IAS transfer: ರಾಜ್ಯದ 42 ಐಎಎಸ್ ಅಧಿಕಾರಿಗಳ ವರ್ಗಾವಣೆ; ಯಾರಿಗೆ ಯಾವ ಹುದ್ದೆ? ಇಲ್ಲಿದೆ ಮಾಹಿತಿ..
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನಕಾರ್ಯದರ್ಶಿ ರಶ್ಮಿ ಮಹೇಶ್ರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಟ್ರಾನ್ಸ್ಫರ್ ಮಾಡಿದ್ದು, ಇದು ತಾತ್ಕಾಲಿಕ, ಮುಂದಿನ ಆದೇಶದವರೆಗೆ ಮಾತ್ರ ಎಂದು ಹೇಳಲಾಗಿದೆ.
ಬೆಂಗಳೂರು: ತುಷಾರ್ ಗಿರಿನಾಥ್, ರಶ್ಮಿ ಮಹೇಶ್, ಜೆ.ರವಿಶಂಕರ್, ಕೆ.ವಿ.ತ್ರಿಲೋಕ್ ಚಂದ್ರ, ಡಾ. ಬಗಾದಿ ಗೌತಮ್ ಸೇರಿ ಒಟ್ಟು 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇವರಲ್ಲಿ ಹಲವರಿಗೆ ಹುದ್ದೆಯನ್ನು ನಿಗದಿಪಡಿಸಲಾಗಿದ್ದು, ಇನ್ನೂ ಕೆಲವರಿಗೆ ತಾತ್ಕಾಲಿಕವಾಗಿ ಹುದ್ದೆ ನೀಡಲಾಗಿದೆ. ಇದು ಮುಂದೆ ಬದಲಾವಣೆಯಾಗಲಿದೆ.
ಪ್ರಮುಖವಾಗಿ, ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರಾಗಿದ್ದ ಜೆ.ಮಂಜುನಾಥ್ರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ, ವರ್ಗಾವಣೆ ಮಾಡಲಾಗಿದೆ. ಹಾಗೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನಕಾರ್ಯದರ್ಶಿ ರಶ್ಮಿ ಮಹೇಶ್ರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಟ್ರಾನ್ಸ್ಫರ್ ಮಾಡಿದ್ದು, ಇದು ತಾತ್ಕಾಲಿಕ, ಮುಂದಿನ ಆದೇಶದವರೆಗೆ ಮಾತ್ರ ಎಂದು ಹೇಳಲಾಗಿದೆ. ಹೀಗಾಗಿ ರಶ್ಮಿ ಮಹೇಶ್ ಹುದ್ದೆ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು ಮತ್ತು ಅವರಿಗೆ ನೀಡಲಾದ ಹುದ್ದೆಯ ವಿವರ ಹೀಗಿದೆ
ತುಷಾರ್ ಗಿರಿನಾಥ್ :ನಗರಾಭಿವೃದ್ಧಿ ಇಲಾಖೆಯ ಪ್ರಧಾನಕಾರ್ಯದರ್ಶಿ
ಡಾ. ಜೆ.ರವಿಶಂಕರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ
ಡಾ. ತ್ರಿಲೋಕ್ ಚಂದ್ರ: ಬೆಂಗಳೂರು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಆಯುಷ್ ಸೇವೆಗಳ ಆಯುಕ್ತ.
ಮಂಡ್ಯ ಡಿಸಿ ಡಾ. ಎಂ.ವಿ.ವೆಂಕಟೇಶ್: ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ
ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್: ಬೆಂಗಳೂರು ವಾಣಿಜ್ಯ ತೆರಿಗೆ (ಜಾರಿ) ಇಲಾಖೆ ಆಯುಕ್ತ.
ಎಂ. ಕನಗವಲ್ಲಿ: ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ವ್ಯವಸ್ಥಾಪಕ ನಿರ್ದೇಶಕಿ (Managing Director).
ಡಾ.ವಿ. ರಾಮ್ ಪ್ರಶಾಂತ್ ಮನೋಹರ್: ಕರ್ನಾಟಕ ರಾಜ್ಯ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ.
