ಬಾಗಲಕೋಟೆ: ರಸ್ತೆ ಬದಿ ಸಾಗುತ್ತಿದ್ದ ಕುರಿಗಳಿಗೆ ಕ್ಯಾಂಟರ್ ಡಿಕ್ಕಿ, 10 ಕುರಿ ಸಾವು
ಬಾಗಲಕೋಟೆ: ಕುರಿಗಳಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಹತ್ತು ಕುರಿಗಳು ಸಾವನಪ್ಪಿದ್ದು, 20 ಕುರಿಗಳಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದ ಬಳಿ ನಡೆದಿದೆ. ಬೂದಿನಗಡ ಗ್ರಾಮದ ಸಿದ್ದಪ್ಪ ನಿಂಬಲಗುಂದಿ ಎಂಬುವವರಿಗೆ ಈ ಕುರಿಗಳು ಸೇರಿದ್ದು, ಕ್ಯಾಂಟರ್ ಚಾಲಕ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದರಿಂದ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಸಿದ್ದಪ್ಪನ ಹತ್ತು ಕುರಿಗಳು ಸಾವನ್ನಪ್ಪಿದ್ದು, 20 ಕುರಿಗಳಿಗೆ ಗಾಯಗಳಾಗಿವೆ.
ಬಾಗಲಕೋಟೆ: ಕುರಿಗಳಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಹತ್ತು ಕುರಿಗಳು ಸಾವನಪ್ಪಿದ್ದು, 20 ಕುರಿಗಳಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದ ಬಳಿ ನಡೆದಿದೆ.
ಬೂದಿನಗಡ ಗ್ರಾಮದ ಸಿದ್ದಪ್ಪ ನಿಂಬಲಗುಂದಿ ಎಂಬುವವರಿಗೆ ಈ ಕುರಿಗಳು ಸೇರಿದ್ದು, ಕ್ಯಾಂಟರ್ ಚಾಲಕ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದರಿಂದ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಸಿದ್ದಪ್ಪನ ಹತ್ತು ಕುರಿಗಳು ಸಾವನ್ನಪ್ಪಿದ್ದು, 20 ಕುರಿಗಳಿಗೆ ಗಾಯಗಳಾಗಿವೆ.