ಭಾರತ ತಂಡಕ್ಕೆ ಆಯ್ಕೆ ಮಾಡಲು ವಿರಾಟ್ ಕೊಹ್ಲಿಗೂ ಲಂಚ ಕೇಳಿದ್ರಂತೆ!
ಭಾರತ ತಂಡಕ್ಕೆ ಆಯ್ಕೆ ಮಾಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ಲಂಚ ಕೇಳಿದ್ರಂತೆ. ಹೌದು ಈ ಲಂಚಾವತಾರದ ವಿಷಯವನ್ನು ಸ್ವತಹ ವಿರಾಟ್ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಇಂಡಿಯನ್ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರ ಜೊತೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡುವಾಗ ಈ ವಿಷಯವನ್ನ ಮೆಲುಕುಹಾಕಿದ್ದಾರೆ. ಲಂಚ ಕೊಡದೇ ಇದ್ದಿದ್ದಕ್ಕೆ ನನ್ನನ್ನು ತಂಡಕ್ಕೆ ಆಯ್ಕೆಯೇ ಮಾಡಲಿಲ್ಲ! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುವಾಗ ಅಧಿಕಾರಿಗಳು ನಮ್ಮ ತಂದೆಯ ಬಳಿ ಲಂಚ ಕೇಳಿದ್ದರು. ಆಗ ನಮ್ಮ ತಂದೆ ಅಧಿಕಾರಿಗಳಿಗೆ ಲಂಚ […]
ಭಾರತ ತಂಡಕ್ಕೆ ಆಯ್ಕೆ ಮಾಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ಲಂಚ ಕೇಳಿದ್ರಂತೆ. ಹೌದು ಈ ಲಂಚಾವತಾರದ ವಿಷಯವನ್ನು ಸ್ವತಹ ವಿರಾಟ್ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಇಂಡಿಯನ್ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರ ಜೊತೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡುವಾಗ ಈ ವಿಷಯವನ್ನ ಮೆಲುಕುಹಾಕಿದ್ದಾರೆ.
ಲಂಚ ಕೊಡದೇ ಇದ್ದಿದ್ದಕ್ಕೆ ನನ್ನನ್ನು ತಂಡಕ್ಕೆ ಆಯ್ಕೆಯೇ ಮಾಡಲಿಲ್ಲ! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುವಾಗ ಅಧಿಕಾರಿಗಳು ನಮ್ಮ ತಂದೆಯ ಬಳಿ ಲಂಚ ಕೇಳಿದ್ದರು. ಆಗ ನಮ್ಮ ತಂದೆ ಅಧಿಕಾರಿಗಳಿಗೆ ಲಂಚ ನೀಡಲಿಲ್ಲ. ನನ್ನ ಮಗನಿಗೆ ಸಾಧನೆಯ ಆಧಾರದಲ್ಲಿ ಆಯ್ಕೆ ಮಾಡಿ. ಲಂಚ ಕೊಟ್ಟು ಸೇರಿಸಲು ಇಷ್ಟವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಆಗ ನನಗೆ ಅವಕಾಶ ಸಿಗಲಿಲ್ಲ ಎಂದು ವಿರಾಟ್ ಕೊಹ್ಲಿ ಲೈವ್ ವಿಡಿಯೋದಲ್ಲಿ ಲಂಚಾವತಾರದ ವಿಷಯವನ್ನು ಬಹಿರಂಗಪಡಿಸಿದ್ದಾರೆ.
https://www.instagram.com/tv/CASnCuGnV4B/?utm_source=ig_web_copy_link
Published On - 3:16 pm, Tue, 19 May 20