ದಿನಭವಿಷ್ಯ | ಜನವರಿ 05, 2021
ಜನವರಿ 5, 2021ರ ದ್ವಾದಶ ರಾಶಿಗಳ ದಿನಭವಿಷ್ಯ.

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ಷಷ್ಠಿ, ಮಂಗಳವಾರ, ಜನವರಿ 05, 2021. ಉತ್ತರೆ ನಕ್ಷತ್ರ, ರಾಹುಕಾಲ: ಮಧ್ಯಾಹ್ನ 12.20 ರಿಂದ 1.43. ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ 6.47. ಸೂರ್ಯಾಸ್ತ: ಸಂಜೆ 5.55
ರಾಶಿ ಭವಿಷ್ಯ
ಮೇಷ: ಧನಮದಕ್ಕಿಂತ ವಿದ್ಯಾಮದ ಅಪಾಯಕಾರಿ. ಆದರಿಂದ ತೊಂದರೆ ಆಗುವ ಸಾಧ್ಯತೆ ಇದೆ. ವಿನಯದಿಂದ ವರ್ತಿಸಿರಿ. ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಪ್ರೇಮಿಗಳಿಗೆ ಅಪೇಕ್ಷೆಯಂತೆ ಕಂಕಣಬಲ ಕೂಡಿಬರುವದು. ಶುಭ ಸಂಖ್ಯೆ: 5
ವೃಷಭ: ದೂರಾಲೋಚನೆ ಮಾಡಿ ಕಾರ್ಯ ನಿರ್ವಹಿಸಿರಿ. ವೃತ್ತಿಪರತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ನೆಮ್ಮದಿಯ ಜೀವನ ಇರುವುದು. ಉದ್ಯೋಗವನ್ನು ವಿಸ್ತರಿಸುವ ಅವಕಾಶ ಇರುವುದು. ಶುಭ ಸಂಖ್ಯೆ: 2
ಮಿಥುನ: ನನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಮಾನಸಿಕ ಉತ್ಸಾಹ ಕಂಡುಬರುವುದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವುದು. ಕಾರಣಾಂತರ ಅಧಿಕ ಖರ್ಚು ಬರಬಹುದು. ಶುಭ ಸಂಖ್ಯೆ: 8
ಕಟಕ: ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ವಿಚಾರಮಾಡಿ ಮುಂದುವರೆಯಿರಿ. ಉದ್ಯೋಗದ ಸ್ಥಾನ ಬದಲಾವಣೆಯ ಯೋಗವಿದೆ. ಆಮಿಷಕ್ಕೆ ಒಳಗಾಗಿ ಮೋಸಹೋಗುವ ಸಂಭವವಿದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 7
ಸಿಂಹ: ಪ್ರೀತಿವಿಶ್ವಾಸದ ಬಲದಿಂದ ಅಧಿಕಾರಿಗಳ ಗಮನ ಸೆಳೆಯುವಿರಿ. ಅತಿಯಾದ ಮೃದು ಧೋರಣೆ ದುರುಪಯೋಗವಾಗದಂತೆ ನೋಡಿಕೊಳ್ಳಿರಿ. ಮಂಗಲಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಇರುವುದು. ಶುಭ ಸಂಖ್ಯೆ: 4
ಕನ್ಯಾ: ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವುದು. ಸತತ ಪ್ರಯತ್ನವಿಲ್ಲದೇ ಫಲ ದೊರೆಯಲಾರದು. ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ತಾಳ್ಮೆ ಕಳೆದುಕೊಳ್ಳದೇ ಮುಂದುವರೆಯಿರಿ. ಶುಭ ಸಂಖ್ಯೆ: 9
ತುಲಾ: ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ. ಶುಭ ಸಂಖ್ಯೆ: 3
ವೃಶ್ಚಿಕ: ಹೊಟ್ಟೆಕಿಚ್ಚಿನ ಜನರಿಂದ ತೊಂದರೆ ಆಗುವ ಸಾಧ್ಯತೆ ಇದೆ. ಅತಿಯಾಗಿ ಹೇಳಿಕೊಳ್ಳುವದು ಅಮಾಮಾನಕ್ಕೆ ಕಾರಣವಾಗದಂತೆ ವರ್ತಿಸಿರಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಇರುವದು. ಕೈಗೊಂಡ ಕಾರ್ಯ ಯಶ ಕಾಣುವುದು. ಶುಭ ಸಂಖ್ಯೆ: 6
ಧನು: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 5
ಮಕರ: ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವುದು. ಶುಭ ಸಂಖ್ಯೆ: 1
ಕುಂಭ: ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಶುಭ ಸಂಖ್ಯೆ: 8
ಮೀನ: ಕೆಲಸಗಳಲ್ಲಿ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 2

ಡಾ.ಬಸವರಾಜ ಗುರೂಜಿ
(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937)
Published On - 6:37 am, Tue, 5 January 21