ಮೆಸೇಜ್ ಕಳಿಸಿ ಪ್ರಪೋಸ್ ಮಾಡಿದ ಹುಡುಗನಿಗೆ.. ಹುಡುಗಿ ಕೊಟ್ಟಳು ಖಡಕ್ ಪ್ರತಿಕ್ರಿಯೆ!

| Updated By: ganapathi bhat

Updated on: Apr 06, 2022 | 7:28 PM

ಪ್ರೀತಿ ಹೇಳಿಕೊಳ್ಳಲು ಹೊಸ ಮಾರ್ಗ ಬೇಕು. ಸರ್ಪ್ರೈಸ್ ನೀಡಬೇಕು ಎಂದು ಸಿನಿಮೀಯವಾಗಿ ಯೋಚಿಸುವವರೂ ಹೆಚ್ಚು. ಅಂಥದ್ದೇ ಘಟನೆ ಇಲ್ಲೂ ನಡೆದಿದೆ.

ಮೆಸೇಜ್ ಕಳಿಸಿ ಪ್ರಪೋಸ್ ಮಾಡಿದ ಹುಡುಗನಿಗೆ.. ಹುಡುಗಿ ಕೊಟ್ಟಳು ಖಡಕ್ ಪ್ರತಿಕ್ರಿಯೆ!
ಪ್ರಾತಿನಿಧಿಕ ಚಿತ್ರ
Follow us on

ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗುತ್ತಿರುವ ಹೊಸ ಜಮಾನಾದಲ್ಲಿ ಸಾಮಾನ್ಯ ಚಟುವಟಿಕೆಗಳೂ ವೈರಲ್ ಆಗುವುದಿದೆ. ಎಲ್ಲರೂ ಮೊಬೈಲ್, ಸ್ಮಾರ್ಟ್​ಫೋನ್, ಟ್ಯಾಬ್, ಲ್ಯಾಪ್​ಟಾಪ್ ಎಂದು ಅಂತರ್ಜಾಲದ ಸುಳಿಯಲ್ಲಿ ಇರುವಾಗ ವೈರಲ್ ಆಗುವ ವಿಚಾರಗಳು ಒಂದೆರಡಲ್ಲ. ಅದು ಹೇಗೋ ಯಾವ್ಯಾವುದೋ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿರುತ್ತವೆ. ಅಂಥಾದ್ದೇ ಒಂದು ಘಟನೆ ಇಂದು ನಡೆದಿದೆ. ಟ್ವಿಟ್ಟರ್​ನಲ್ಲಿ ವೈರಲ್ ಆಗಿ ಓಡಾಡುತ್ತಿರುವ ಈ ವಿಷಯವೇನೆಂದು ತಿಳಿದರೆ ನಿಮಗೇ ಆಶ್ಚರ್ಯವಾಗಬಹುದು.

11ನೇ ತರಗತಿ ಅಂದರೆ, ಪ್ರಥಮ ಪಿಯುಸಿ ಹುಡುಗನೋರ್ವ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ. ಮೆಸೇಜ್ ಕಳುಹಿಸಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ಹುಡುಗನ ಪ್ರೀತಿ ಸಂದೇಶಕ್ಕೆ ಹುಡುಗಿ ಕೊಟ್ಟ ರಿಪ್ಲೈ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ, ಚಕಿತಗೊಳಿಸಿದೆ.

ಹೊಸ ಕಾಲದಲ್ಲಿ ಸಣ್ಣ ಪುಟ್ಟ ಮಕ್ಕಳೂ ಲವ್ ಎಂಬ ಸುಳಿಯಲ್ಲಿ ಸಿಲುಕಿರುವುದನ್ನು ನೀವು ಗಮನಿಸಿರಬಹುದು. ಹಿಂದೆಲ್ಲಾ ಹುಡುಗ-ಹುಡುಗಿ ಕೈ ಹಿಡಿದು ನಡೆಯುವುದು, ತಬ್ಬಿಕೊಳ್ಳುವುದು, ಹೂ ಕೊಡುವುದು, ಪ್ರೇಮ ಪತ್ರ ಬರೆಯುವುದು ಇಷ್ಟನ್ನೇ ಕಾಣುತ್ತಿದ್ದರು. ಆಗಾಗ್ಗೆ ಇಂಥಾ ಘಟನೆಗಳು ಕಣ್ಣು ಕುಕ್ಕಲು ಆಗ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣ ಇರಲಿಲ್ಲ. ಹೆಚ್ಚಿನ ಸಿನಿಮಾಗಳಲ್ಲೂ ಅಂಥಾ ಪ್ರಭಾವ, ಪರಿಣಾಮ ಬೀರುವಂತ ದೃಶ್ಯಗಳು ಇರುತ್ತಿರಲಿಲ್ಲ. ಇದ್ದರೂ ಅಂತವು ಮಕ್ಕಳ ಕೈಗೆ ಸಿಗುತ್ತಿರಲಿಲ್ಲ. ಕಣ್ಣಿಗೆ ಬೀಳುತ್ತಿರಲಿಲ್ಲ. ಈಗ ಪುಟಾಣಿ ಹುಡುಗರೂ ಲವ್ ಎಂದರೆ ಏನೆಂದು ಅವರದೇ ಅರ್ಥ ಹೇಳುತ್ತಾರೆ. ಪ್ರೀತಿ ಎಂದರೆ ನೂರು ಬಗೆಯ ಕಲ್ಪನೆಗಳಲ್ಲಿ ಬೀಳುತ್ತಾರೆ. ಸಾಮಾಜಿಕ ಜಾಲತಾಣ, ಇಂಟರ್​ನೆಟ್, ಟಿವಿ ಎಲ್ಲವೂ ತನ್ನ ಪ್ರಭಾವ ವಿಸ್ತರಿಸಿದೆ.

