ಜಮ್ಮು-ಕಾಶ್ಮೀರ ನೆರವು: ಸಿಕ್ಕಿಂನಲ್ಲಿ ನಡೆದಿದೆ ಬೃಹತ್ ಪ್ರಮಾಣದ ಕೇಸರಿ ಕೃಷಿ ಪ್ರಯೋಗ

ಇತ್ತೀಚೆಗಷ್ಟೇ ಸಿಕ್ಕಿಂನ ಯಾಂಗ್ಯಾಂಗ್ ಗ್ರಾಮದಲ್ಲಿ ಕೇಸರಿ ಬೆಳೆಯ ಮೊದಲ ಪ್ರಯೋಗವನ್ನು ಹಮ್ಮಿಕೊಳ್ಳಲಾಯಿತು. ಸಿಕ್ಕಿಂ ಸೆಂಟ್ರಲ್ ಯೂನಿವರ್ಸಿಟಿಯ ಸಸ್ಯಶಾಸ್ತ್ರ ಮತ್ತು ತೋಟಗಾರಿಕೆ ವಿಭಾಗಗಳು ಮಣ್ಣಿನ ಪರೀಕ್ಷೆ ಕೈಗೊಂಡು ಕೇಸರಿ ಬೆಳೆಗೆ ಉತ್ತಮ ಜಾಗವೆಂದು ತಿಳಿಸಿದೆ. ಸುಮಾರು 1,000 ಚದರ ಮೀಟರ್ ಜಾಗದಲ್ಲಿ ಕೇಸರಿಯ ಸಸಿಗಳನ್ನು ನೆಡಲಾಯಿತು. ಭಾರತದಲ್ಲಿದೆ 100 ಟನ್ ಕೇಸರಿಗೆ ಬೇಡಿಕೆ ಕೇಸರಿ ಬೆಳೆಗೆ ಜಮ್ಮು ಮತ್ತು ಕಾಶ್ಮೀರ ಹೇಳಿ ಮಾಡಿಸಿದ ಪ್ರದೇಶ. ಹಾಗೆಯೇ ಕೇಸರಿಯಿಂದಲೇ ಈ ಪ್ರದೇಶಗಳು ಪ್ರಸಿದ್ಧಿ ಹೊಂದಿವೆ. ಭಾರತದಲ್ಲಿ ಕೇಸರಿ ಅತ್ಯಂತ ದುಬಾರಿ […]

ಜಮ್ಮು-ಕಾಶ್ಮೀರ ನೆರವು: ಸಿಕ್ಕಿಂನಲ್ಲಿ ನಡೆದಿದೆ ಬೃಹತ್ ಪ್ರಮಾಣದ ಕೇಸರಿ ಕೃಷಿ ಪ್ರಯೋಗ
Follow us
ಸಾಧು ಶ್ರೀನಾಥ್​
|

Updated on: Nov 10, 2020 | 4:49 PM

ಇತ್ತೀಚೆಗಷ್ಟೇ ಸಿಕ್ಕಿಂನ ಯಾಂಗ್ಯಾಂಗ್ ಗ್ರಾಮದಲ್ಲಿ ಕೇಸರಿ ಬೆಳೆಯ ಮೊದಲ ಪ್ರಯೋಗವನ್ನು ಹಮ್ಮಿಕೊಳ್ಳಲಾಯಿತು. ಸಿಕ್ಕಿಂ ಸೆಂಟ್ರಲ್ ಯೂನಿವರ್ಸಿಟಿಯ ಸಸ್ಯಶಾಸ್ತ್ರ ಮತ್ತು ತೋಟಗಾರಿಕೆ ವಿಭಾಗಗಳು ಮಣ್ಣಿನ ಪರೀಕ್ಷೆ ಕೈಗೊಂಡು ಕೇಸರಿ ಬೆಳೆಗೆ ಉತ್ತಮ ಜಾಗವೆಂದು ತಿಳಿಸಿದೆ. ಸುಮಾರು 1,000 ಚದರ ಮೀಟರ್ ಜಾಗದಲ್ಲಿ ಕೇಸರಿಯ ಸಸಿಗಳನ್ನು ನೆಡಲಾಯಿತು.

ಭಾರತದಲ್ಲಿದೆ 100 ಟನ್ ಕೇಸರಿಗೆ ಬೇಡಿಕೆ ಕೇಸರಿ ಬೆಳೆಗೆ ಜಮ್ಮು ಮತ್ತು ಕಾಶ್ಮೀರ ಹೇಳಿ ಮಾಡಿಸಿದ ಪ್ರದೇಶ. ಹಾಗೆಯೇ ಕೇಸರಿಯಿಂದಲೇ ಈ ಪ್ರದೇಶಗಳು ಪ್ರಸಿದ್ಧಿ ಹೊಂದಿವೆ. ಭಾರತದಲ್ಲಿ ಕೇಸರಿ ಅತ್ಯಂತ ದುಬಾರಿ ಮಸಾಲೆ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಿಗೆ ಕೇಸರಿ ಆಮದು ಮಾಡಿಕೊಳ್ಳಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್​ಟಿ) ಮೂಲಕ ಕೇಸರಿ ಕೃಷಿಯನ್ನು ಈಶಾನ್ಯದ ಕೆಲವು ರಾಜ್ಯಗಳಿಗೆ ವಿಸ್ತರಿಸಿದೆ.

100 ಟನ್ ಕೇಸರಿಗೆ ಭಾರತದಲ್ಲಿ ಬೇಡಿಕೆ ಇದೆ. ಅಷ್ಟು ಪ್ರಮಾಣದಲ್ಲಿ ಕೇಸರಿ ಉತ್ಪಾದನೆ ಇಲ್ಲವಾದ ಕಾರಣ ತಾನು ಬೆಳೆಯುವ ಕುಂಕುಮವನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಈ ಪೂರೈಕೆಯಿಂದ ಬೇಡಿಕೆ ಇರುವ ಕೇಸರಿಯನ್ನು ಸರಿದೂಗಿಸಿಕೊಳ್ಳುವ ಯೋಜನೆ ಭಾರತದ್ದು.