ಮಂಗಳೂರು: ಲಾಕ್ಡೌನ್ ಶುರುವಾಗಿದ್ದೇ ವಲಸೆ ಕಾರ್ಮಿಕರ ಪಡಿಪಾಟಲು ಗಗನಮುಟ್ಟಿದೆ. ಇನ್ನೂ ಅವರ ಕಷ್ಟಕ್ಕೆ ಪೂರ್ಣಪ್ರಮಾಣದಲ್ಲಿ ಬ್ರೇಕ್ ಹಾಕಲು ಸರ್ಕಾರಗಳಿಗೆ ಸಾಕಾಗಿಲ್ಲ. ದಿನಾ ಒಂದಿಲ್ಲೊಂದು ಅಪಘಾತಗಳಲ್ಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಈಗ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಒಂದು ಟ್ರೈನು ಹಳಿ ತಪ್ಪಿದೆ.. ಅದೂ ಮಂಗಳೂರಿನ ಬಳಿ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲು ಬಳಿ ನಿನ್ನೆ ರಾತ್ರಿ ಶ್ರಮಿಕ ವಿಶೇಷ ರೈಲು shramik special ಹಳಿ ತಪ್ಪಿದೆ. ಕೇರಳದ ತಿರುವೂರಿನಿಂದ ರಾಜಸ್ಥಾನದ ಜೈಪುರಕ್ಕೆ ರೈಲು ತೆರಳುತ್ತಿತ್ತು. ಬಳಿಕ ರೈಲ್ವೆ ಸಿಬ್ಬಂದಿ ಇಂಜಿನ್ ಬದಲಾಯಿಸಿ, ಸರಿಪಡಿಸಿ ಕಳಿಸಿದ್ದಾರೆ. ಪಡೀಲು ಬಳಿ ರಾತ್ರಿ 12.30 ಕ್ಕೆ ಘಟನೆ ನಡೆದಿದ್ದು, ಬೆಳಿಗ್ಗೆ 4.30 ರ ಸುಮಾರಿಗೆ ರೈಲಿನ ಇಂಜಿನ್ ಬದಲಾಯಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದು, ತಮ್ಮ ಪ್ರಯಾಣ ಮುಂದುವರಿಸಿದ್ದಾರೆ ಎಂದು ರೈಲ್ವೆ ಮೂಲಗಳು ಹೇಳಿವೆ.
Published On - 4:07 pm, Tue, 19 May 20