AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Auto Tips: ಬೇಸಿಗೆಯಲ್ಲಿ ಕಾರಿನ ಟೈರ್‌ ಸ್ಫೋಟಗೊಳ್ಳದಿರಲು ಏನು ಮಾಡಬೇಕು?: ಇಲ್ಲಿದೆ ಟಿಪ್ಸ್

Car Tire Tips Summer: ಬೇಸಿಗೆಯಲ್ಲಿ ಕಾರನ್ನು ಓವರ್‌ಲೋಡ್ ಮಾಡಬೇಡಿ. ಇದು ಟೈರ್‌ಗಳ ಮೇಲೆ ಹೆಚ್ಚುವರಿ ಬಲವನ್ನು ಬೀರುತ್ತದೆ. ಟೈರ್ ಜೋಡಣೆ ಮತ್ತು ಸಮತೋಲನವನ್ನು ನಿಯಮಿತವಾಗಿ ಮಾಡಬೇಕು. ಐದು ವರ್ಷಗಳಿಗಿಂತ ಹಳೆಯದಾದ ಟೈರ್‌ಗಳನ್ನು ಬಳಸುವುದು ಪ್ರಯಾಣಕ್ಕೆ ಅಪಾಯಕಾರಿ. ಅದಕ್ಕಾಗಿಯೇ ಅವುಗಳನ್ನು ಬೇಗನೆ ಬದಲಾಯಿಸಿ.

Auto Tips: ಬೇಸಿಗೆಯಲ್ಲಿ ಕಾರಿನ ಟೈರ್‌ ಸ್ಫೋಟಗೊಳ್ಳದಿರಲು ಏನು ಮಾಡಬೇಕು?: ಇಲ್ಲಿದೆ ಟಿಪ್ಸ್
Car Tire Summer
Vinay Bhat
|

Updated on:May 02, 2025 | 3:20 PM

Share

ಬೆಂಗಳೂರು (ಮೇ. 02): ಬೇಸಿಗೆಯ ದಿನಗಳಲ್ಲಿ ಕಾರಿನ ಟೈರ್‌ಗಳ (Car Tire) ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಂದರ್ಭ ಟೈರ್ ಒತ್ತಡವು ವೇಗವಾಗಿ ಬದಲಾಗುತ್ತದೆ. ಹೆಚ್ಚಿನ ಸೂರ್ಯನ ಬೆಳಕು ಮತ್ತು ಏರುತ್ತಿರುವ ತಾಪಮಾನವು ಕಾರಿನ ಟೈರ್‌ಗಳಿಗೆ ಹಾನಿಯನ್ನುಂಟುಮಾಡಬಹುದು. ಟೈರ್ ಒತ್ತಡದಲ್ಲಿನ ಹೆಚ್ಚಳ ಮತ್ತು ಇಳಿಕೆಯನ್ನು ನೀವು ನಿರ್ಲಕ್ಷಿಸಿದರೆ, ಟೈರ್‌ಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಅಪಘಾತಗಳ ಸಾಧ್ಯತೆಯೂ ಹೆಚ್ಚಾಗುತ್ತದೆ. ಹಾಗಾದರೆ ಈ ಸುಡು ಬಿಸಿಲಿನಲ್ಲಿ ಟೈರ್‌ಗಳು ಸ್ಫೋಟಗೊಳ್ಳದಂತೆ ಅದರ ಕುರಿತ ಕಾಳಜಿ ಹೇಗೆ ವಹಿಸಬೇಕು ಎಂಬುದನ್ನು ನೋಡೋಣ.

ಬೇಸಿಗೆಯಲ್ಲಿ ಒತ್ತಡ ಏಕೆ ಹೆಚ್ಚಾಗುತ್ತದೆ?

ಹಗಲಿನಲ್ಲಿ ತಾಪಮಾನ ಹೆಚ್ಚಾದಾಗ ಗಾಳಿಯೂ ಬಿಸಿಯಾಗುತ್ತದೆ. ಟೈರಿನ ಒಳಗಿನ ಗಾಳಿ ಬಿಸಿಯಾಗಿ ಹಿಗ್ಗುತ್ತದೆ. ಇದು ಒತ್ತಡವನ್ನು ಹೆಚ್ಚಿಸುತ್ತದೆ. ಬಳಿಕ ಟೈರ್ ಹಾನಿ ಮತ್ತು ಸಿಡಿಯುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ಪ್ರತಿ 10C ತಾಪಮಾನ ಹೆಚ್ಚಳಕ್ಕೆ, ಟೈರ್ ಸರಿಸುಮಾರು 1-2 PSI ರಷ್ಟು ಹೆಚ್ಚಾಗುತ್ತದೆ. ನಿಮ್ಮ ಟೈರ್ ಒತ್ತಡ ಸಾಮಾನ್ಯವಾಗಿ 25 PSI ಆಗಿದ್ದರೆ, ಬಲವಾದ ಸೂರ್ಯನ ಬೆಳಕಿನಲ್ಲಿ ಅದು 30 PSI ಅಥವಾ ಅದಕ್ಕಿಂತ ಹೆಚ್ಚು ತಲುಪಬಹುದು.

