Self Love: ನಿಮ್ಮನ್ನು ನೀವು ಅಗಾಧವಾಗಿ ಪ್ರೀತಿಸಿಕೊಂಡರೆ ಮಾತ್ರ ಈ ಜಗತ್ತನ್ನು ಪ್ರೀತಿಸುವುದು ಸುಲಭ

|

Updated on: Feb 26, 2021 | 3:46 PM

Love Yourself: ನಮ್ಮ ಮನಸ್ಸು ಪ್ರೀತಿಭರಿತವಾಗಿದ್ದರೆ ಮಾತ್ರ ಇನ್ನೊಬ್ಬರನ್ನು ನಿಸ್ವಾಥ೯ದಿಂದ ಪ್ರೀತಿಸಲು ಸಾಧ್ಯ. ಮೂಲಭೂತವಾಗಿ ನಮ್ಮನ್ನು ನಾವೆೇ ಪ್ರೀತಿಪೂರ್ವಕವಾಗಿ, ಗೌರವಾನ್ವಿತವಾಗಿ, ಕಾಳಜಿಪೂವ೯ಕವಾಗಿ ನೋಡಿಕೊ೦ಡಷ್ಟು ನಮ್ಮ ಮನಸ್ಸು ಮತ್ತೊಬ್ಬರನ್ನು ಪ್ರೀತಿಸುವತ್ತ ಗಮನ ಹರಿಸುತ್ತದೆ.

Self Love: ನಿಮ್ಮನ್ನು ನೀವು ಅಗಾಧವಾಗಿ ಪ್ರೀತಿಸಿಕೊಂಡರೆ ಮಾತ್ರ ಈ ಜಗತ್ತನ್ನು ಪ್ರೀತಿಸುವುದು ಸುಲಭ
ಸಂಗ್ರಹ ಚಿತ್ರ
Follow us on

ಅಬ್ಬಾ! ಈ ಪ್ರೀತಿಯೆ೦ಬುದು ಮೈ ಝುಮ್ಮೆನಿಸುವ ಒ೦ದು ಸುಮಧುರ ಅನುಭವ. ಇದು ಮಾಯೆಯೋ, ಮೋಡಿಯೋ ಅರ್ಥವಾಗದು. ಆದರೆ, ಇದನ್ನು ಅನುಭವಿಸಿದವರಿಗೆ ಮಾತ್ರ ಇದರ ಮರ್ಮವೇನೆ೦ದು ಅರಿವಾಗಿರುತ್ತದೆ. ಅನುಭವಿಸಿದಷ್ಟು ಸುಖ, ವ್ಯಕ್ತಪಡಿಸಿದಷ್ಟು ತೃಪ್ತಿ. ಆದರೆ, ಪ್ರೀತಿ ಎಂದಾಕ್ಷಣ ಅದು ಗಂಡು, ಹೆಣ್ಣಿನ ಮಧ್ಯೆ ಅಥವಾ ಪ್ರೇಮಿಗಳ ದಿನಾಚೆಣೆಗೆ ಸೀಮಿತ ಎನ್ನುವಂತೆ ಕೆಲವರು ಪರಿಗಣಿಸುತ್ತಾರೆ. ಆದರೆ ವಾಸ್ತವದಲ್ಲಿ ಪ್ರೀತಿ ಎನ್ನುವ ಮಧುರ ಸಂಗತಿ ಆಚರಣೆಗಾಗಲೀ ಪ್ರೇಮಿಗಳಿಗಾಗಲೀ ಮಾತ್ರ ಸೀಮಿತವಾಗದೆ ಎಲ್ಲಾ ಬಗೆಯ ಸ೦ಬಂಧಗಳಿಗೂ ಅವಶ್ಯಕ ಎನ್ನುವ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು.

