
ಬೆಂಗಳೂರು: ಸೋಂಕಿನಿಂದ ಮೃತಪಟ್ಟಿದ್ದ 63 ವರ್ಷದ ವೃದ್ಧನ ಶವವನ್ನು ಪಡೆದರೆ ಆಸ್ಪತ್ರೆಯ ಬಿಲ್ ಪಾವತಿಸ ಬೇಕಾಗಬಹುದು ಎಂಬ ಯೋಚನೆಯಿಂದ ಮೃತನ ಮಗ ಎಸ್ಕೇಪ್ ಆಗಿರೋ ಜಿಗುಪ್ಸೆ ತರುವಂಥ ಘಟನೆ ನಗರದ KIMS ಆಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜಪೇಟೆಯ ನಿವಾಸಿಯಾಗಿದ್ದ 63 ವರ್ಷದ ಸೋಂಕಿತ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ KIMS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ, ತಂದೆ ಮೃತಪಟ್ಟು 22 ದಿನ ಕಳೆದರೂ ಆತನ ಮಗ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲು ಮುಂದೆ ಬಂದಿಲ್ಲ. ಹಾಗಾಗಿ, ವೃದ್ಧನ ಮೃತದೇಹ KIMS ಆಸ್ಪತ್ರೆಯಲ್ಲಿಯೇ ಉಳಿದಿತ್ತು.
ಮೃತದೇಹದ ಹಸ್ತಾಂತರಕ್ಕೆ ಪುತ್ರನಿಗೆ ಆಸ್ಪತ್ರೆಯ ವೈದ್ಯರು ಕರೆ ಮಾಡಿದಾಗ ಬರುತ್ತೇನೆ ಎಂದವನು ಈವರೆಗೂ ಬಂದಿಲ್ಲ. ಜೊತೆಗೆ, ತಂದೆಯ ಚಿಕಿತ್ಸೆಗೆ ತಗಲಿದ 1.5 ಲಕ್ಷ ರೂಪಾಯಿ ಬಿಲ್ ಸಹ ಪಾವತಿಸಿಲ್ಲವಂತೆ. ಈ ಸಂಬಂಧ ಮಗನಿಗೆ ಪದೇಪದೆ ಆಸ್ಪತ್ರೆ ವೈದ್ಯರು ಕರೆ ಮಾಡಿದ ಹಿನ್ನೆಲೆಯಲ್ಲಿ ಆತ ವೈದ್ಯರ ಫೋನ್ ನಂಬರ್ ಬ್ಲಾಕ್ ಮಾಡಿಬಿಟ್ಟಿದಾನಂತೆ.
ಈ ಆಸಾಮಿ ಇನ್ನು ಸಿಗಲ್ಲ ಎಂದು ಅರಿತ ಆಸ್ಪತ್ರೆ ಸಿಬ್ಬಂದಿ 22 ದಿನಗಳ ಬಳಿಕ ತಾವೇ ಮೃತ ವೃದ್ಧನ ಅಂತ್ಯಕ್ರಿಯೆಯನ್ನು ಅನಾಥ ಶವದ ಹಾಗೆ ಜಮೀರ್ ಟೀಂನೊಂದಿಗೆ ನೆರವೇರಿಸಿದರು.
Published On - 3:24 pm, Sat, 22 August 20