ಇದನ್ನೂ ಓದಿ
Image
50000 ಡೌನ್ ಪೇಮೆಂಟ್‌ನೊಂದಿಗೆ ಫಾರ್ಚೂನರ್ ಖರೀದಿಸಿ: ಎಷ್ಟು EMI ಕಟ್ಟಬೇಕು?
Image
ಸ್ಕೂಟಿ ಪ್ರಿಯರು ಫುಲ್ ಫಿದಾ: ಹೋಂಡಾದ ಹೊಸ ಡಿಯೋ 125 ಸ್ಕೂಟರ್ ಬಿಡುಗಡೆ
Image
ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಸೇಲ್ ಆದ SUVಗಳು ಎಷ್ಟು ಲಕ್ಷ ಗೊತ್ತೇ?
Image
ಈ ಕಾರಿಗಾಗಿ 15 ವರ್ಷಗಳಿಂದ ಕಾಯುತ್ತಿದ್ದಾರೆ ಜನರು: ಇನ್ನೂ ಬಿಡುಗಡೆ ಆಗಿಲ್ಲ

ಬೇಸಿಗೆಯಲ್ಲಿ ನಿಮ್ಮ ಟೈರ್ ಒತ್ತಡವನ್ನು ಪರಿಶೀಲಿಸಿ

ಬೇಸಿಗೆಯಲ್ಲಿ ಕಾರಿನ ಟೈರ್ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಬೇಕು. ದೀರ್ಘ ಪ್ರಯಾಣದ ಸಮಯದಲ್ಲಿ ಆಗಾಗ್ಗೆ ಟೈರ್ ಒತ್ತಡವನ್ನು ಪರಿಶೀಲಿಸಿ. ಪ್ರಯಾಣದ ಆರಂಭದಲ್ಲಿ ಒತ್ತಡವನ್ನು ಪರಿಶೀಲಿಸುದು ಉತ್ತಮ.

ಟೈರ್ ಆರೈಕೆ ಅತ್ಯಗತ್ಯ

ಬೇಸಿಗೆಯಲ್ಲಿ ಕಾರನ್ನು ಓವರ್‌ಲೋಡ್ ಮಾಡಬೇಡಿ. ಇದು ಟೈರ್‌ಗಳ ಮೇಲೆ ಹೆಚ್ಚುವರಿ ಬಲವನ್ನು ಬೀರುತ್ತದೆ. ಟೈರ್ ಜೋಡಣೆ ಮತ್ತು ಸಮತೋಲನವನ್ನು ನಿಯಮಿತವಾಗಿ ಮಾಡಬೇಕು. ಐದು ವರ್ಷಗಳಿಗಿಂತ ಹಳೆಯದಾದ ಟೈರ್‌ಗಳನ್ನು ಬಳಸುವುದು ಪ್ರಯಾಣಕ್ಕೆ ಅಪಾಯಕಾರಿ. ಅದಕ್ಕಾಗಿಯೇ ಅವುಗಳನ್ನು ಬೇಗನೆ ಬದಲಾಯಿಸಿ.

50 ಸಾವಿರ ಡೌನ್ ಪೇಮೆಂಟ್‌ನೊಂದಿಗೆ ಫಾರ್ಚೂನರ್ ಖರೀದಿಸಿ: ಪ್ರತಿ ತಿಂಗಳು ಎಷ್ಟು ಇಎಂಐ ಕಟ್ಟಬೇಕು?

ಸಾರಜನಕ ಅನಿಲವನ್ನು ಬಳಸಿ

ಬೇಸಿಗೆಯಲ್ಲಿ ನಿಮ್ಮ ಟೈರ್‌ಗಳಿಗೆ ಗಾಳಿ ತುಂಬಿಸುವಾಗ ಸಾರಜನಕ ಅನಿಲವನ್ನು ತುಂಬಲು ಮರೆಯಬೇಡಿ. ಸಾರಜನಕವು ಒಂದು ಶೀತ ಅನಿಲ. ಇದು ಹೆಚ್ಚಿನ ತಾಪಮಾನದಲ್ಲಿ ಟೈರ್ ತಾಪಮಾನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಗಾಳಿಯ ಹರಡುವುಕೆಯನ್ನು ತಡೆಯುತ್ತದೆ. ಟೈರ್ ಸಿಡಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ವೇಗ ನಿಯಂತ್ರಣ

ಬೇಸಿಗೆ ರಜೆಯಲ್ಲಿ ಜನರು ಟ್ರಿಪ್ ಹೋಗಲು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಅತಿ ವೇಗವಾಗಿ ಚಾಲನೆ ಮಾಡುವುದರಿಂದ ಸಮಯವನ್ನು ಉಳಿಸಬಹುದು. ಆದರೆ ಇದು ಟೈರ್‌ಗಳನ್ನು ಬೇಗನೆ ಬಿಸಿ ಮಾಡುತ್ತದೆ. ಇದು ಅವು ಸಿಡಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ನೀವು ಕಾರನ್ನು ಮಧ್ಯಮ ವೇಗದಲ್ಲಿ ಓಡಿಸಬೇಕು.

ರೆಸ್ಟ್ ತೆಗೆದುಕೊಳ್ಳಬೇಕು

ದೀರ್ಘ ಪ್ರಯಾಣದ ಸಮಯದಲ್ಲಿ, ಪ್ರತಿ 100-150 ಕಿಲೋಮೀಟರ್‌ಗಳಿಗೆ ಒಮ್ಮೆ ಗಾಡಿಯನ್ನು ನಿಲ್ಲಿಸಿ. ನೀವು ಕಾರಿಗೆ ವಿಶ್ರಾಂತಿ ನೀಡುವುದು ಮುಖ್ಯ. ಇದು ಟೈರ್‌ಗಳು ಮತ್ತು ಎಂಜಿನ್ ತಣ್ಣಗಾಗಲು ಸಮಯವನ್ನು ನೀಡುತ್ತದೆ. ಎರಡರ ತಾಪಮಾನವನ್ನು ಕಡಿಮೆ ಮಾಡುತ್ತದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Fri, 2 May 25

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