ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಯಶಸ್ಸಿನ ರಹಸ್ಯ ತೆರೆದಿಟ್ಟ ಕಿರುಚಿತ್ರ ವೈರಲ್
Sachin Tendulkar: ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜೀವನದ ಕೆಲವು ಕ್ಷಣಗಳನ್ನು ಸೇರಿಸಿ ಮಾಡಿದ ಮಾಂಟೇಜ್ಗಳ ಸಂಕಲನ ಇದಾಗಿದೆ. ಸೋಲೇ ಗೆಲುವಿನ ಸೋಪಾನ ಎಂದು ಬಿಂಬಿಸುವ ಈ ಕಿರುಚಿತ್ರ ಜನಮೆಚ್ಚುಗೆಗೆ ಪಾತ್ರವಾಗಿದೆ.
ಸೋಲೇ ಗೆಲುವಿನ ಸೋಪಾನ ಎಂಬ ಮಾತು ಜನಜನಿತ. ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ತಿಳಿದಿರುವ ಮಾತಿದು ಎನ್ನಬಹುದು. ಸೋಲನ್ನು ಕೆಟ್ಟದಾಗಿ ಕಾಣದೆ, ಅದನ್ನು ಕೂಡ ಧನಾತ್ಮಕವಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲನ್ನು ಹತ್ತಬೇಕು ಎಂದು ಈ ಮಾತು ಪಾಠ ಹೇಳುತ್ತದೆ. ಇದೇ ನುಡಿಯನ್ನು ಆಧಾರವಾಗಿರಿಸಿ ಅಥವಾ ಇದನ್ನೇ ಹೇಳುವಂಥ ಪುಟ್ಟ ವಿಡಿಯೊ ಒಂದನ್ನು ಅನ್ಅಕಾಡೆಮಿ ಎಂಬ ಸಂಸ್ಥೆ ಹಂಚಿಕೊಂಡಿದೆ. ಕ್ರಿಕೆಟ್ ದೇವರು ಎಂದು ಕರೆಸಿಕೊಂಡಿರುವ ಸಚಿನ್ ತೆಂಡೂಲ್ಕರ್ ವೃತ್ತಿ ಬದುಕಿನ ಏರಿಳಿತಗಳನ್ನು ವಸ್ತುವಾಗಿ ಇಟ್ಟುಕೊಂಡು ವಿಡಿಯೊ ತಯಾರಿಸಲಾಗಿದೆ. ಚುಟುಕಾಗಿ ಹೇಳುವುದಿದ್ದರೆ never give up ಎಂಬ ಸ್ಫೂರ್ತಿಯನ್ನು ಈ ವಿಡಿಯೊ ನೀಡುತ್ತದೆ.
ವಿಡಿಯೊವನ್ನು ಲೊವ್ ಲಿಂಟಾಸ್ ಎಂಬ ಜಾಹೀರಾತು ಕಂಪೆನಿ ತಯಾರಿಸಿದೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜೀವನದ ಕೆಲವು ಕ್ಷಣಗಳನ್ನು ಸೇರಿಸಿ ಮಾಡಿದ ಮಾಂಟೇಜ್ಗಳ ಸಂಕಲನ ಇದಾಗಿದೆ. ಚಿತ್ರವು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೈದಾನಕ್ಕೆ ನಡೆದು ಬರುತ್ತಿರುವ ಶಾಟ್ನೊಂದಿಗೆ ಆರಂಭವಾಗಿದೆ. ಬಳಿಕ, ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಬೌಲಿಂಗ್ ಮಾಡಲು ತಯಾರಾಗಿ ನಿಲ್ಲುತ್ತಾರೆ. ಜತೆಗೆ ವಿಶ್ವ ಕ್ರಿಕೆಟ್ನ ದಿಗ್ಗಜ ಎಸೆತಗಾರರು ಸಚಿನ್ಗೆ ಬಾಲ್ ಹಾಕುತ್ತಾರೆ. ಅಖ್ತರ್ ಎಸೆದ ಒಂದು ಎಸೆತದಲ್ಲಿ ಸಚಿನ್ ಮುಖದ ಮೇಲೂ ಚೆಂಡು ಬೀಳುತ್ತದೆ.
ಕಿರುಚಿತ್ರವು ಬಳಿಕ, 1989ರಲ್ಲಿ ಸಚಿನ್ ಆಡಿದ ಮೊದಲ ಏಕದಿನ ಪಂದ್ಯದ ಶಾಟ್ ಒಂದನ್ನು ತೋರಿಸುತ್ತದೆ. ಆ ಪಂದ್ಯದಲ್ಲಿ ಸಚಿನ್ ಎರಡನೇ ಎಸೆತಕ್ಕೆ, ರನ್ ಗಳಿಸಲು ವಿಫಲರಾಗಿ, ಶೂನ್ಯಕ್ಕೆ ಔಟ್ ಆಗಿದ್ದರು. ಆ ದೃಶ್ಯವನ್ನು ಇಲ್ಲಿ ಅಂದವಾಗಿ ಪೋಣಿಸಲಾಗಿದೆ.
