ಯಾದಗಿರಿ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಅಹಿಂದ ಜಪ ಶುರು ಮಾಡಿದ್ದಾರೆ, ಮಗನ ಮೂಲಕ ಕುರುಬ ಸಮುದಾಯದ ಸಂಘಟನೆಗೆ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಮತ್ತೆ ಅಹಿಂದ ಜಪ ಶುರುಮಾಡಿದ್ರಾ ಸಿದ್ದರಾಮಯ್ಯ?
ಒಂದೇ ತಿಂಗಳ ಅಂತರದಲ್ಲಿ ತಂದೆ- ಮಗ ಖಾಸಗಿ ಕಾರ್ಯಕ್ರಮದ ನೆಪದಲ್ಲಿ ಕುರುಬ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಕಳೆದ ವಾರ ಖಾಸಗಿ ಕಾರ್ಯಕ್ರಮಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕಲಬುರಗಿಗೆ ಭೇಟಿ ನೀಡಿದ್ರು, ಅದೇ ವೇಳೆ ಯಾದಗಿರಿಗೆ ದಿಢೀರ್ ಭೇಟಿ ನೀಡಿ ಅಹಿಂದ ನಾಯಕರ ಜೊತೆಗೆ ಗುಪ್ತ ಸಭೆ ನಡೆಸಿದ್ರು. ಈಗ ತಮ್ಮ ತಂದೆಯ ಜಾಡು ಹಿಡಿದ ಶಾಸಕ ಯತಿಂದ್ರ ಖಾಸಗ ಕಾರ್ಯಕ್ರಮಕ್ಕಾಗಿ ರಾಯಚೂರಿಗೆ ಬಂದು ರಾತ್ರೋರಾತ್ರಿ ಯಾದಗಿರಿಗೆ ದಿಢೀರ್ ಭೇಟಿ ನೀಡಿದ್ದಾರೆ.
ಮಗನ ಮೂಲಕ ಕುರುಬ ಸಮುದಾಯದ ಸಂಘಟನೆ?
ಸುರಪುರ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿಯ ಕನಕಗುರು ಪೀಠ ಸಿದ್ದರಾಮನಂದಪುರಿ ಶ್ರೀಗಳ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ನಂತರ ಯಾದಗಿರಿ ಹಳೇ ಪ್ರವಾಸಿಮಂದಿರಲ್ಲಿ ಕುರುಬ ಸಮಾಜದ ಯುವಕರ ಜೊತೆ ಗುಪ್ತ ಸಭೆ ನಡೆದಿದೆ. ಸಿದ್ದರಾಮಯ್ಯ ಮತ್ತು ಪುತ್ರ ಯತಿಂದ್ರ ರ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Published On - 9:50 am, Wed, 6 November 19