ಸಂತ್ರಸ್ತ ಮಹಿಳೆಯರು ನನ್ನನ್ನ ಸಂಪರ್ಕಿಸಿದ್ರೆ ನಾನು ಸಿಡಿ ಬಿಡುಗಡೆ ಮಾಡುವುದಕ್ಕೆ ನೆರವಾಗುವೆ: ರಾಜಶೇಖರ್ ಮುಲಾಲಿ ಓಪನ್ ಇನ್ವಿಟೇಶನ್!
ಮಾಜಿ ಮುಖ್ಯಮಂತ್ರಿಯೊಬ್ಬರ ಸಿಡಿ ಸಹ ಇದೆ ಎಂಬ ಬಗ್ಗೆ ಮಾಹಿತಿ ಇದೆ. ಪ್ರತಿ ತಿಂಗಳು ಆ ಮಾಜಿ ಸಿಎಂ ವೈನಾಡಿಗೆ ಹೋಗ್ತಾರೆ. ಅವರು ಅಲ್ಲಿಗೆ ಹೋದಾಗ ಇಬ್ಬರು ಹುಡುಗಿಯರು ಬರುತ್ತಾರೆ. ಅದನ್ನು ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಚಿತ್ರೀಕರಣ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿ: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಹಿರಂಗವಾಗಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಎನ್ನುವವರು ನೀಡಿದ ಹೇಳಿಕೆ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಇನ್ನೂ 19 ರಾಜಕಾರಣಿಗಳ ಸಿಡಿ ಇರುವ ಬಗ್ಗೆ ನನಗೆ ಕೆಲವರಿಂದ ಮಾಹಿತಿ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರು, ಅವರ ಸಂಬಂಧಿಕರು ನನ್ನನ್ನ ಸಂಪರ್ಕಿಸಿದರೆ ನಾನು ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ರಾಜಶೇಖರ್ ಮುಲಾಲಿ ಪಟಾಕಿ ಸಿಡಿಸಿದ್ದಾರೆ.
ಬೆಂಗಳೂರಲ್ಲಿ ರಾಜಕಾರಣಿಗಳನ್ನ ಟ್ರ್ಯಾಪ್ ಮಾಡುವ ಜಾಲವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕಾರಣಿಗಳ ಸಿಡಿ ಬಿಡುಗಡೆ ಆಗಲಿವೆ. ಅದರಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಸಿಡಿ ಸಹ ಇದೆ ಎಂಬ ಬಗ್ಗೆ ಮಾಹಿತಿ ಇದೆ. ಪ್ರತಿ ತಿಂಗಳು ಆ ಮಾಜಿ ಸಿಎಂ ವೈನಾಡಿಗೆ ಹೋಗ್ತಾರೆ. ಅವರು ಅಲ್ಲಿಗೆ ಹೋದಾಗ ಇಬ್ಬರು ಹುಡುಗಿಯರು ಬರುತ್ತಾರೆ. ಅದನ್ನು ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಚಿತ್ರೀಕರಣ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಆ ಹುಡುಗ ನಾಪತ್ತೆಯಾಗಿದ್ದಾನೆ. ಕಾಣೆಯಾಗಿರುವವನು ಮೈಸೂರು ಭಾಗದ ಹುಡುಗ ಎಂಬುದಾಗಿ ಗೊತ್ತಾಗಿದೆ ಎನ್ನುವ ಮೂಲಕ ಆ ಮಾಜಿ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಮೂಡಲು ಕಾರಣರಾಗಿದ್ದಾರೆ.
ಸದ್ಯ ಸಂತ್ರಸ್ತೆಯರು ನನ್ನನ್ನು ಸಂಪರ್ಕಿಸಿದರೆ ಸಿಡಿ ಬಿಡುಗಡೆ ಮಾಡಲು ಸಹಾಯ ಮಾಡುವೆ ಎಂದಿರುವ ರಾಜಶೇಖರ್ ಮುಲಾಲಿ ಅವರ ಹೇಳಿಕೆ ಭಾರೀ ಅನುಮಾನಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಯಾವ ರಾಜಕಾರಣಿಗಳ ವಿಡಿಯೋ ಬಹಿರಂಗವಾಗಲಿದೆ ಎನ್ನುವ ಬಗ್ಗೆ ಚರ್ಚೆಯೂ ಶುರುವಾಗಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬೆಳವಣಿಗೆ ಸಹಿಸಲಾಗದೆ ಬಿಜೆಪಿಯವರೇ ಬ್ರೇಕ್ ಹಾಕಿರಬಹುದು: ಸತೀಶ್ ಜಾರಕಿಹೊಳಿ
Published On - 12:07 pm, Thu, 4 March 21