ದುಬೈನಲ್ಲಿ ಶಾರುಖ್ ಖಾನ್​​ ಸಿನಿಮಾ ಶೂಟಿಂಗ್​: ಲೀಕ್​ ಆಯ್ತು ‘ಪಠಾಣ್’​ ಸಿನಿಮಾ ದೃಶ್ಯಗಳು!

ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್​ ಇರಲಿದೆಯಂತೆ. ಇದಕ್ಕೆ ಪೂರಕಾವಾಗಿದೆ ವೈರಲ್​ ಆದ ದೃಶ್ಯಗಳು. ವೈರಲ್​ ಆದ ಫೋಟೋ ಹಾಗೂ ದೃಶ್ಯಗಳಲ್ಲಿ ಶಾರುಖ್​ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ.

ದುಬೈನಲ್ಲಿ ಶಾರುಖ್ ಖಾನ್​​ ಸಿನಿಮಾ ಶೂಟಿಂಗ್​: ಲೀಕ್​ ಆಯ್ತು ಪಠಾಣ್​ ಸಿನಿಮಾ ದೃಶ್ಯಗಳು!
ಪಠಾಣ್​ ಚಿತ್ರದ ಶೂಟಿಂಗ್​ ದೃಶ್ಯ
Edited By: ಸಾಧು ಶ್ರೀನಾಥ್​

Updated on: Jan 30, 2021 | 3:55 PM

‘ಜಿರೋ’ ಸಿನಿಮಾ ತೆರೆ ಕಂಡು ಎರಡು ವರ್ಷಗಳೇ ಕಳೆದಿವೆ. ಸಾಲು ಸಾಲು ಸಿನಿಮಾಗಳು ಸೋಲಿನಿಂದ ಬೇಸತ್ತಿದ್ದ ಶಾರುಖ್​ ಖಾನ್​ ಎರಡು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಪಠಾಣ್​ ಸಿನಿಮಾ ಮೂಲಕ ಮತ್ತೆ ಅವರು ಕಂಬ್ಯಾಕ್​ ಮಾಡಿದ್ದಾರೆ. ಸದ್ಯ, ದುಬೈನಲ್ಲಿ ಶಾರುಖ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೌದು, 2013ರಲ್ಲಿ ತೆರೆಗೆ ಬಂದಿದ್ದ ಚೆನ್ನೈ ಎಕ್ಸ್​ಪ್ರೆಸ್​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಹ್ಯಾಪ್ಪಿ ನ್ಯೂ ಇಯರ್​ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದ್ದರೂ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ನಂತರ ತೆರೆಕಂಡ ಎಲ್ಲ ಚಿತ್ರಗಳೂ ನೆಲ ಕಚ್ಚಿದ್ದವು. ಈಗ ಶಾರುಖ್​ ಪಠಾಣ್​ ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಿದ್ಧರಾಗುತ್ತಿದೆ.

ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್​ ಇರಲಿದೆಯಂತೆ. ಇದಕ್ಕೆ ಪೂರಕಾವಾಗಿದೆ ವೈರಲ್​ ಆದ ದೃಶ್ಯಗಳು. ವೈರಲ್​ ಆದ ಫೋಟೋ ಹಾಗೂ ದೃಶ್ಯಗಳಲ್ಲಿ ಶಾರುಖ್​ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ.

ಸಿದ್ಧಾರ್ಥ್​ ಆನಂದ್ ನಿರ್ದೇಶನ ಮಾಡುತ್ತಿರುವ ‘ಪಠಾಣ್​’ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಜಾನ್​ ಅಬ್ರಹಾಂ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ  ಶಾರುಖ್​ ಅವರದ್ದು ನೆಗೆಟಿವ್​ ಪಾತ್ರವಂತೆ.

KGF Chapter 2 ಜುಲೈ 16ರಂದೇ ತೆರೆ ಕಾಣ್ತಿರೋದೇಕೆ? ಆ ದಿನಕ್ಕೇನಾದರೂ ಇದೆಯಾ ವಿಶೇಷತೆ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us