ಆ ನಂತರ, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಎಸೆತಗಾರರು ಸಚಿನ್ನ್ನು ಔಟ್ ಮಾಡಿರುವ ಹಲವು ಕ್ಷಣಗಳು ಬಂದು ಹೋಗುತ್ತವೆ. ಸಚಿನ್ ಬೋಲ್ಡ್ ಆಗಿ ಔಟಾದ ಕೆಲವಾರು ಕ್ಷಣಗಳು ಕಾಣುತ್ತವೆ. 2003ರಲ್ಲಿ ಗಬ್ಬಾ ಮೈದಾನದಲ್ಲಿ, ಸ್ಟೀವ್ ಬಕ್ನರ್ ಸಚಿನ್ ಔಟ್ ಎಂದು ನೀಡಿದ್ದ ತಪ್ಪು ತೀರ್ಪನ್ನು ಕೂಡ ಇಲ್ಲಿ ಜೋಡಿಸಿದ್ದಾರೆ. ಇಂಥಾ ಕ್ಷಣಗಳನ್ನು ನೋಡಿದ ಅಭಿಮಾನಿಗಳ ಮುಖ ಸಪ್ಪೆಯಾದದ್ದನ್ನೂ ಮನಮುಟ್ಟುವಂತೆ ತೋರಿಸಲಾಗಿದೆ. ಸಚಿನ್ ತೆಂಡೂಲ್ಕರ್ ಅಪ್ಪಟ ಅಭಿಮಾನಿ, ಮೈತುಂಬಾ ಭಾರತ ಧ್ವಜದ ತ್ರಿವರ್ಣ ಹಾಕಿ, ಶಂಖ, ಬಾವುಟ ಹಿಡಿದು ರಂಜಿಸುವಾತನೂ ಈ ವಿಡಿಯೊದಲ್ಲಿ ಇದ್ದಾನೆ.
‘Failure. The fuel of champions’ ಎಂಬ ಸಾಲನ್ನು ನೀಡಲಾಗಿದೆ. ಸಚಿನ್ ಕ್ರಿಕೆಟ್ ಜೀವನದ ಯಶಸ್ವಿ ದಿನಗಳನ್ನು ನಂತರ ತೋರಿಸಲಾಗಿದೆ. ಶೇನ್ ವಾರ್ನ್, ಗ್ಲೆನ್ ಮೆಗ್ರಾತ್, ಶೋಯೆಬ್ ಅಖ್ತರ್ ಸಹಿತ ಇತರ ಬೌಲಿಂಗ್ಗೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಶಾಟ್ಗಳನ್ನು ಪೋಣಿಸಲಾಗಿದೆ.
ಸಚಿನ್ ತೆಂಡೂಲ್ಕರ್ರನ್ನು ಈ ಆಯಾಮದಲ್ಲಿ ತೋರಿಸಿಲ್ಲ. ಸಚಿನ್ನ ಬದ್ಧತೆ, ಕಠಿಣ ಪರಿಶ್ರಮವು ಸುಮಾರು ಎರಡೂವರೆ ದಶಕಗಳ ಕ್ರೀಡಾ ಬದುಕಿನ ವಿಜೃಂಭಣೆಯಲ್ಲಿ ಮರೆಯಾಗಿರಬಹುದು. ಸಚಿನ್ ನಡೆದು ಬಂದ ಹಾದಿ ತೋರಿಸಿ, ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವುದು ನಮ್ಮ ಉದ್ದೇಶ ಎಂದು ಅನ್ಅಕಾಡೆಮಿಯ ಮಾರ್ಕೆಟಿಂಗ್ ಆಫೀಸರ್ ಕರಣ್ ಶ್ರಾಫ್ ತಿಳಿಸಿದ್ದಾರೆ.
ಸಚಿನ್ ಕುರಿತ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತರ ಕ್ರಿಕೆಟಿಗರು, ಸಚಿನ್ ಅಭಿಮಾನಿಗಳು ವಿಡಿಯೊ ಹಂಚಿಕೊಂಡು ಸಂತಸಪಟ್ಟಿದ್ದಾರೆ.
Nothing has changed. Still the same emotions while watching the legend in action! God of Cricket, truly! #TheGreatestLesson #SachinUnacademyFilm @sachin_rt pic.twitter.com/YpdplsHG0B
— Suresh Raina?? (@ImRaina) March 2, 2021
Failures don’t define us. @sachin_rt and his never give up attitude is proof. Thank you for this inspiring film Unacademy. Jai Ho! ??#TheGreatestLesson #SachinUnacademyFilm pic.twitter.com/sTxuDXQZJm
— Anupam Kher (@AnupamPKher) March 2, 2021
Many emotions as I watch this. Good on you Unacademy for chronicling the journey of the mighty @sachin_rt #TheGreatestLesson #SachinUnacademyFilm pic.twitter.com/ab9PjlO4Ae
— Harsha Bhogle (@bhogleharsha) March 2, 2021
Published On - 7:08 pm, Tue, 2 March 21