ಅಳಿಯನಿಂದಲೇ ಅತ್ತೆಯ ಬರ್ಬರ ಹತ್ಯೆ.. ಯಾಕೆ?
ಕಲಬುರಗಿ: ಅಳಿಯನೇ ತನ್ನ ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಭಿಮನಾಳ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಲಕ್ಷ್ಮಿಬಾಯಿ ಕೊಲೆಯಾದ ಮಹಿಳೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಳಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಗಳ ವಿಚಾರಕ್ಕೆ ಅತ್ತೆ-ಅಳಿಯನ ಮಧ್ಯೆ ಗಲಾಟೆ ಅತ್ತೆ ತನ್ನ ಮಗಳನ್ನ ಅಳಿಯನ ಮನೆಗೆ ಬಿಡಲು ಬಂದಿದ್ದಾಗ ಈ ಪ್ರಸಂಗ ನಡೆದಿದೆ. ಅತ್ತೆ ಲಕ್ಷ್ಮಿಬಾಯಿ ಭಾಲ್ಕಿ ತಾಲ್ಲೂಕಿನಿಂದ ಭಿಮನಾಳ ಗ್ರಾಮಕ್ಕೆ ಬಂದಿದ್ದಳು. ಮಗಳ ವಿಚಾರಕ್ಕೆ ಅತ್ತೆ ಮತ್ತು […]

ಪ್ರಾತಿನಿಧಿಕ ಚಿತ್ರ
ಕಲಬುರಗಿ: ಅಳಿಯನೇ ತನ್ನ ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಭಿಮನಾಳ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಲಕ್ಷ್ಮಿಬಾಯಿ ಕೊಲೆಯಾದ ಮಹಿಳೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಳಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಗಳ ವಿಚಾರಕ್ಕೆ ಅತ್ತೆ-ಅಳಿಯನ ಮಧ್ಯೆ ಗಲಾಟೆ ಅತ್ತೆ ತನ್ನ ಮಗಳನ್ನ ಅಳಿಯನ ಮನೆಗೆ ಬಿಡಲು ಬಂದಿದ್ದಾಗ ಈ ಪ್ರಸಂಗ ನಡೆದಿದೆ. ಅತ್ತೆ ಲಕ್ಷ್ಮಿಬಾಯಿ ಭಾಲ್ಕಿ ತಾಲ್ಲೂಕಿನಿಂದ ಭಿಮನಾಳ ಗ್ರಾಮಕ್ಕೆ ಬಂದಿದ್ದಳು. ಮಗಳ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ಮಧ್ಯೆ ಗಲಾಟೆಯಾಗಿದೆ. ಬಳಿಕ ಕಲ್ಲು ಎತ್ತಿ ಹಾಕಿ ಅಳಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