ಹಾಗಾಗಿ ಪ್ರೀತಿಯನ್ನು ಯಾವುದೋ ಒಂದಕ್ಕೆ ಸೀಮಿತಗೊಳಿಸಿಕೊಳ್ಳದೇ ವಿಶಾಲ ಮನೊಭಾವದಿಮದ ನೋಡಬೇಕು. ಸಂಗಾತಿ ಇಲ್ಲದೇ ಒ೦ಟಿಯಾಗಿರುವವರೂ ನಿರಾಶೆಗೊಳ್ಳುವ ಬದಲು, ಅಪ್ಪ, ಅಮ್ಮ, ಅಕ್ಕ, ತ೦ಗಿ, ಅಣ್ಣ, ತಮ್ಮ, ಆಪ್ತ ಸ್ನೇಹಿತ, ಆತ್ಮಿಯ ವ್ಯಕ್ತಿ ಹೀಗೆ ಮನಸ್ಸಿಗೆ ಹತ್ತಿರಾದವರಲ್ಲಿ ಅದನ್ನು ಕಾಣುತ್ತಾ, ಅನುಭವಿಸುವುದನ್ನು ಕಂಡುಕೊಳ್ಳಬೇಕು. ಮೇಲಾಗಿ ನಮ್ಮನ್ನು ನಾವು ಪ್ರೀತಿಸಲು ಕಲಿತುಕೊಳ್ಳಬೇಕು. ಆಗ ಮಾತ್ರ ಬದುಕಿನಲ್ಲಿ ನಿಜವಾದ ಖುಷಿ ಕಾಣಬಹುದು.

Fill your cup before pouring it to others ಎಂಬ ಮಾತಿನಂತೆ ನಮ್ಮ ಮನಸ್ಸು ಪ್ರೀತಿಭರಿತವಾಗಿದ್ದರೆ ಮಾತ್ರ ಇನ್ನೊಬ್ಬರನ್ನು ನಿಸ್ವಾಥ೯ದಿಂದ ಪ್ರೀತಿಸಲು ಸಾಧ್ಯ. ಮೂಲಭೂತವಾಗಿ ನಮ್ಮನ್ನು ನಾವೆೇ ಪ್ರೀತಿಪೂರ್ವಕವಾಗಿ, ಗೌರವಾನ್ವಿತವಾಗಿ, ಕಾಳಜಿಪೂವ೯ಕವಾಗಿ ನೋಡಿಕೊ೦ಡಷ್ಟು ನಮ್ಮ ಮನಸ್ಸು ಮತ್ತೊಬ್ಬರನ್ನು ಪ್ರೀತಿಸುವತ್ತ ಗಮನ ಹರಿಸುತ್ತದೆ. ಹೀಗಾಗಿ ನಮ್ಮೊಳಗಿನ ಸಂಗಾತಿಯನ್ನು ಹುಡುಕಿಕೊಂಡು, ಆ ಸ೦ಗಾತಿಗೊ೦ದು ಕೃತಜ್ಞತೆ ಸಲ್ಲಿಸಿ, ನಿಜ ಪ್ರೀತಿಯನ್ನು ಹುಡುಕಿಕೊಳ್ಳಬೇಕು.

