JDS ಬೇಕು ಅಂತಲೇ ವೀಕ್ ಕ್ಯಾಂಡಿಡೇಟ್ ಹಾಕಿದ್ರು ಅನ್ಸುತ್ತದೆ -ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ವ್ಯಾಖ್ಯಾನ

ಬಾಗಲಕೋಟೆ: ರಾಜರಾಜೇಶ್ವರಿನಗರ, ಶಿರಾ ಕ್ಷೇತ್ರದಲ್ಲಿ ನಾವು ಸೋತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲುವ ನಿರೀಕ್ಷೆಯಿತ್ತು. ಜೊತೆಗೆ, R.R.ನಗರದಲ್ಲಿ ಒಳ್ಳೆಯ ಫೈಟ್​ ಕೊಡ್ತೇವೆಂದುಕೊಂಡಿದ್ದೆವು. ಆದರೆ, ಜನರ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಜಿಲ್ಲೆಯ ಬದಾಮಿಯಲ್ಲಿ ಸಿದ್ದರಾಮಯ್ಯ ಹೇಳಿದರು. ಆದರೆ, ಸರ್ಕಾರದಲ್ಲಿರುವವರು ಚುನಾವಣೆಯನ್ನು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ನಡೆಸಬೇಕು. ಅದು ಅವರ ಜವಾಬ್ದಾರಿ. ನನಗೆ ಇರತಕ್ಕ ಮಾಹಿತಿ ಪ್ರಕಾರ, ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ‌. ಎರಡು ಕಡೆ ಹಣದ ಹೊಳೆ ಹರಿಸಿದೆ‌‌. ಅಧಿಕಾರದ […]

JDS ಬೇಕು ಅಂತಲೇ ವೀಕ್ ಕ್ಯಾಂಡಿಡೇಟ್ ಹಾಕಿದ್ರು ಅನ್ಸುತ್ತದೆ -ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ವ್ಯಾಖ್ಯಾನ
Edited By:

Updated on: Nov 10, 2020 | 4:25 PM

ಬಾಗಲಕೋಟೆ: ರಾಜರಾಜೇಶ್ವರಿನಗರ, ಶಿರಾ ಕ್ಷೇತ್ರದಲ್ಲಿ ನಾವು ಸೋತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲುವ ನಿರೀಕ್ಷೆಯಿತ್ತು. ಜೊತೆಗೆ, R.R.ನಗರದಲ್ಲಿ ಒಳ್ಳೆಯ ಫೈಟ್​ ಕೊಡ್ತೇವೆಂದುಕೊಂಡಿದ್ದೆವು. ಆದರೆ, ಜನರ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಜಿಲ್ಲೆಯ ಬದಾಮಿಯಲ್ಲಿ ಸಿದ್ದರಾಮಯ್ಯ ಹೇಳಿದರು.

ಆದರೆ, ಸರ್ಕಾರದಲ್ಲಿರುವವರು ಚುನಾವಣೆಯನ್ನು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ನಡೆಸಬೇಕು. ಅದು ಅವರ ಜವಾಬ್ದಾರಿ. ನನಗೆ ಇರತಕ್ಕ ಮಾಹಿತಿ ಪ್ರಕಾರ, ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ‌. ಎರಡು ಕಡೆ ಹಣದ ಹೊಳೆ ಹರಿಸಿದೆ‌‌. ಅಧಿಕಾರದ ದುರುಪಯೋಗ ಮತ್ತು ಹಣ ಕೆಲಸ ಮಾಡಿದೆ.‌ ಅದೇನೆ ಇರಲಿ ಬಿಜೆಪಿಗೆ ಜನ ಮತ ಕೊಟ್ಟಿರೋದು ತೀರ್ಪು. ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಾಗಿಲ್ಲ. ಒಮ್ಮತದಿಂದ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಆರ್.ಆರ್ ನಗರ ಅಭ್ಯರ್ಥಿ ಆಯ್ಕೆ ವಿಳಂಬವಾಯ್ತು. ವಿದ್ಯಾವಂತ ಹೆಣ್ಣುಮಗಳನ್ನ ಕಣಕ್ಕಿಳಿಸಿದ್ದೆವು‌‌. ಅಧಿಕಾರ, ಹಣ ಬೆಂಬಲದ ಸರ್ಕಾರ ಇರೋದ್ರಿಂದ ಅವರಿಗೆ ಅನುಕೂಲವಾಗಿವೆ. ಉಪಚುನಾವಣೆ ಆಗಿರೋದ್ರಿಂದ ಅವರಿಗೇನು ದೊಡ್ಡ ಶಕ್ತಿ ಬರೋದಿಲ್ಲ ಎಂದು ಹೇಳಿದರು.

ಜೊತೆಗೆ, ಆರ್.ಆರ್. ನಗರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಂತೆ ಕಾಣಿಸುತ್ತದೆ.‌‌ ವೀಕ್ ಕ್ಯಾಂಡಿಡೇಟ್ ಬೇಕು ಅಂತಲೇ ಹಾಕಿದ್ದಾರೆ ಎಂದು ನನಗೆ ಅನ್ಸುತ್ತದೆ ಎಂದು ಸಹ ಹೇಳಿದರು.