ಬೆಂಗಳೂರು: ಮಹತ್ತರ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಸಂಡೇ ಲಾಕ್ ಡೌನ್ ಅನ್ನು ರದ್ದು ಪಡಿಸಿದೆ. ಇದೇ ಆಗಷ್ಟ್ ಎರಡರಿಂದಲೇ ಲಾಕ್‌ಡೌನ್ ತೆರವುಗೊಳಿಸಿದೆ. ಜೊತೆಗೆ ರಾಜ್ಯ ಸರ್ಕಾರದಿಂದ ಅನ್‌ಲಾಕ್ 3ರ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಹೌದು ಇನ್ನು ಮುಂದೆ ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಇರೋದಿಲ್ಲ. ಎಲ್ಲಾ ದಿನಗಳು ನಾರ್ಮಲ್ ಆಗಿರಲಿವೆ. ಹಾಗೇನೆ ಲಾಕ್ ಡೌನ್ ತೆರವುಗೊಳಿಸಿದ ನಂತರ ಅನ್‌ಲಾಕ್ 3ರ ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಇಂತಿದೆ. ಆಗಸ್ಟ್ 31ರವರೆಗೆ ಯಾವುದೇ ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ. ಆಗಸ್ಟ್ 5ರಿಂದ ಜಿಮ್, ಯೋಗ ಸೆಂಟರ್ ಓಪನ್ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಆದ್ರೆ ಈಜುಕೊಳ, ಥಿಯೇಟರ್, ಮೆಟ್ರೋ ಮೇಲಿನ ನಿರ್ಭಂಧ ಮುಂದುವರಿಯಲಿದೆ. ಬಾರ್ಗಳನ್ನೂ ಕೂಡಾ ಸದ್ಯಕ್ಕೆ ತೆರೆಯುವಂತಿಲ್ಲ ಎಂದು ಸೂಚಿಸಿದೆ. ಜೊತೆಗೆ ಕ್ರೀಡಾ ಚಟುವಟಿಕೆ, ಮನರಂಜನಾ ಪಾರ್ಕ್, ಅಸೆಂಬ್ಲಿ ಹಾಲ್ಗಳನ್ನು ಕೂಡಾ ತೆರೆಯುವಂತಿಲ್ಲ. ಹಾಗೇನೆ ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಆದ್ರೆ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ದೈಹಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ಸ್ವಾತಂತ್ರೋತ್ಸವ ಆಚರಿಸಲು ಅನುಮತಿ ನೀಡಿದೆ. ಹಾಗೇನೆ ಅಂತಾರಾಜ್ಯ, ಅಂತರ್ ಜಿಲ್ಲಾ ಓಡಾಟಕ್ಕೆ ಕೂಡಾ ಯಾವುದೇ ನಿರ್ಬಂಧ ಇಲ್ಲವೆಂದು ಸ್ಪಷ್ಟಪಡಿಸಿದೆ.