ನಮ್ಮನ್ನು ನಾವು ಪ್ರೀತಿಸಲು ಅನುಸರಿಸಲೇಬೇಕಾದ ಕೆಲ ವಿಚಾರಗಳು

  1. ಮೊದಲಿಗೆ ನನ್ನನ್ನು ನಾನು ಪ್ರೀತಿಸುತ್ತೇನೆ, ನನ್ನ ಕಾಳಜಿ ನಾನೇ ತೆಗೆದುಕೊಳ್ಳುತ್ತೇನೆ
  2. ನನ್ನನ್ನು ನಾನು ಪರಿಪೂರ್ಣವಾಗಿ ಅರ್ಥ ಮಾಡಿಕೊ೦ಡು, ನನ್ನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಗೌರವದಿಂದ ಒಪ್ಪಿಕೊಳ್ಳುತ್ತೇನೆ
  3. ನಾನು ತಪ್ಪು ಮಾಡಿದಾಗ ಅಥವಾ ಸೋತಾಗ, ನೀರೀಕ್ಷೆಗಳನ್ನು ನೆರವೇರಿಸದಿದ್ದಾಗ, ಅಪಮಾನಗಳಿಗೀಡಾದಾಗ, ನನ್ನನ್ನು ನಾನು ಹೆಚ್ಚು ನಿ೦ದಿಸಿಕೊಳ್ಳದೆ ತಿದ್ದುಕೊಳ್ಳಲು ಪ್ರಯತ್ನ ಪಡುತ್ತೇನೆ.
  4. ನನ್ನ ದೈಹಿಕ ಹಾಗೂ ಮಾನಸಿಕ ಆರೊಗ್ಯ ಕಾಪಾಡಿಕೊಳ್ಳುವುದಕ್ಕೆ ಬದ್ಧನಾಗಿರುತ್ತೇನೆ.
  5. ಸಂಬಂಧಗಳಲ್ಲಿ ಸ್ವಯಂಪ್ರೆೇರಿತ ಗಡಿಗಳನ್ನು ನಿಗದಿಪಡಿಸಿ ಬೇರೆಯವರನ್ನು ಗೌರವಿಸುತ್ತೇನೆ, ಪ್ರೀತಿಸುತ್ತೇನೆ ಹಾಗೂ ಅವರಿಗೆ ಸ್ಪಂದಿಸುತ್ತೇನೆ. ಹಾಗೆಯೇ ನನ್ನ ಮನಸ್ಸು, ಭಾವನೆ, ಅಭಿಪ್ರಾಯ, ಇಷ್ಟ, ಕಷ್ಟಗಳು, ಅಗತ್ಯಗಳಿಗೆ ನಾನು ಬದ್ಧನಾಗಿರುತ್ತೇನೆ. ನನಗೆ ಅಗೌರವ ಅಥವಾ ನೋವುಂಟಾದಲ್ಲಿ, ನಾನು ಎಚ್ಚರಗೊಂಡು ನನನ್ನು ನಾನೇ ರಕ್ಷಿಸಿಕೊಳ್ಳುತ್ತೇನೆ.

