ಪ್ರವಾಹದ ಅಬ್ಬರದ ನಡುವೆ ಭರ್ಜರಿ ಖಾಕಿ ಲಂಚಾವತಾರ -ವಿಜಯಪುರ ಗ್ರಾಮಸ್ಥರ ಆರೋಪ

ವಿಜಯಪುರ: ಮಹಾರಾಷ್ಟ್ರದ ಉಜನಿ ಮತ್ತು ಮೀರ್ ಜಲಾಶಯದಿಂದ ಭೀಮಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿದ್ದು, ನದಿ ವ್ಯಾಪ್ತಿಯಲ್ಲಿದ್ದ 8 ಬ್ಯಾರೇಜ್‌ಗಳು ಜಲಾವೃತವಾಗಿವೆ. ಅಂದಾಜು 25 ರಿಂದ 30 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಾನಾಂತರ ಬ್ಯಾರೇಜ್​ಗಳಾದ ಭಂಡಾರ ಕವಟೆ, ದಸೂರ, ಉಮರಜ್, ಉಮರಾಣಿ, ಚಣೆಗಾಂವ್, ಹಿಂಗಣಿ, ಧೂಳಖೇಡ್, ಸೊನ್ನ ಬ್ಯಾರೇಜ್​ಗಳು ಜಲಾವೃತವಾಗಿವೆ. ಇದೀಗ, ಬ್ಯಾರೇಜ್ ಮೂಲಕ ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವೆ ಇದ್ದ ಸಂಪರ್ಕ ಕಟ್ ಆಗಿದೆ. ನೀರಿನ ರಭಸ ಹೆಚ್ಚಾಗಿರುವುದರಿಂದ ರೈತರ […]

ಪ್ರವಾಹದ ಅಬ್ಬರದ ನಡುವೆ ಭರ್ಜರಿ ಖಾಕಿ ಲಂಚಾವತಾರ -ವಿಜಯಪುರ ಗ್ರಾಮಸ್ಥರ ಆರೋಪ
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Sep 20, 2020 | 3:06 PM

ವಿಜಯಪುರ: ಮಹಾರಾಷ್ಟ್ರದ ಉಜನಿ ಮತ್ತು ಮೀರ್ ಜಲಾಶಯದಿಂದ ಭೀಮಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿದ್ದು, ನದಿ ವ್ಯಾಪ್ತಿಯಲ್ಲಿದ್ದ 8 ಬ್ಯಾರೇಜ್‌ಗಳು ಜಲಾವೃತವಾಗಿವೆ.

ಅಂದಾಜು 25 ರಿಂದ 30 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಾನಾಂತರ ಬ್ಯಾರೇಜ್​ಗಳಾದ ಭಂಡಾರ ಕವಟೆ, ದಸೂರ, ಉಮರಜ್, ಉಮರಾಣಿ, ಚಣೆಗಾಂವ್, ಹಿಂಗಣಿ, ಧೂಳಖೇಡ್, ಸೊನ್ನ ಬ್ಯಾರೇಜ್​ಗಳು ಜಲಾವೃತವಾಗಿವೆ.

ಇದೀಗ, ಬ್ಯಾರೇಜ್ ಮೂಲಕ ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವೆ ಇದ್ದ ಸಂಪರ್ಕ ಕಟ್ ಆಗಿದೆ. ನೀರಿನ ರಭಸ ಹೆಚ್ಚಾಗಿರುವುದರಿಂದ ರೈತರ ಪಂಪ್​ಸೆಟ್​ಗಳು ಹಾಗೂ ಪೈಪ್​ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಈಗಾಗಲೇ ಜಲಾವೃತವಾದ ಬ್ಯಾರೇಜ್ ಮೇಲೆ ವಾಹನ ಸಂಚಾರ ಸಹ ಸ್ಥಗಿತಗೊಳಿಸಲಾಗಿದೆ.

ಕಳೆದ ಒಂದು ವಾರದಲ್ಲಿ ಬ್ಯಾರೇಜ್​ಗಳ ಮೇಲೆ ವಾಹನ ಸಂಚರಿಸಲು ಹೋಗಿ ಈಗಾಗಲೇ ಇಬ್ಬರು ಕೊಚ್ಚಿ ಹೋಗಿದ್ದಾರೆ. ಹೀಗಾಗಿ, ಮಳೆಗಾಲದಲ್ಲಿ ಬ್ಯಾರೇಜ್ ಮೇಲಿನ ಸಂಚಾರ ನಿರ್ಬಂಧಿಸಲು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ. ಜೊತೆಗೆ, ಜಲಾವೃತವಾದ ಬ್ಯಾರೇಜ್ ಮೇಲೆ ವಾಹನಗಳನ್ನ ಬಿಡಲು ಮಹಾರಾಷ್ಟ್ರ ಪೊಲೀಸರು ಲಂಚ ತೆಗೆದುಕೊಳ್ಳುತ್ತಾರೆ ಎಂದು ಸ್ಥಳಿಯರು ಆರೋಪ ಮಾಡಿದ್ದಾರೆ.

ಕಲಬುರಗಿಯಲ್ಲಿ ಸೇತುವೆ ಮುಳುಗಡೆ ಇತ್ತ, ಭೀಮಾ ನದಿಯ ಹರಿವು ಹೆಚ್ಚಾದಂತೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಮತ್ತು ಘತ್ತರಗಿ ಗ್ರಾಮಗಳು ಮುಳುಗುವ ಹಂತಕ್ಕೆ ತಲುಪಿವೆ. ಅಲ್ಲದೆ, ಈಗಾಗಲೇ ಘತ್ತರಗಿ ಮತ್ತು ಗಾಣಗಾಪುರದ ಸೇತುವೆಗಳು ಸಹ ಮುಳುಗಡೆಯಾಗಿವೆ. ಭೀಮಾ ನದಿಗೆ ಸೊನ್ನ ಬ್ಯಾರೇಜ್​ನಿಂದ ಒಂದು ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ.

ಸಂಗಮ ಕ್ಷೇತ್ರಕ್ಕೆ ಎದುರಾಯ್ತು ಮುಳುಗಡೆ ಭೀತಿ ಭಾರಿ ಮಳೆ ಹಿನ್ನೆಲೆಯಲ್ಲಿ ಸೊನ್ನ ಬ್ಯಾರೇಜ್​ನಿಂದ ಭೀಮಾ ನದಿಗೆ 1.20 ಲಕ್ಷ ಕ್ಯೂಸೆಕ್​​​ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿರುವ ಸಂಗಮ ಕ್ಷೇತ್ರಕ್ಕೆ ಮುಳುಗಡೆ ಭೀತಿ ಎದುರಾಗಿದೆ.