WPL 2026: ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ; ಯಾರೆಲ್ಲ ಪ್ರದರ್ಶನ ನೀಡಲಿದ್ದಾರೆ?
WPL 2026 Opening Ceremony: 2026ರ ಮಹಿಳಾ ಪ್ರೀಮಿಯರ್ ಲೀಗ್ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಯೋ ಯೋ ಹನಿ ಸಿಂಗ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ತಾರೆಯರು ರಂಜಿಸಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾ ಮೂಲಕ ಪಂದ್ಯಗಳನ್ನು ನೇರ ವೀಕ್ಷಿಸಬಹುದು. ಒಟ್ಟು ಐದು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ನಾಲ್ಕನೇ ಸೀಸನ್ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಲಿದೆ. ಲೀಗ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡಗಳು ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಪಂದ್ಯ ರಾತ್ರಿ 7:30 ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪ್ರತಿ ಬಾರಿಯಂತೆ ಈ ಬಾರಿಯೂ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು ನೃತ್ಯ ಹಾಗೂ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಸೆಲೆಬ್ರಿಟಿಗಳಿಂದ ಕಾರ್ಯಕ್ರಮ
ಜನವರಿ 9, ಶುಕ್ರವಾರ ಸಂಜೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾಹಿತಿ ಪ್ರಕಾರ ಸಂಜೆ 6:45 ಕ್ಕೆ, ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ. ಈ ಬಾರಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಬಹಳ ವಿಶೇಷ ರೀತಿಯಲ್ಲಿ ಯೋಜಿಸಿದೆ. ಜನಪ್ರಿಯ ಗಾಯಕ ಯೋ ಯೋ ಹನಿ ಸಿಂಗ್ ತಮ್ಮ ಜನಪ್ರಿಯ ಹಾಡುಗಳಿಂದ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇವರೊಂದಿಗೆ ಬಾಲಿವುಡ್ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ತಮ್ಮ ಅದ್ಭುತ ನೃತ್ಯ ಪ್ರದರ್ಶನದೊಂದಿಗೆ ರಂಜಿಸಲಿದ್ದಾರೆ. ವಿಶೇಷವೆಂದರೆ ಮಾಜಿ ವಿಶ್ವ ಸುಂದರಿ ಹರ್ನಾಜ್ ಸಂಧು ಕೂಡ ಈ ಸಮಾರಂಭದಲ್ಲಿ ಮಿಂಚಲಿದ್ದಾರೆ. ಇದರೊಂದಿಗೆ ಇಡೀ ಕ್ರಿಕೆಟ್ ಮೈದಾನವು ಸೆಲೆಬ್ರಿಟಿಗಳಿಂದ ತುಂಬಿ ತುಳುಕಲಿದೆ.
Power-packed performances. Electric vibes ⚡
Pre-match entertainment at its best as Jacqueline Fernandez, Honey Singh & Harnaaz Sandhu are all set to light up the #TATAWPL 🔥
Watch it LIVE tonight at 6:45 PM on @JioHotstar and @StarSportsIndia #MIvRCB | #KhelEmotionKa pic.twitter.com/AQT4gcbsfU
— Women’s Premier League (WPL) (@wplt20) January 9, 2026
ಅಭಿಮಾನಿಗಳು ಈ ಭವ್ಯ ಕಾರ್ಯಕ್ರಮ ಮತ್ತು ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಲು ಬಯಸಿದರೆ, ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಡಿಜಿಟಲ್ ಹಬ್ಬವನ್ನು ಆನಂದಿಸಬಹುದು.
5 ತಂಡಗಳ ನಡುವೆ ಫೈಟ್
ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಸೇರಿದಂತೆ ಒಟ್ಟು ಐದು ತಂಡಗಳು ಸ್ಪರ್ಧಿಸಲಿವೆ. ಒಟ್ಟು 22 ಪಂದ್ಯಗಳು ನಡೆಯಲಿದ್ದು, ಲೀಗ್ ಪಂದ್ಯಗಳು ನವಿ ಮುಂಬೈನಲ್ಲಿ ನಡೆಯಲಿವೆ. ಪ್ಲೇಆಫ್‌ಗಳು ಮತ್ತು ಫೈನಲ್ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಉಭಯ ತಂಡಗಳು
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ. ಕಮಲಿನಿ, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೆಮ್ನಾರ್, ತ್ರಿವೇಣಿ ವಸಿಷ್ಟ, ನಲ್ಲ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲ್ಲಿಂಗ್‌ವರ್ತ್
ಆರ್ಸಿಬಿ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರಿ ಬದಲಿಗೆ)
Published On - 3:46 pm, Fri, 9 January 26