ರಾಯಚೂರು ಡಿಸಿ ಆರ್.ವೆಂಕಟೇಶ್ ಕುಮಾರ್: ಕಲಬುರಗಿ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಜಂಟಿ ಕಾರ್ಯದರ್ಶಿ
ಬೆಂಗಳೂರು ಡಿಸಿ ಆಗಿದ್ದ ಜಿ.ಎನ್. ಶಿವಮೂರ್ತಿ: ಕಬ್ಬು ಅಭಿವೃದ್ಧಿ ಆಯುಕ್ತ ಮತ್ತು ಸಕ್ಕರೆ ನಿರ್ದೇಶಕ
ಡಾ. ಬಿ.ಆರ್.ಮಮತಾ: ಕರ್ನಾಟಕ ಸಾರ್ವಜನಿಕ ಭೂ ನಿಗಮದ ವ್ಯವಸ್ಥಾಪಕ ನಿರ್ದೇಶಕಿ
ಹೆಬ್ಸಿಬಾ ರಾಣಿ ಕೊರ್ಲಪಾಟಿ: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ
ತುಮಕೂರು ಡಿಸಿ ಆಗಿದ್ದ ಡಾ.ರಾಕೇಶ್ ಕುಮಾರ್ ಕೆ.: ಬೆಂಗಳೂರು ಪ್ರವಾಸೋದ್ಯಮ ನಿರ್ದೇಶಕ
ದಕ್ಷಿಣ ಕನ್ನಡ ಜಿಪಂ ಸಿಇಒ ಡಾ. ಸೆಲ್ವಮಣಿ ಆರ್.: ಕೋಲಾರ ಜಿಲ್ಲಾಧಿಕಾರಿ
ಎಸ್. ಅಶ್ವಥಿ: ಮಂಡ್ಯ ಜಿಲ್ಲಾಧಿಕಾರಿ
ಮುಲ್ಲೈ ಮುಹಿಲನ್: ಉತ್ತರ ಕನ್ನಡ ಜಿಲ್ಲಾಧಿಕಾರಿ( ಡಾ. ಕೆ.ಹರೀಶ್ ಕುಮಾರ್ ವರ್ಗಾವಣೆ)
ವೆಂಕಟ್ ರಾಜಾ: ರಾಯಚೂರು ಜಿಲ್ಲಾಧಿಕಾರಿ
ಗುರುದತ್ತ ಹೆಗಡೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ
ವಿಜಯಪುರ ಜಿಪಂ ಸಿಇಒ ಲಕ್ಷ್ಮೀಕಾಂತ್ ರೆಡ್ಡಿ: ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ
ಗದಗ ಜಿಪಂ ಸಿಇಒ ಆನಂದ್ ಕೆ.: ಡಿಪಿಎಆರ್ ಉಪ ಕಾರ್ಯದರ್ಶಿ
ಜ್ಞಾನೇಂದ್ರ ಕುಮಾರ್ ಗಾಂಗ್ವರ್: ಆಡಳಿತಾತ್ಮಕ ತರಬೇತಿ ಸಂಸ್ಥೆ ಮೈಸೂರು ಜಂಟಿ ನಿರ್ದೇಶಕ.
ಭರತ್ ಎಸ್.: ಗದಗ ಜಿಲ್ಲಾ ಪಂಚಾಯಿತಿ ಸಿಇಒ
ಡಾ.ಬಿ.ಸಿ.ಸತೀಶ್: ಚಾಮರಾಜನಗರ ಜಿಲ್ಲಾಧಿಕಾರಿ
ಡಾ.ರವಿ ಎಂ.ಆರ್.: ಸಕಾಲ ಯೋಜನೆಯ ಹೆಚ್ಚುವರಿ ಯೋಜನಾ ನಿರ್ದೇಶಕ
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ರವೀಂದ್ರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ.
ಕರೀಗೌಡ: ಮೈಸೂರು ಆಡಳಿತಾತ್ಮಕ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ
ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್: ಉದ್ಯೋಗ ಮತ್ತು ತರಬೇತಿ ಆಯುಕ್ತ
ಕೆ.ಎನ್.ರಮೇಶ್: ಚಿಕ್ಕಮಗಳೂರು ಜಿಲ್ಲಾಧಿಕಾರಿ
ಪಾಟೀಲ್ ಯಳಗೌಡಾ ಶಿವನಗೌಡ: ತುಮಕೂರು ಜಿಲ್ಲಾಧಿಕಾರಿ
ಕೆ.ಶ್ರೀನಿವಾಸ್: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ
ಸಿ.ಸತ್ಯಭಾಮಾ: ರಾಜ್ಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ
ಝೆಹೆರಾ ನಸೀಮ್: ಬೀದರ್ ಜಿಪಂ ಸಿಇಒ
ವಿಜಯಮಹಂತೇಶ್ ಬಿ.ದಾನಮ್ಮನವರ್: ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ
ಗೋವಿಂದ ರೆಡ್ಡಿ: ವಿಜಯಪುರ ಜಿಲ್ಲಾ ಪಂಚಾಯತ್ ಸಿಇಒ
ಭಾರತಿ ಡಿ: ಕೃಷಿ ಮಾರುಕಟ್ಟೆ ಮಂಡಳಿ ಇಲಾಖೆ ನಿರ್ದೇಶಕಿ
ಪ್ರಭುಲಿಂಗ ಕವಲಿಕಟ್ಟಿ: ಹಟ್ಟಿ ಚಿನ್ನದ ಗಣಿ ಕಂಪನಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ.
ಗಂಗಾಧರ ಸ್ವಾಮಿ ಜಿ.ಎಂ.: ತುಮಕೂರು ಜಿಲ್ಲಾಪಂಚಾಯಿತಿ ಸಿಇಒ
ನಾಗೇಂದ್ರ ಪ್ರಸಾದ್ ಕೆ.: ಚಿಕ್ಕಬಳ್ಳಾಪುರ ಜಿಪಂ ಸಿಇಒ
ಕುಮಾರಾ: ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ ಸಿಇಒ
ಸಂಗಪ್ಪ: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ
ಪರಮೇಶ್: ಹಾಸನ ಜಿಲ್ಲಾಪಂಚಾಯಿತಿ ಸಿಇಒ
ಇದನ್ನೂ ಓದಿ: NSA ಅಜಿತ್ ದೋವಲ್ ಉಗ್ರರ ಟಾರ್ಗೆಟ್? ಬಂಧಿತನಿಂದ ಬಯಲಾಯ್ತು ಭಯಾನಕ ವಿಚಾರ..
Published On - 7:52 pm, Sat, 13 February 21