್ದರೂ, ಅದು ಅಂಪೈರ್​ ಕಾಲ್ ಆಗಿದ್ದರಿಂದ ಮಾರ್ನಸ್ ಲಾಬುಸ್ಚಾಗ್ನೆ ಜೀವದಾನ ಸಿಕ್ಕಿತು! ಅದು ಸಚಿನ್ ತೆಂಡೂಲ್ಕರ್ ಅವರ ಕೋಪಕ್ಕೆ ನೀರೆರೆಯಿತು.

India vs 2nd Test 3ನೇ ದಿನ: 131 ರನ್​ ಮುನ್ನಡೆ ಸಾಧಿಸಿದ ಭಾರತ, ಆಸಿಸ್​ಗೆ ಆರಂಭಿಕ ಆಘಾತ

Published On - 12:17 pm, Mon, 28 December 20

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