ಪ್ರೀತಿ ಹೇಳುವಲ್ಲಿಯೂ ಅಷ್ಟೆ. ಯೋಚಿಸಲು, ಅರ್ಥ ಮಾಡಿಕೊಳ್ಳಲು ಸಮಯ ನೀಡುವುದಿಲ್ಲ. ತಕ್ಷಣಕ್ಕೆ ಎಲ್ಲವೂ ಆಗಿಬಿಡಬೇಕು ಎಂದು ಅವಸರ. ಜತೆಗೆ, ಪ್ರೀತಿ ಹೇಳಿಕೊಳ್ಳಲು ಹೊಸ ಮಾರ್ಗ ಬೇಕು. ಸರ್ಪ್ರೈಸ್ ನೀಡಬೇಕು ಎಂದು ಸಿನಿಮೀಯವಾಗಿ ಯೋಚಿಸುವವರೂ ಹೆಚ್ಚು. ಅಂಥದ್ದೇ ಘಟನೆ ಇಲ್ಲೂ ನಡೆದಿದೆ.

11ನೇ ತರಗತಿಯ ಹುಡುಗನೊಬ್ಬ ಹುಡುಗಿಗೆ ಪ್ರಪೋಸ್ ಮೆಸೇಜ್ ಮಾಡಿದ್ದಾನೆ. ‘ನಾನು ದೆಹಲಿಯವನು. 11ನೇ ತರಗತಿಯ ವಿದ್ಯಾರ್ಥಿ. ನೀವು ತುಂಬಾ ಸುಂದರವಾಗಿದ್ದೀರಿ. ನೀವು ನನ್ನ ಗರ್ಲ್ ಫ್ರೆಂಡ್ ಆಗ್ತೀರಾ?’ ಎಂದು ಸಂದೇಶ ಕಳುಹಿಸಿ ಕೇಳಿದ್ದಾನೆ. ಈ ಸಂದೇಶಕ್ಕೆ ಹುಡುಗಿ ಪ್ರತಿಕ್ರಿಯೆ ನೀಡಿಲ್ಲ. ಇದಾದ ಬಳಿಕ ಹುಡುಗ ಮತ್ತೆ ಇನ್ನೊಂದು ಸಂದೇಶ ಕಳಿಸಿದ್ದಾನೆ.

‘ನನ್ನ ತಂದೆ ಇಲ್ಲಿ ಶಿಪ್ಪಿಂಗ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ತುಂಬಾ ದೊಡ್ಡ ವ್ಯವಹಾರ ಮಾಡುತ್ತಿದ್ದಾರೆ. ನೀವು ಏನು ಕೇಳಿದರೂ ಮಾಡಲು ನಾನು ತಯಾರಿದ್ದೇನೆ. ಆದ್ರೆ, ಪ್ಲೀಸ್ ನನ್ನ ಗರ್ಲ್ ಫ್ರೆಂಡ್ ಆಗಿ’ ಎಂದು ಮತ್ತೊಂದು ಮೆಸೇಜ್ ಕಳಿಸಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿರುವ ಹುಡುಗಿ, ‘ಹಾಗಿದ್ದರೆ, ಪ್ಲೀಸ್ ಶಾಲೆ ತೆರೆಯಿರಿ’ ಎಂದು ಹೇಳಿದ್ದಾರೆ.

ಜತೆಗೆ, ‘ನಿಮ್ಮ ತಂದೆ ಶ್ರೀಮಂತರಾಗಿರುವುದಕ್ಕೆ ನಾನೇನು ಮಾಡಲಿ. ಈ ಮಗು ತನ್ನ ತಂದೆಯ ಸಾಮರ್ಥ್ಯ ಉಪಯೋಗಿಸಿ ನನಗೆ ಹೀಗೆ ಸಂದೇಶ ಕಳಿಸುತ್ತಿದೆ’ ಎಂದು ಕಟುವಾಗಿ ರಿಪ್ಲೈ ಮಾಡಿದ್ದಾರೆ. ಸಣ್ಣ ವಯಸ್ಸಿನ ಹುಡುಗರು ಪ್ರೀತಿ ಪ್ರೇಮ ಎಂಬ ಹೆಸರಲ್ಲಿ ಹೀಗೆ ಸಂದೇಶ ಕಳುಹಿಸಿ ಎಡವಟ್ಟು ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇಂಥಾ ಘಟನೆಗಳು ಹಲವು ನಡೆದರೂ ಹುಡುಗರು ವಯಸ್ಸಿನ ಕಾರಣದಿಂದ ಹಳಿ ತಪ್ಪಿ ಅಡ್ಡಾದಿಡ್ಡಿ ನಡೆಯುವಂತಾಗಿದೆ. ಆ್ಯಂಟಿ ಪಿಜೆನ್ ಎಂಬ ಟ್ವಿಟರ್ ಹ್ಯಾಂಡಲ್ ಈ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದ ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Shreya Ghoshal | ತಾಯಿ ಆಗಲಿದ್ದಾರೆ ಶ್ರೇಯಾ ಘೋಶಾಲ್​: ವೈರಲ್​ ಆಯ್ತು ಗಾಯಕಿಯ ಹೊಸ ಫೋಟೋ

ಸಚಿನ್ ತೆಂಡೂಲ್ಕರ್​ ಕ್ರಿಕೆಟ್ ಯಶಸ್ಸಿನ ರಹಸ್ಯ ತೆರೆದಿಟ್ಟ ಕಿರುಚಿತ್ರ ವೈರಲ್

Published On - 4:27 pm, Fri, 5 March 21