AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲದಕ್ಕೂ ನಿಮ್ಮ ಮಗನ ಮಾತೇ ಅಂತಿಮವಾದ್ರೆ.. ಪಕ್ಷಕ್ಕಾಗಿ ದುಡಿದವರ ಪಾಡೇನು? -BSYಗೆ ಯತ್ನಾಳ್​ ಸವಾಲ್​

ನಾನು ಶಾಸಕ, ನಾನು ನಿಮ್ಮ ಬಳಿ ಮಾತನಾಡಬೇಕು. ನಾನು ನಿಮ್ಮ ಮಗನ ಬಳಿ ಯಾಕೆ ಮಾತಾಡಬೇಕೆಂದು ಯತ್ನಾಳ್​ ಪ್ರಶ್ನೆ ಹಾಕಿದರು. ಎಲ್ಲದಕ್ಕೂ ಮಗನ ಮಾತೇ ಅಂತಿಮ ಮಾಡುವುದಾದರೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪಾಡೇನು? ಎಂದು ಕಟುವಾಗಿ ಪ್ರಶ್ನಿಸಿದರು.

ಎಲ್ಲದಕ್ಕೂ ನಿಮ್ಮ ಮಗನ ಮಾತೇ ಅಂತಿಮವಾದ್ರೆ.. ಪಕ್ಷಕ್ಕಾಗಿ ದುಡಿದವರ ಪಾಡೇನು? -BSYಗೆ ಯತ್ನಾಳ್​ ಸವಾಲ್​
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (ಎಡ); ಸಿಎಂ B.S. ಯಡಿಯೂರಪ್ಪ
Follow us
KUSHAL V
|

Updated on:Jan 04, 2021 | 9:31 PM

ಬೆಂಗಳೂರು: ಮುಂಬೈ, ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಸಭೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಬಗ್ಗೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆಕ್ಷೇಪ ವ್ಯಕ್ತಪಡಿಸಿದರು.

ನಾನು ಶಾಸಕ, ನಾನು ನಿಮ್ಮ ಬಳಿ ಮಾತನಾಡಬೇಕು. ನಾನು ನಿಮ್ಮ ಮಗನ ಬಳಿ ಯಾಕೆ ಮಾತಾಡಬೇಕೆಂದು ಯತ್ನಾಳ್​ ಪ್ರಶ್ನೆ ಹಾಕಿದರು. ಎಲ್ಲದಕ್ಕೂ ಮಗನ ಮಾತೇ ಅಂತಿಮ ಮಾಡುವುದಾದರೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪಾಡೇನು? ಎಂದು ಕಟುವಾಗಿ ಪ್ರಶ್ನಿಸಿದರು.

ನೀವು ಹಿರಿಯರಾಗಿ ಎಲ್ಲದಕ್ಕೂ ತಲೆದೂಗಿದರೆ ಹೇಗೆ? ಮಗನ ಹಸ್ತಕ್ಷೇಪ ಕಡಿಮೆ ಮಾಡಬೇಕು ಎಂದು ಖಾರವಾಗಿ ಹೇಳಿದರು.

‘ಹೇಳಿಕೆ ನೀಡಿ ಪಕ್ಷಕ್ಕೆ, ಸರ್ಕಾರಕ್ಕೆ ಡ್ಯಾಮೇಜ್ ಮಾಡಬೇಡ’ ಈ ವೇಳೆ, ನಿಮ್ಮದು ಸಮಸ್ಯೆ ಇದ್ದರೆ ನೇರವಾಗಿ ನನ್ನ ಬಳಿ ಮಾತಾಡಿ. ಕಾವೇರಿ, ಕೃಷ್ಣಾ ಪ್ರವೇಶಕ್ಕೆ ನಿಮಗೆ ಮುಕ್ತ ಅವಕಾಶ ಇದೆ. ವಿಜಯಪುರದಲ್ಲೊಂದು, ಬೆಂಗಳೂರಲ್ಲೊಂದು ಹೇಳಿಕೆ ನೀಡಿ ಪಕ್ಷಕ್ಕೆ, ಸರ್ಕಾರಕ್ಕೆ ಡ್ಯಾಮೇಜ್ ಮಾಡಬೇಡ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

‘ಮಕ್ಕಳನ್ನು ನಾವು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ’ ಇದಕ್ಕೆ, ಡ್ಯಾಮೇಜ್ ಮಾಡ್ತಿರುವವರು ಯಾರೆಂದು ಎಲ್ಲರಿಗೂ ಗೊತ್ತು ಎಂದ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿ ಸುಮ್ಮನಾದರು. ಈ ವೇಳೆ, ಯಾವುದೇ ಕ್ಷೇತ್ರದಲ್ಲಾಗಲಿ ಅಥವಾ ಬೆಂಗಳೂರಿನಲ್ಲಾಗಲಿ ಮಕ್ಕಳನ್ನು ನಾವು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದು ಶಾಸಕ ಉಮೇಶ್​ ಕತ್ತಿ ತಮ್ಮ ಅಭಿಪ್ರಾಯ ಸೂಚಿಸಿದರು.

