ಪಿಯುಸಿ ಅಡ್ಮಿಷನ್ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿ.. ಲಾರಿ ಅಪಘಾತಕ್ಕೆ ಬಲಿ
ಉಡುಪಿ: ದ್ವಿತೀಯ ಪಿಯುಸಿ ಅಡ್ಮಿಷನ್ ಆಗಿ, ಜೆರಾಕ್ಸ್ ಮಾಡಿಸಲು ರಸ್ತೆ ದಾಟುತ್ತಿದ್ದ ವೇಳೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಈ ಘಟನೆ ಸಂಭವಿಸಿದ್ದು, ಮರವಂತೆ ನಿವಾಸಿ ಕಿಶನ್ ಖಾರ್ವಿ(17) ಮೃತಪಟ್ಟ ವಿದ್ಯಾರ್ಥಿ ಎನ್ನಲಾಗಿದೆ. ಕೊರೊನಾ ಹಾವಳಿಯಿಂದಾಗಿ ಇಷ್ಟು ದಿನಗಳ ಕಾಲ ಮುಚ್ಚಿದ್ದ ಶಾಲಾ-ಕಾಲೇಜುಗಳನ್ನು, ಹಂತಹಂತವಾಗಿ ತೆರೆಯಲಾಗುತ್ತಿದೆ. ಇದರಿಂದಾಗಿ ತನ್ನ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಡ್ಮಿಷನ್ […]
ಉಡುಪಿ: ದ್ವಿತೀಯ ಪಿಯುಸಿ ಅಡ್ಮಿಷನ್ ಆಗಿ, ಜೆರಾಕ್ಸ್ ಮಾಡಿಸಲು ರಸ್ತೆ ದಾಟುತ್ತಿದ್ದ ವೇಳೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಈ ಘಟನೆ ಸಂಭವಿಸಿದ್ದು, ಮರವಂತೆ ನಿವಾಸಿ ಕಿಶನ್ ಖಾರ್ವಿ(17) ಮೃತಪಟ್ಟ ವಿದ್ಯಾರ್ಥಿ ಎನ್ನಲಾಗಿದೆ.
ಕೊರೊನಾ ಹಾವಳಿಯಿಂದಾಗಿ ಇಷ್ಟು ದಿನಗಳ ಕಾಲ ಮುಚ್ಚಿದ್ದ ಶಾಲಾ-ಕಾಲೇಜುಗಳನ್ನು, ಹಂತಹಂತವಾಗಿ ತೆರೆಯಲಾಗುತ್ತಿದೆ. ಇದರಿಂದಾಗಿ ತನ್ನ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಡ್ಮಿಷನ್ ಆಗಲು ತೆರಳಿದ್ದ ಕಿಶನ್ ಖಾರ್ವಿ ಅಡ್ಮಿಷನ್ ಮುಗಿಸಿ, ಕಾಗದಪತ್ರಗಳನ್ನು ಜೆರಾಕ್ಸ್ ಮಾಡಿಸಲು ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದಿದೆ.
ಇದರ ಪರಿಣಾಮದಿಂದಾಗಿ ವಿದ್ಯಾರ್ಥಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ನಾಯಕ್ ಹಾಗೂ SI ಸಂಗೀತ, ಸ್ಥಳ ಪರಿಶೀಲನೆ ನಡೆಸಿ. ಆಪದ್ಬಾಂಧವ ಅಂಬುಲೆನ್ಸ್ ಮುಖಾಂತರ ವಿದ್ಯಾರ್ಥಿಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.