KBCಯಲ್ಲಿ ತಮ್ಮ ಸಾಮಾಜಿಕ ಸೇವೆ ಬಗ್ಗೆ ಅಮಿತಾಭ್​​ಗೆ ಸೋನು ಸೂದ್ ಹೇಳಿದ್ದೇನು?

ಸೋನು ಸೂದ್ ಇತ್ತೀಚೆಗೆ ಕೌನ್​ ಬನೇಗಾ ಕರೋಡ್​​ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಮಿತಾಭ್​, ಈ ಸಾಮಾಜಿಕ ಕಾರ್ಯದ ಆರಂಭಕ್ಕೆ ಸ್ಫೂರ್ತಿ ಏನು ಎಂದು ಪ್ರಶ್ನಿಸಿದ್ದರು. ಇದಕ್ಕೆ ಸೋನು ವಿವರವಾಗಿ ಉತ್ತರಿಸಿದ್ದಾರೆ.

KBCಯಲ್ಲಿ ತಮ್ಮ ಸಾಮಾಜಿಕ ಸೇವೆ ಬಗ್ಗೆ ಅಮಿತಾಭ್​​ಗೆ ಸೋನು ಸೂದ್ ಹೇಳಿದ್ದೇನು?
ಕೌನ್​ ಬನೇಗಾ ಕರೋಡ್ಪತಿಯಲ್ಲಿ ಅಮಿತಾಭ್​ ಜೊತೆ ಸೋನು ಸೂದ್
Edited By:

Updated on: Jan 04, 2021 | 7:55 PM

ಕೊರೊನಾ ವೈರಸ್​ ದೇಶಕ್ಕೆ ಕಾಲಿಟ್ಟ ನಂತರದಲ್ಲಿ ನಟ ಸೋನು ಸೂದ್​ ನಿಜವಾದ ಹೀರೋ ಆಗಿ ಬದಲಾಗಿದ್ದಾರೆ. ಬೀದಿ ಬದಿಯಲ್ಲಿ ನಿಂತ ಕಾರ್ಮಿಕರನ್ನು ಮನೆಗೆ ತಲುಪಿಸುವ ಕೆಲಸ ಮಾಡುವ ಮೂಲಕ ಭೇಷ ಹೇಳಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರಿಗೆ ಹೀಗೆ ಮಾಡಬೇಕು ಎಂದು ಮೊದಲಿಗೆ ಅನ್ನಿಸಿದ್ದೇಕೆ ಎನ್ನುವ ಬಗ್ಗೆ ಸೋನು ಸೂದ್​ ಕೌನ್​ ಬನೇಗಾ ಕರೋಡ್​​ಪತಿ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸೋನು ಸೂದ್ ಇತ್ತೀಚೆಗೆ ಕೌನ್​ ಬನೇಗಾ ಕರೋಡ್​​ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಮಿತಾಭ್​, ಈ ಸಾಮಾಜಿಕ ಕಾರ್ಯದ ಆರಂಭಕ್ಕೆ ಸ್ಫೂರ್ತಿ ಏನು ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸೋನು ಸೂದ್, ಲಾಕ್​ಡೌನ್​ ಅವಧಿಯಲ್ಲಿ ನಾವು ವಲಸೆ ಕಾರ್ಮಿಕರಿಗೆ ಆಹಾರ ನೀಡಲು ತೆರಳಿದ್ದೆವು. ಈ ವೇಳೆ ಅವರು ನಮಗೆ ಆಹಾರ ಬೇಡ. ಅದು ಒಂದು ದಿನದ ಹೊಟ್ಟೆ ತುಂಬಿಸಬಹುದು. ಆದರೆ ನಮಗೆ ಊರು ತಲುಪಬೇಕು ಎಂದಿದ್ದರು. ಆಗ ನಾನು ಅವರಿಗೆ ಮನೆಗೆ ಬಿಡುವ ಭರವಸೆ ನೀಡಿದ್ದೆ.

ಮೊದಲು ಮಹಾರಾಷ್ಟ್ರ ಸರ್ಕಾರದ ಬಳಿ ನಾನು ಅನುಮತಿ ಪಡೆದೆ. ನಂತರ ಕರ್ನಾಟಕ ಸರ್ಕಾರದ ಬಳಿ ಒಪ್ಪಿಗೆ ತೆಗೆದುಕೊಂಡೆ. ಮೊದಲ ದಿನ ಅವರನ್ನು ಬಿಡಲು ಹೋದಾಗ ಅಕ್ಷರಶಃ ಅವರು ಅತ್ತಿದ್ದರು. ನಾವು ಮತ್ತೆ ಮನೆ ಸೇರುತ್ತೇವೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದಿದ್ದರು. ಅವರನ್ನು ಬಿಟ್ಟು ಮನೆಗೆ ಬರುವಾಗ ದಾರಿಯಮೇಲೆ ಸಾಕಷ್ಟು ವಲಸೆ ಕಾರ್ಮಿಕರು ಕಂಡರು. ಅವರನ್ನು ನೋಡಿ ನನಗೆ ಮರುಕವುಂಟಾಗಿತ್ತು. ಹೀಗಾಗಿ, ನಾನು ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೆ ಎಂದಿದ್ದಾರೆ ಸೋನು.

I am no Messiah: ಅದೆಷ್ಟೋ ವಲಸೆ ಕಾರ್ಮಿಕರಿಗೆ ಆಸರೆ ಆದ ನಟ ಸೋನು ಸೂದ್​ ತನ್ನ ಬಗ್ಗೆಯೇ ಹೇಳಿಕೊಂಡ ಮಾತಿದು