ಅಧಿಕಾರಿಗಳ ಎಡವಟ್ಟು: ನೆಗಟಿವ್ ಬಂದಿದ್ರೂ ಯುವಕನನ್ನ ಆಸ್ಪತ್ರೆಗೆ ಅಡ್ಮಿಟ್, ಮುಂದೇನಾಯ್ತು?
ಬೆಂಗಳೂರು ಗ್ರಾಮಾಂತರ: ಸರ್ಕಾರಕ್ಕೆ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಹೆಚ್ಚುತ್ತಿರುವುದು ಒಂದು ಕಡೆ ತಲೆ ನೋವಾಗಿದ್ದರೆ ಮತ್ತೊಂದು ಕಡೆ ಬೆಂಗಳೂರು ಮಹಾನಗರ ಪಾಲಿಕೆಯು ಒಂದರ ಮೇಲೊಂದರಂತೆ ಮಾಡುತ್ತಿರುವ ಎಡವಟ್ಟುಗಳ ಮತ್ತಷ್ಟು ತಲೆಬಿಸಿ ಉಂಟುಮಾಡಿದೆ. ಇದೀಗ, ಪಾಸಿಟಿವ್ ಬಂದಿದ್ದ ಸೊಂಕಿತನೊಬ್ಬನನ್ನ ಮನೆಗೆ ಕಳುಹಿಸಿ ನೆಗಟಿವ್ ವರದಿಯಾಗಿದ್ದ ಯುವಕನನ್ನ ಕೊವಿಡ್ ಆಸ್ಪತ್ರೆಗೆ ದಾಖಲಿಸಿಕೊಂಡಿರುವ ಪ್ರಕರಣ ಜಿಲ್ಲೆಯ ಹೊಸಕೋಟೆಯಲ್ಲಿ ಬೆಳಕಿಗೆ ಬಂದಿದೆ. ಜುಲೈ 1 ರಂದು ರಷ್ಯಾದಿಂದ ಬಂದವರನ್ನ ವೈಟ್ಫೀಲ್ಡ್ ಬಳಿ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. […]
ಬೆಂಗಳೂರು ಗ್ರಾಮಾಂತರ: ಸರ್ಕಾರಕ್ಕೆ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಹೆಚ್ಚುತ್ತಿರುವುದು ಒಂದು ಕಡೆ ತಲೆ ನೋವಾಗಿದ್ದರೆ ಮತ್ತೊಂದು ಕಡೆ ಬೆಂಗಳೂರು ಮಹಾನಗರ ಪಾಲಿಕೆಯು ಒಂದರ ಮೇಲೊಂದರಂತೆ ಮಾಡುತ್ತಿರುವ ಎಡವಟ್ಟುಗಳ ಮತ್ತಷ್ಟು ತಲೆಬಿಸಿ ಉಂಟುಮಾಡಿದೆ. ಇದೀಗ, ಪಾಸಿಟಿವ್ ಬಂದಿದ್ದ ಸೊಂಕಿತನೊಬ್ಬನನ್ನ ಮನೆಗೆ ಕಳುಹಿಸಿ ನೆಗಟಿವ್ ವರದಿಯಾಗಿದ್ದ ಯುವಕನನ್ನ ಕೊವಿಡ್ ಆಸ್ಪತ್ರೆಗೆ ದಾಖಲಿಸಿಕೊಂಡಿರುವ ಪ್ರಕರಣ ಜಿಲ್ಲೆಯ ಹೊಸಕೋಟೆಯಲ್ಲಿ ಬೆಳಕಿಗೆ ಬಂದಿದೆ.
ಜುಲೈ 1 ರಂದು ರಷ್ಯಾದಿಂದ ಬಂದವರನ್ನ ವೈಟ್ಫೀಲ್ಡ್ ಬಳಿ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ, ಕೋವಿಡ್ ಟೆಸ್ಟ್ ನಲ್ಲಿ 32 ಜನರಿಗೆ ಲಕ್ಷಣ ಕಂಡು ಬಂದಿದ್ದು ಅವರನ್ನು ಕೊವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಮಧ್ಯೆ, ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಪಾಸಿಟಿವ್ ಬಂದ ಓರ್ವನನ್ನ ಮನೆಗೆ ಕಳಿಸಿ ನೆಗಟಿವ್ ಬಂದಿದ್ದ ಯುವಕನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಆಸ್ಪತ್ರೆಗೆ ಸೇರಿಸಿದ್ದ ಯುವಕನ ಮೊಬೈಲ್ಗೆ ನೆಗಟಿವ್ ರಿಪೋರ್ಟ್ ಎಂಬ ಮೆಸೇಜ್ ಬಂದಿದ್ದು ಇದೀಗ ಆತ ತನ್ನನ್ನು ಮನೆಗೆ ಕಳಿಸುವಂತೆ ಮನವಿ ಮಾಡಿದ್ದಾನೆ. ಆದರೆ, ಇದಕ್ಕೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲವಂತೆ.
ಈ ಮಧ್ಯೆ ತನ್ನ ತಂದೆಗೆ ಕರೆಮಾಡಿದ ಯುವಕ ಆತನನ್ನು ಆಸ್ಪತ್ರೆ ಬಳಿ ಕರೆಸಿ ನಂತರ ಕಾರಿನಲ್ಲಿ ಪರಾರಿಯಾಗಿದ್ದಾನೆ. ಇದೀಗ, ಎಸ್ಕೇಪ್ ಆಗಿದ್ದ ಯುವಕನನ್ನ ವಾಪಸ್ ಕರೆತರಲು ಹೋಗಿದ್ದ ಅಧಿಕಾರಿಗಳಿಗೆ ತಮ್ಮ ಎಡವಟ್ಟಿನ ಅರಿವಾಗಿದೆ. ಆಸ್ವತ್ರೆಯಲ್ಲಿ ಸೊಂಕಿತರ ಜೊತೆಗೆ ಯುವಕನಿದ್ದ ಕಾರಣದಿಂದ ಇದೀಗ ಆತನನ್ನು ಹೊಸಕೋಟೆ ಬಳಿ ಕ್ವಾರಂಟೈನ್ ಮಾಡಲಾಗಿದೆ. ಮತ್ತೊಮ್ಮೆ ಕೊವಿಡ್ ಟೆಸ್ಟ್ ಮಾಡಿಸಿ ರಿಪೋರ್ಟ್ ನೆಗಟಿವ್ ಬಂದ್ರೆ ಆತನನ್ನು ಮನೆಗೆ ಕಳಿಸುವುದಾಗಿ ತಿಳಿಸಿದ್ದಾರೆ.
Published On - 12:13 pm, Sat, 11 July 20