ಸೇರಿದ ಒಂದೇ ದಿನಕ್ಕೆ ಮದ್ಯವ್ಯಸನ ಬಿಡಿಸುವ ಕೇಂದ್ರದಲ್ಲಿ ವ್ಯಕ್ತಿ ನಿಗೂಢ ಸಾವು!
ಮೈಸೂರು: ಮದ್ಯವ್ಯಸನ ಬಿಡಿಸುವ ಕೇಂದ್ರದಲ್ಲಿ ವ್ಯಕ್ತಿ ನಿಗೂಢ ಸಾವಾಗಿದೆ. ಮೈಸೂರು ನಗರದ ಯೂನಿವರ್ಸಿಟಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಬನ್ನಿಮಂಟಪದ ನಿವಾಸಿ ಅಲ್ತಾಫ್ ಪಾಷಾ(34) ಮೃತ ದುರ್ದೈವಿ. ಕುಡಿತದ ಚಟ ಬಿಡಿಸುವುದಕ್ಕೆ ಅಲ್ತಾಫ್ ಪೋಷಕರು ನಿನ್ನೆ ಆತನನ್ನು ಮೈಸೂರಿನ ಯೂನಿವರ್ಸಿಟಿ ಲೇಔಟ್ನಲ್ಲಿರುವ ಉಸಿರು ಫೌಂಡೇಷನ್ಗೆ ಸೇರಿಸಿದ್ದರು. ಪುನರ್ವಸತಿ ಕೇಂದ್ರಕ್ಕೆ ಸೇರಿದ ಮೊದಲ ದಿನವೇ ಅಲ್ತಾಫ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಅಲ್ತಾಫ್ ಪಾಷಾ ಹಣೆಯ ಮೇಲೆ ಗಾಯದ ಗುರುತು ಪತ್ತೆಯಾಗಿದ್ದು, ಅಲ್ತಾಫ್‌ಗೆ ಹಿಂಸೆ ನೀಡಿ […]
ಮೈಸೂರು: ಮದ್ಯವ್ಯಸನ ಬಿಡಿಸುವ ಕೇಂದ್ರದಲ್ಲಿ ವ್ಯಕ್ತಿ ನಿಗೂಢ ಸಾವಾಗಿದೆ. ಮೈಸೂರು ನಗರದ ಯೂನಿವರ್ಸಿಟಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಬನ್ನಿಮಂಟಪದ ನಿವಾಸಿ ಅಲ್ತಾಫ್ ಪಾಷಾ(34) ಮೃತ ದುರ್ದೈವಿ.
ಕುಡಿತದ ಚಟ ಬಿಡಿಸುವುದಕ್ಕೆ ಅಲ್ತಾಫ್ ಪೋಷಕರು ನಿನ್ನೆ ಆತನನ್ನು ಮೈಸೂರಿನ ಯೂನಿವರ್ಸಿಟಿ ಲೇಔಟ್ನಲ್ಲಿರುವ ಉಸಿರು ಫೌಂಡೇಷನ್ಗೆ ಸೇರಿಸಿದ್ದರು. ಪುನರ್ವಸತಿ ಕೇಂದ್ರಕ್ಕೆ ಸೇರಿದ ಮೊದಲ ದಿನವೇ ಅಲ್ತಾಫ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಅಲ್ತಾಫ್ ಪಾಷಾ ಹಣೆಯ ಮೇಲೆ ಗಾಯದ ಗುರುತು ಪತ್ತೆಯಾಗಿದ್ದು, ಅಲ್ತಾಫ್‌ಗೆ ಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.