ವರ್ಷದಲ್ಲೇ ಅಸ್ತಿತ್ವ ಕಳೆದುಕೊಂಡ ಮಂಡ್ಯ ವಿವಿ? ಯಾರದೋ ತಪ್ಪಿಗೆ ವಿದ್ಯಾರ್ಥಿಗಳಿಗೆ ಬರೆ!
ಮಂಡ್ಯ: ಒಂದೇ ವರ್ಷದಲ್ಲಿ ಮಂಡ್ಯ ವಿವಿ ಅಸ್ತಿತ್ವ ಕಳೆದುಕೊಳ್ತಾ? ಮಂಡ್ಯ ವಿವಿಗೆ ಎಳ್ಳು ನೀರು ಬಿಡಲು ಮುಂದಾಗಿದೆಯಾ ರಾಜ್ಯ ಸರ್ಕಾರ? ಇದೀಗ ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆ ಎಂಬಂತಾಗಿದೆ. ಒಂದು ವರ್ಷದ ಹಿಂದೆ ಮಂಡ್ಯ ವಿಶ್ವವಿದ್ಯಾಲಯ ಎಂದು ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಎಂದಿನಂತೆ ಅಟೋನೊಮಸ್ ಅಡಿಯಲ್ಲಿ ಕೆಲಸ ಮಾಡಿ ಎಂದು ಸರ್ಕಾರ ಆದೇಶಿಸಿದೆ. ವಿಶೇಷಾಧಿಕಾರಿಯಾಗಿ ಬಂದ ಮಹದೇವ ನಾಯಕರ ಅಕ್ರಮದಿಂದಾಗಿ ವಿಶ್ವ ವಿದ್ಯಾಲಯವನ್ನೇ ಸರ್ಕಾರ ರದ್ದುಪಡಿಸಿದೆ. ಅಕ್ರಮವಾಗಿ ಅತಿಥಿ ಉಪನ್ಯಾಸಕರ ನೇಮಕ: ಮಹದೇವನಾಯಕ ವಿರುದ್ಧ […]
ಮಂಡ್ಯ: ಒಂದೇ ವರ್ಷದಲ್ಲಿ ಮಂಡ್ಯ ವಿವಿ ಅಸ್ತಿತ್ವ ಕಳೆದುಕೊಳ್ತಾ? ಮಂಡ್ಯ ವಿವಿಗೆ ಎಳ್ಳು ನೀರು ಬಿಡಲು ಮುಂದಾಗಿದೆಯಾ ರಾಜ್ಯ ಸರ್ಕಾರ? ಇದೀಗ ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆ ಎಂಬಂತಾಗಿದೆ.
ಒಂದು ವರ್ಷದ ಹಿಂದೆ ಮಂಡ್ಯ ವಿಶ್ವವಿದ್ಯಾಲಯ ಎಂದು ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಎಂದಿನಂತೆ ಅಟೋನೊಮಸ್ ಅಡಿಯಲ್ಲಿ ಕೆಲಸ ಮಾಡಿ ಎಂದು ಸರ್ಕಾರ ಆದೇಶಿಸಿದೆ. ವಿಶೇಷಾಧಿಕಾರಿಯಾಗಿ ಬಂದ ಮಹದೇವ ನಾಯಕರ ಅಕ್ರಮದಿಂದಾಗಿ ವಿಶ್ವ ವಿದ್ಯಾಲಯವನ್ನೇ ಸರ್ಕಾರ ರದ್ದುಪಡಿಸಿದೆ.
ಅಕ್ರಮವಾಗಿ ಅತಿಥಿ ಉಪನ್ಯಾಸಕರ ನೇಮಕ: ಮಹದೇವನಾಯಕ ವಿರುದ್ಧ ಅಕ್ರಮವಾಗಿ ಅತಿಥಿ ಉಪನ್ಯಾಸಕರ ನೇಮಕ ಹಾಗೂ ಕೋರ್ಸ್‌ಗಳನ್ನು ತೆರೆದಿದ್ದ ಆರೋಪ ಕೇಳಿಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಾದೇವ ನಾಯಕ ಅಧಿಕಾರ ಕಳೆದುಕೊಂಡಿದ್ದಾರೆ. ಮಹಾದೇವರನ್ನು ಹೊರಹಾಕಿ ಸರ್ಕಾರ ವಿವಿಯನ್ನೇ ರದ್ದುಪಡಿಸಿದೆ. ಇದರಿಂದ ಸರ್ಕಾರ ಹಾಗು ವಿವಿ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿಗಳು: ಹೀಗಾಗಲೇ ಒಂದು ಸೆಮಿಸ್ಟರ್ ಪರೀಕ್ಷೆಯನ್ನು ವಿವಿ ಹೆಸರಿನಲ್ಲಿ ವಿದ್ಯಾರ್ಥಿಗಳು ಬರೆದಿದ್ದಾರೆ. ಆದ್ರೀಗ ಅಟೋನೊಮಸ್ ಅಡಿಯಲ್ಲಿ ಪರೀಕ್ಷೆ ಬರೆಯಿರಿ ಎಂದು ಕಾಲೇಜು ಆಡಳಿತ ವರ್ಗ ಹೇಳುತ್ತಿದೆ. ನಾವು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದೇವೆ. ನಾವು ಸ್ವಾಯತ್ತ ಅಡಿಯಲ್ಲಿ ಪರೀಕ್ಷೆ ಬರೆಯುವುದಿಲ್ಲ ಎಂದು ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕಾರ ಮಾಡಿದ್ದಾರೆ.
Published On - 10:54 am, Sat, 11 January 20