ನಮಗೆ ನಾವೇ ಕೊಟ್ಟುಕೊಳ್ಳಬೇಕಾದ ಉಡುಗೊರೆಗಳು

  1. ನಿಮಗೆ ಅತ್ಯಂತ ಪ್ರಿಯವಾದ ವಸ್ತು ಯಾವುದೋ ಅದನ್ನು ನಿಮಗೆ ನೀವೇ ಉಡುಗೊರೆಯಂತೆ ಕೊಟ್ಟುಕೊಳ್ಳಿ. ನಿಮಗಿಷ್ಟವಾದ ತಾಣಕ್ಕೆ ಹೋಗಬೇಕೆನಿಸಿದರೆ ಹೋಗಿ, ಇಷ್ಟವಾದದ್ದನ್ನು ತಿನ್ನಬೇಕೆನಿಸಿದಾಗ ತಿನ್ನಿ. ಒಟ್ಟಾರೆ, ನಿಮ್ಮ ಆಸೆಗಳನ್ನು ಬಲಿಕೊಡಬೇಡಿ
  2. ನಿಮಗೊಂದು ಸಕಾರಾತ್ಮಕವಾದ, ಉತ್ತೇಜನಪೂರಕವಾದ, ಹೆಮ್ಮೆಯ, ನಲ್ಮೆಯ ಪತ್ರ ಬರೆದುಕೊಳ್ಳುತ್ತಿರಿ
  3. ನಿಮ್ಮ ಮನಸ್ಸನ್ನು ಪ್ರಫುಲ್ಲವಾಗಿರಲು ನಿಮ್ಮ ದಿನವನ್ನು ದೇಹ ಮತ್ತು ಮನಸ್ಸಿಗೆ ವಿಶ್ರಾ೦ತಿ ಸಿಗುವ ಚಟುವಟಿಕೆಗಳಿಂದ ಪ್ರಾರಂಭ ಮಾಡಿ
    ಸಕಾರಾತ್ಮಕ ಸ್ವಯಂ ಮಾತು, ಚರ್ಚೆ, ಪ್ರಾಮಣಿಕವಾದ ಸ್ವಪ್ರಶ೦ಸೆ, ನಿಮ್ಮ ವ್ಯಕ್ತಿತ್ವ, ಸಾಮರ್ಥ್ಯ, ಅಭಿಪ್ರಾಯ, ಸಾಧನೆಯ ಬಗ್ಗೆ ಹೆಮ್ಮೆ, ಉತ್ತೆೇಜಕರವಾದ ಮಾತನ್ನು ನಿಮಗೆ ನೀವೇ ಹೇಳಿಕೊಳ್ಳಿ ಅಥವಾ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ
  4. ನಿಮಗೆ ಅನುಕೂಲಕರವಾಗುವಂತಹ ಯಾವುದೇ ಕೆಲಸ ಮಾಡಿದಾಗ ನಿಮ್ಮ ಮನಸ್ಸಿಗೊಂದು ಧನ್ಯವಾದ ಹೇಳಿಕೊಳ್ಳಿ
  5. ಯಾವುದೇ ಮಾನಸಿಕ ಸಮಸ್ಯೆ, ಉದ್ವೇಗ, ದುಗುಡ, ತಳಮಳಗಳಿದ್ದರೆ ನಿವಾರಿಸಿಕೊಳ್ಳಲು ಗಮನ ನೀಡಿ
  6. ಪ್ರತಿನಿತ್ಯ ಒಂದೇ ತೆರನಾದ ಕೆಲಸ ಕಾರ್ಯಗಳಿಂದ ಬೇಸರ ಮೂಡಿದ್ದರೆ ವಿಶ್ರಾಂತಿಗಾಗಿ ರಜೆ ತೆಗೆದುಕೊಳ್ಳಿ
  7. ಯಾವುದಾದರೂ ವಿಚಾರದಲ್ಲಿ ಅತಿಯಾದ ಹೆದರಿಕೆಯಿದ್ದರೆ ಅದನ್ನು ಹಾಗೆಯೇ ಬಿಡುವ ಬದಲು ಪರಿಹಾರಗಳನ್ನು ಯೋಚಿಸಿ, ಕಾರ್ಯಗತಗೊಳಿಸಿಕೊಳ್ಳಿ

ಹೊರಗಿನ ಜಗತ್ತನ್ನು ಪ್ರೀತಿಸುತ್ತಾ ನಿಮ್ಮೊಳಗನ್ನು ಅತಿಯಾಗಿ ಪ್ರೀತಿಸಿಕೊಳ್ಳಿ. ಇದು ನಿಮ್ಮ ಆತ್ಮರಕ್ಷಣೆ, ಆತ್ಮವಿಶ್ವಾಸ, ಆತ್ಮಗೌರವವನ್ನು ಹೆಚ್ಚಿಸಲು ಒಂದು ಪರಿಣಾಮಕಾರಿಯಾದ ಸೂತ್ರ. ಯಾವುದೇ ಕಾರಣಕ್ಕೂ ಇದನ್ನು ಸ್ವಾರ್ಥವೆಂದು ಎಣಿಸಿಕೊಂಡು ನಿಮ್ಮನ್ನು ನೀವು ಪ್ರೀತಿಸಲು ಹಿಂದೇಟು ಹಾಕಬೇಡಿ.

ಇದನ್ನೂ ಓದಿ: 
ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..

ಪರೀಕ್ಷೆಯ ಸನಿಹದಲ್ಲಿರುವ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಈ ಆಹಾರ ಪದ್ಧತಿ ಮತ್ತು ಜೀವನಶೈಲಿ ಸಹಕಾರಿ