For a change.. ಕಡುವೈರಿ ಹಾವು-ಮುಂಗುಸಿ ಕಾದಾಟದಲ್ಲಿ ಸೋತಿದ್ದು ಯಾವುದು ಗೊತ್ತಾ!?

ದಾವಣಗೆರೆ: ಸಾಮಾನ್ಯವಾಗಿ ಕಡುವೈರಿಗಳಾದ ಹಾವು ಮತ್ತು ಮುಂಗುಸಿ ಕಾದಾಟಕ್ಕೆ ಇಳಿದರೆ ಸೋಲುವುದು ಹಾವೇ! ಆದ್ರೆ ಬದಲಾವಣೆಗಾಗಿ ಎಂಬಂತೆ ದಾವಣಗೆರೆಯ ಹೊಸಕುಂದುವಾಡ ಗ್ರಾಮದಲ್ಲಿ ನಡೆದ‌ ಘಟನೆ ಇದನ್ನು ತಿರುವು ಮುರುವು ಗೊಳಿಸಿದೆ. ಹಾವಿಗೆ ಹೆದರಿದ ಮುಂಗುಸಿ ಬದುಕಿದ್ಯಾ ಬಡ ಜೀವವೇ ಎನ್ನುವಂತೆ ಅದರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಓಡಿ ಹೋಗಿದೆ! ಹಾವಿನ ಬಿಗಿತಕ್ಕೆ ಒದ್ದಾಡಿದ ಮುಂಗುಸಿ ಪಲಾಯನ ಮಾಡಿತು! ಮುಂಗುಸಿಯ ತನ್ನ ಹೊಟ್ಟೆಗೆ ಸುತ್ತಿಕೊಂಡ ಹಾವಿನ ಬಿಗಿ ಹಿಡಿತಕ್ಕೆ ಸಿಲುಕಿ ಒದ್ದಾಡಿದೆ. ಹಾವಿನ ಬಿಗಿತದಿಂದ ಬಿಡಿಸಿಕೊಳ್ಳಲು ಸಾಕಷ್ಟು ಒದ್ದಾಡಿದೆ. ಕೊನೆಗೆ […]

For a change.. ಕಡುವೈರಿ ಹಾವು-ಮುಂಗುಸಿ ಕಾದಾಟದಲ್ಲಿ ಸೋತಿದ್ದು ಯಾವುದು ಗೊತ್ತಾ!?
ಸಾಧು ಶ್ರೀನಾಥ್​

Updated on: Oct 29, 2020 | 4:04 PM

ದಾವಣಗೆರೆ: ಸಾಮಾನ್ಯವಾಗಿ ಕಡುವೈರಿಗಳಾದ ಹಾವು ಮತ್ತು ಮುಂಗುಸಿ ಕಾದಾಟಕ್ಕೆ ಇಳಿದರೆ ಸೋಲುವುದು ಹಾವೇ! ಆದ್ರೆ ಬದಲಾವಣೆಗಾಗಿ ಎಂಬಂತೆ ದಾವಣಗೆರೆಯ ಹೊಸಕುಂದುವಾಡ ಗ್ರಾಮದಲ್ಲಿ ನಡೆದ‌ ಘಟನೆ ಇದನ್ನು ತಿರುವು ಮುರುವು ಗೊಳಿಸಿದೆ. ಹಾವಿಗೆ ಹೆದರಿದ ಮುಂಗುಸಿ ಬದುಕಿದ್ಯಾ ಬಡ ಜೀವವೇ ಎನ್ನುವಂತೆ ಅದರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಓಡಿ ಹೋಗಿದೆ!

ಹಾವಿನ ಬಿಗಿತಕ್ಕೆ ಒದ್ದಾಡಿದ ಮುಂಗುಸಿ ಪಲಾಯನ ಮಾಡಿತು!
ಮುಂಗುಸಿಯ ತನ್ನ ಹೊಟ್ಟೆಗೆ ಸುತ್ತಿಕೊಂಡ ಹಾವಿನ ಬಿಗಿ ಹಿಡಿತಕ್ಕೆ ಸಿಲುಕಿ ಒದ್ದಾಡಿದೆ. ಹಾವಿನ ಬಿಗಿತದಿಂದ ಬಿಡಿಸಿಕೊಳ್ಳಲು ಸಾಕಷ್ಟು ಒದ್ದಾಡಿದೆ. ಕೊನೆಗೆ ಹಾವಿನಿಂದ ತಪ್ಪಿಸಿ ಕೊಳ್ಳಲು ಆಗದೆ ಹಾವನ್ನೇ ಎಳೆದೆಕೊಂಡ ಹೋಗಿದೆ. ಸ್ಥಳೀಯರು ಹಾವು ಮುಂಗುಸಿಯ ಕಾದಾಟವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೊನೆಗೆ ಮುಂಗುಸಿ ಪಾರಾಗಿರುವುದು ಸ್ಥಳೀಯರ ಕಣ್ಣಿಗೆ ಬಿದ್ದಿದೆ.

Published On - 3:57 pm, Thu, 29 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us