AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ದುಡ್ಡು: ಲಕ್ಷ್ಮಿ ಪೂಜೆಗೆಂದು ಇಡುತ್ತಿದ್ದ ಹಣವನ್ನು ಕದ್ದೊಯ್ದ ಖದೀಮರು, ಯಾವೂರಲ್ಲಿ?

ದಾವಣಗೆರೆ: ದೇವರ ದುಡ್ಡನ್ನು ಕದಿಯಲೇಬೇಕು ಎಂದು ಗಟ್ಟಿಮನಸ್ಸು ಮಾಡಿದ ಕಳ್ಳರಿಗೆ ಭಯ ಅಥವಾ ಪಾಪಪ್ರಜ್ಞೆ ಕಾಡುವುದಿಲ್ಲವಂತೆ. ಹಾಗಾಗಿ, ದೇವರ ಹುಂಡಿ ಮತ್ತು ಚಿನ್ನಾಭರಣಗಳನ್ನ ಕದ್ದರೂ ಹಾಯಾಗಿ ನಿದ್ರಿಸುತ್ತಾರಂತೆ. ಇದೀಗ, ಪೂಜೆಗೆ ಇಡುತ್ತಿದ್ದ ಹಣವನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಪಟ್ಟಣದ ವಿನೋಬನಗರದ 3ನೇ ಮುಖ್ಯರಸ್ತೆಯಲ್ಲಿ ನಡೆದಿದೆ. KSRTC ಚಾಲಕ ಅನಿಲ್ ಕುಮಾರ್ ಎಂಬುವವರ ಮನೆಯಲ್ಲಿ ದೇವರಿಗೆ ಇಟ್ಟಿದ್ದ ಹಣವನ್ನು ಖದೀಮರು ಕದ್ದಿದ್ದಾರೆ. ಪ್ರತಿ ವರ್ಷ ಲಕ್ಷ್ಮಿ ಪೂಜೆಗೆ ಅನಿಲ್​ ಕುಮಾರ್​ ಕುಟುಂಬ ಹತ್ತು ಸಾವಿರ ರೂಪಾಯಿ ನಗದನ್ನು […]

ದೇವರ ದುಡ್ಡು: ಲಕ್ಷ್ಮಿ ಪೂಜೆಗೆಂದು ಇಡುತ್ತಿದ್ದ ಹಣವನ್ನು ಕದ್ದೊಯ್ದ ಖದೀಮರು, ಯಾವೂರಲ್ಲಿ?
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on: Sep 20, 2020 | 4:23 PM

Share

ದಾವಣಗೆರೆ: ದೇವರ ದುಡ್ಡನ್ನು ಕದಿಯಲೇಬೇಕು ಎಂದು ಗಟ್ಟಿಮನಸ್ಸು ಮಾಡಿದ ಕಳ್ಳರಿಗೆ ಭಯ ಅಥವಾ ಪಾಪಪ್ರಜ್ಞೆ ಕಾಡುವುದಿಲ್ಲವಂತೆ. ಹಾಗಾಗಿ, ದೇವರ ಹುಂಡಿ ಮತ್ತು ಚಿನ್ನಾಭರಣಗಳನ್ನ ಕದ್ದರೂ ಹಾಯಾಗಿ ನಿದ್ರಿಸುತ್ತಾರಂತೆ.

ಇದೀಗ, ಪೂಜೆಗೆ ಇಡುತ್ತಿದ್ದ ಹಣವನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಪಟ್ಟಣದ ವಿನೋಬನಗರದ 3ನೇ ಮುಖ್ಯರಸ್ತೆಯಲ್ಲಿ ನಡೆದಿದೆ. KSRTC ಚಾಲಕ ಅನಿಲ್ ಕುಮಾರ್ ಎಂಬುವವರ ಮನೆಯಲ್ಲಿ ದೇವರಿಗೆ ಇಟ್ಟಿದ್ದ ಹಣವನ್ನು ಖದೀಮರು ಕದ್ದಿದ್ದಾರೆ.

ಪ್ರತಿ ವರ್ಷ ಲಕ್ಷ್ಮಿ ಪೂಜೆಗೆ ಅನಿಲ್​ ಕುಮಾರ್​ ಕುಟುಂಬ ಹತ್ತು ಸಾವಿರ ರೂಪಾಯಿ ನಗದನ್ನು ಇಟ್ಟು ಪೂಜೆ ಮಾಡುತ್ತಿದ್ದರಂತೆ. ಹಲವು ವರ್ಷಗಳಿಂದ ಈ ರೀತಿ ಪೂಜೆಗೆ ಇಟ್ಟ ಹಣವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದರು. ಆದರೆ ಕುಟುಂಬ ಊರಿಗೆ ಹೋಗಿದ್ದ ಸಮಯದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಖದೀಮರು ದೇವರ ದುಡ್ಡನ್ನು ಕದ್ದು ಪರಾರಿಯಾಗಿದ್ದಾರೆ. ಇದಲ್ಲದೆ, ಮನೆಯಲ್ಲಿದ್ದ ಆಭರಣವನ್ನು ದೋಚಿದ್ದಾರೆ. ಇನ್ನು ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow Us
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್