KBC ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ಸೋನು ಸೂದ್ ಅವರ I’m no Messiah ಪುಸ್ತಕ

ಜನಸಾಮಾನ್ಯರ ನಿಜವಾದ ಹೀರೊ ಎನಿಸಿಕೊಂಡಿರುವ ಸೋನು ಸೂದ್ ಇತ್ತೀಚೆಗೆ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್ ಬನೇಗಾ ಕ್ರೊರ್​ಪತಿಯ ಸೆಟ್​ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಬರೆದಿದ್ದ ಐಯಾಮ್ ನೋ ಮೆಸ್ಸಿಯಾ ಪುಸ್ತಕವನ್ನು ಅಮಿತಾಬ್ ಬಚ್ಚನ್ ಅವರಿಗೆ ಉಡುಗೊರೆಯಾಗಿ ನೀಡಿದರು.

KBC ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ಸೋನು ಸೂದ್ ಅವರ I’m no Messiah ಪುಸ್ತಕ
ಅಮಿತಾಬ್ ಬಚ್ಚನ್ ಜೊತೆ ಸೋನು ಸೂದ್
Edited By: ಸಾಧು ಶ್ರೀನಾಥ್​

Updated on: Jan 01, 2021 | 6:04 PM

ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದ ಸಾಮಾನ್ಯ ವರ್ಗದ ಜನರಿಗೆ ಹಲವಾರು ಸೆಲೆಬ್ರೆಟಿಗಳು ಹಾಗೂ ರಾಜಕೀಯ ನಾಯಕರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಆದರೆ ಊಹೆಗೂ ಮೀರಿದ ರೀತಿ ಕೂಲಿ ಕಾರ್ಮಿಕರಿಗೆ ಹಾಗೂ ವಲಸಿಗರಿಗೆ ಸಹಾಯ ಮಾಡಿದವರಲ್ಲಿ ಸಿನಿಮಾ ನಟ ಸೋನು ಸೂದ್ ಅಗ್ರಗಣ್ಯರಾಗಿ ನಿಲ್ಲುತ್ತಾರೆ.

ಜನಸಾಮಾನ್ಯರ ನಿಜವಾದ ಹೀರೊ ಎನಿಸಿಕೊಂಡಿರುವ ಸೋನು ಸೂದ್ ಇತ್ತೀಚೆಗೆ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್ ಬನೇಗಾ ಕ್ರೋರ್​ಪತಿಯ ಸೆಟ್​ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಬರೆದಿದ್ದ ಐಯಾಮ್ ನೋ ಮೆಸ್ಸಿಯಾ  ಪುಸ್ತಕವನ್ನು ಅಮಿತಾಬ್ ಬಚ್ಚನ್ ಅವರಿಗೆ ಉಡುಗೊರೆಯಾಗಿ ನೀಡಿದರು.

ಈ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸೋನು ಸೂದ್​, ಹೊಸ ವರ್ಷ ಚೆನ್ನಾಗಿ ಪ್ರಾರಂಭವಾಗಿದೆ. ನಾನು ದೇಶದ ಜನ ಹೆಚ್ಚು ಇಷ್ಟಪಟ್ಟ ವ್ಯಕ್ತಿಯೊಂದಿಗೆ ಇಲ್ಲಿದ್ದೇನೆ. ಇಂದಿನ ಕೆಬಿಸಿ ಕಾರ್ಯಕ್ರಮದಲ್ಲಿ ನನ್ನ ಪುಸ್ತಕ ಐಯಾಮ್ ನೋ ಮೆಸ್ಸಿಯಾ ಅನಾವರಣಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

Published On - 5:02 pm, Fri, 1 January 21

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us