ತಮಿಳು ನಟ ಸೂರ್ಯಗೆ ಕೊರೊನಾ ದೃಢ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸೂರ್ಯ

ತಮಿಳು ನಟ ಸೂರ್ಯಗೆ ಕೊರೊನಾ ಸೋಂಕು ತಗುಲಿರುವುದು ಖಾತರಿಯಾಗಿದೆ. ಈ ಕುರಿತಂತೆ ನಟ ಸೂರ್ಯ ತನ್ನ ಟ್ವೀಟ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ತಮಿಳು ನಟ ಸೂರ್ಯಗೆ ಕೊರೊನಾ ದೃಢ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸೂರ್ಯ
ತಮಿಳು ನಟ ಸೂರ್ಯ ಶಿವಕುಮಾರ್
Edited By:

Updated on: Feb 08, 2021 | 10:23 AM

ಚೆನ್ನೈ: ತಮಿಳು ನಟ ಸೂರ್ಯಗೆ ಕೊರೊನಾ ಸೋಂಕು ತಗುಲಿರುವುದು ಖಾತರಿಯಾಗಿದೆ. ಈ ಕುರಿತಂತೆ ನಟ ಸೂರ್ಯ ತಮ್ಮ ಟ್ವೀಟ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತಂತೆ ಅಭಿಮಾನಿಗಳೆಲ್ಲ ಸೂರ್ಯ ಬೇಗ ಚೇತರಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುವ ಮೂಲಕ ನಿಮ್ಮ ಜೊತೆ ನಾವಿದ್ದೇವೆ ಎಂಬುದಾಗಿ ಧೈರ್ಯ ತುಂಬಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸೂರ್ಯ, ನನಗೆ ಕೊರೊನಾ ವೈರಸ್ ತಗುಲಿದೆ. ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಆರೋಗ್ಯದ ಕಡೆಗೆ ಗಮನ ಕೊಡಬೇಕು. ನನ್ನನ್ನು ಆರೈಕೆ ಮಾಡಿದ ವೈದ್ಯರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನು ಗಮನಿಸಿದ ಅಭಿಮಾನಿಗಳೆಲ್ಲ, ಸೂರ್ಯ ಬೇಗ ಗುಣಮುಖರಾಗುವಂತೆ ಹಾರೈಸಿದ್ದು, ನಮ್ಮ ಪ್ರೀತಿ ನಿಮ್ಮ ಮೇಲಿದೆ ಎಂದು ಪ್ರೀತಿ ತೋರಿದ್ದಾರೆ.

ನಟ ಆಹುತಿ ರಾಜಶೇಖರ್​ಗೆ ಕೊರೊನಾ ಸೋಂಕು, ತಾರಾ ಪತ್ನಿಯೂ ಗಂಭೀರ