
ಮೈಸೂರು: ಇವರು ಯಾರೂ ವಿಲನ್ ಅಲ್ಲ.. ಯಡಿಯೂರಪ್ಪನವರೇ ವಿಲನ್ ಎಂದು ಮಾತಿನ ಭರದಲ್ಲಿ ‘ಸಿಎಂ ಯಡಿಯೂರಪ್ಪನವರೇ ವಿಲನ್’ ಎಂದು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ST ಸೋಮಶೇಖರ್ ಹೇಳಿಬಿಟ್ಟರು. ನೆರೆದಿದ್ದ ಎಲ್ಲರೂ ನಗೆಗಡಲಲ್ಲಿ ತೇಲುತ್ತಿದ್ದಂತೆ ಕೂಡಲೇ ಸಾರ್ ಅದು ವಿಲನ್ ಅಲ್ಲ.. ಹೀರೋ ಎಂದು ಮಾಜಿ ಸಚಿವ S.A. ರಾಮದಾಸ್ ಅವರನ್ನು ತಿದ್ದಲು ಮುಂದಾದರು. ತಕ್ಷಣ ಎಚ್ಚೆತ್ತ ಸೋಮಶೇಖರ್ ಅದು ವಿಲನ್ ಅಲ್ಲ ಹೀರೋ ಎಂದು ಸರಿಪಡಿಸಿಕೊಂಡರು!
ಕೂಡಲೇ, ಅದನ್ನು ಸರಿಪಡಿಸಿಕೊಂಡ ಸಚಿವರು ಕೊರೊನಾ ವೇಳೆ 7 ತಿಂಗಳಿನಿಂದ ಸಿಎಂ ಹೀರೋ ಆಗಿ ಕೆಲಸ ಮಾಡಿದ್ದಾರೆ. ಸಿಎಂ ಬಿಎಸ್‌ವೈ ಒಬ್ಬರೇ ಹೀರೋ ಆಗಿ ಕೆಲಸ ಮಾಡಿದ್ದಾರೆ. ಈ ಕೊವಿಡ್ ಸಮಯದಲ್ಲಿ ಹೀರೋ ಮತ್ತು ವಿಲನ್ ಎಲ್ಲರನ್ನು ಸಿಎಂ ನಿಭಾಯಿಸಿದ್ದಾರೆ ಎಂದು ತಮ್ಮ ಮಾತಿನ ಧಾಟಿಯನ್ನು ಬದಲಿಸಿದರು..