ಪ್ರಶಾಂತ್ ನೀಲ್ ನಿರ್ದೇಶನದ, ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ‘ಸಾಲಾರ್’ ಸಿನಿಮಾ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿ ವಿಜಯ ಕಿರಗಂದೂರು ನಿರ್ಮಾಣ ಮಾಡಿರುವ ಈ ತೆಲುಗು ಸಿನಿಮಾ 2022 ರ ಏಪ್ರಿಲ್ 14ರಂದು ದೇಶಾದ್ಯಂತ ಕನ್ನಡ, ಹಿಂದಿ, ಮಲೆಯಾಳಂ, ತಮಿಳುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಾಲಾರ್ ಸಿನಿಮಾದ ಒಂದು ಹೊಸ ಪೋಸ್ಟರ್ನ್ನು ಇಂದು ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್, ಪ್ರಭಾಸ್, ನಟಿ ಶ್ರುತಿ ಹಾಸನ್ ಶೇರ್ ಮಾಡಿಕೊಂಡಿದ್ದಾರೆ.
2020ರ ಡಿಸೆಂಬರ್ನಲ್ಲಿ ಹೈದರಾಬಾದ್ನಲ್ಲಿ ಸಾಂಪ್ರಾದಾಯಿಕವಾಗಿ ಪೂಜೆ ಮಾಡುವ ಮೂಲಕ ಸಾಲಾರ್ ಸಿನಿಮಾ ಸೆಟ್ಟೇರಿತ್ತು. ಯಶಸ್ವಿ ಕೆಜಿಎಫ್ನ್ನು ನಿರ್ಮಾಣ ಮಾಡಿರುವ ಬ್ಯಾನರ್ನಡಿ, ಆ ಸಿನಿಮಾಗಳನ್ನು ನಿರ್ದೇಶನ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಸಾಲಾರ್ನ್ನು ನಿರ್ಮಾಣ ಮಾಡುತ್ತಿರುವುದು ಒಂದು ಕಡೆ ಕುತೂಹಲ ಹುಟ್ಟಿಸಿದ್ದರೆ, ಇನ್ನೊಂದೆಡೆ ಬಾಹುಬಲಿಯಂತಹ ಭರ್ಜರಿ ಹಿಟ್ ಸಿನಿಮಾ ಕೊಟ್ಟ ಸ್ಟಾರ್ ಪ್ರಭಾಸ್ ನಟಿಸುತ್ತಿರುವುದು ಇನ್ನಷ್ಟು ನಿರೀಕ್ಷೆಗೆ ಕಾರಣವಾಗಿದೆ.
ಏನಂತಾರೆ ಪ್ರಭಾಸ್, ಪ್ರಶಾಂತ್ ನೀಲ್?
ಸಾಲಾರ್ ಒಂದು ಸಂಪೂರ್ಣ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಪ್ರಭಾಸ್ ತುಂಬ ಪವರ್ಫುಲ್ ಆಗಿ ಮಿಂಚಲಿದ್ದಾರೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಇನ್ನು ಸಾಲಾರ್ ಬಗ್ಗೆ ಮಾತನಾಡಿದ ಪ್ರಭಾಸ್, ನಾನು ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಮತ್ತು ಇದರಲ್ಲಿನ ನನ್ನ ಲುಕ್ನ್ನು ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಲು ತುಂಬ ಕಾತರಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಬಾಲಿವುಡ್ ನಟ ಜಾನ್ ಅಬ್ರಾಹಂ ಜತೆ ಸಾಲಾರ್ ಟೀಂ ಮಾತುಕತೆ ನಡೆಸುತ್ತಿದ್ದು, ಅವರು ಒಪ್ಪಿಕೊಂಡರೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
????????? Worldwide #Salaar On ????? ??, ???? ?
We can't wait to celebrate with you all ?#Salaar14Apr22#Prabhas @prashanth_neel @VKiragandur @hombalefilms @shrutihaasan @BasrurRavi @bhuvangowda84 pic.twitter.com/BmWzzbOy1s
— Prashanth Neel (@prashanth_neel) February 28, 2021
????????? Worldwide #Salaar On ????? ??, ???? ?
We can't wait to celebrate with you all ?#Salaar14Apr22#Prabhas @prashanth_neel @VKiragandur @hombalefilms @shrutihaasan @BasrurRavi @bhuvangowda84 pic.twitter.com/tQ3B1jbdt1
— Hombale Films (@hombalefilms) February 28, 2021
Published On - 5:15 pm, Sun, 28 February 21