ಹಿರಿಯ ಶಾಸಕರು ಬೆಂಗಳೂರಿಗೆ ಬಂದು ಮಾತಾಡಲಾಗಲ್ಲ. ಎಲ್ಲದಕ್ಕೂ ಬೆಂಗಳೂರಿಗೆ ಬಂದು ಮಾತಾಡಲು ಆಗುವುದಿಲ್ಲ. ಫೋನ್ ಮೂಲಕವೂ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಭೆಯಲ್ಲಿ ಸಿಎಂ ಬಿಎಸ್​​ವೈಗೆ ಶಾಸಕ ಉಮೇಶ್ ಕತ್ತಿ ಸಲಹೆ ನೀಡಿದರು. ಈ ಮೂಲಕ, ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಮೂವರು ಶಾಸಕರ ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪ ಮಾಡಿದರು.

‘ವಿಜಯೇಂದ್ರ ಹಸ್ತಕ್ಷೇಪದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಶಾಸಕರು ಕೆಲಸಕ್ಕಾಗಿ ಬಿ.ವೈ.ವಿಜಯೇಂದ್ರ ಬಳಿ ಹೋಗಬೇಕು. ವಿಜಯೇಂದ್ರ ಬಳಿ ಹೋಗಬೇಕೆಂದು ಯಾರೋ ಹೇಳಿದರು ಎಂಬ ಯತ್ನಾಳ್​ ಹೇಳಿಕೆಗೆ ಸ್ಪಷ್ಟೀಕರಣ ಕೊಡಲು ಮುಂದಾದ ಮುಖ್ಯಮಂತ್ರಿಗೆ ನಾನು ಶಾಸಕನಿದ್ದೇನೆ, ಮಾತಾಡಬಹುದೇ ಎಂದು ಯತ್ನಾಳ್ ಮುಂದಾದರು.

ಆಗ, ನಾನು ಸ್ಪಷ್ಟೀಕರಣ ಕೊಡ್ತೇನೆ ನಂತರ ಮಾತಾಡಿ ಎಂದ ಸಿಎಂ ವಿಜಯೇಂದ್ರ ಹಸ್ತಕ್ಷೇಪದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಇದ್ದರೆ ನಾನು ಸರಿಪಡಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಭರವಸೆಕೊಟ್ಟರು.

ಈ ನಡುವೆ, ಅನುದಾನ ಬರದಿರುವ ವಿಚಾರ ಮತ್ತೆ ಪ್ರಸ್ತಾಪಿಸಿದ ಯತ್ನಾಳ್ ನೀವೇನೋ ತುರ್ತಾಗಿ ಅನುದಾನ ಬಿಡುಗಡೆಗೆ ಬರೆದುಕೊಡ್ತೀರಿ. ಆದ್ರೆ ಅದು ಬಿಡುಗಡೆಯಾಗಲ್ಲ, ಈವರೆಗೆ ಅನುದಾನ ಬಂದಿಲ್ಲ ಎಂದು ಹೇಳಿದರು.

ರೇಣುಕಾಚಾರ್ಯ ಬಾಯಿ ಮುಚ್ಚಿಸಿದ ಶಾಸಕ ಯತ್ನಾಳ್ ಸಭೆಯಲ್ಲಿ ಯತ್ನಾಳ್​ ಮಾತಾಡುವಾಗ ಶಾಸಕ M.P.ರೇಣುಕಾಚಾರ್ಯ ಮಧ್ಯಪ್ರವೇಶಿಸಲು ಯತ್ನಿಸಿದರು. ಈ ವೇಳೆ, ನೀನು ಮಾತನಾಡಬೇಡ ಎಂದ ಶಾಸಕ ಯತ್ನಾಳ್​​ ಗದರಿದರು ಎಂದು ಹೇಳಲಾಗಿದೆ. ನಾನು ಮಾತನಾಡುವಾಗ ನೀನು ಮಾತನಾಡಬೇಡ. ನಿನ್ನ ಅಭಿಪ್ರಾಯ ಏನಿದೆ ಅದನ್ನು ನೀನು ಹೇಳು. ಆದರೆ ನಾನು ಮಾತನಾಡುವಾಗ ಮಧ್ಯೆ ಅಡ್ಡ ಬರಬೇಡ ಎಂದು ಯತ್ನಾಳ್​​ ಗುಡುಗಿದರು ಎಂದು ಹೇಳಲಾಗಿದೆ. ಈಗ ನಾನು ಮಾತನಾಡುತ್ತೇನೆ ಎಂದ ಶಾಸಕ ಯತ್ನಾಳ್​​ ರೇಣುಕಾಚಾರ್ಯ ಬಾಯಿ ಮುಚ್ಚಿಸಿದರು ಎಂದು ತಿಳಿದುಬಂದಿದೆ.

ನಾವು ಇರುಸು, ಮುರುಸು ಮಾಡಿಲ್ಲ, ಅದಕ್ಕೆ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗ್ತಿದೆ -BSYಗೆ ಕರಾವಳಿ ಶಾಸಕರ ಅಳಲು

ಏನಪ್ಪಾ ಮೊದಲೇ ಬಂದು.. ಚೇರ್ ರಿಸರ್ವ್ ಮಾಡ್ಕೊಂಡಿದ್ದೀಯಾ -ಯತ್ನಾಳ್​ನ ಕಿಚಾಯಿಸಿದ ಬೊಮ್ಮಾಯಿ

Published On - 7:05 pm, Mon, 4 January 21