ತಮಿಳು ಧಾರಾವಾಹಿ ಪಾಂಡಿಯನ್ ಸ್ಟೋರ್ಸ್‌ ಖ್ಯಾತಿಯ ನಟಿ ಚಿತ್ರಾ ಆತ್ಮಹತ್ಯೆ

ಜನಪ್ರಿಯ ತಮಿಳು ಧಾರವಾಹಿ ಪಾಂಡಿಯನ್ ಸ್ಟೋರ್ಸ್‌ನಲ್ಲಿ ಮುಲ್ಲೈ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಚಿತ್ರಾ ನಜರೆತ್‌ಪೆಟ್ಟೈನ ಪಂಚತಾರಾ ಹೋಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

ತಮಿಳು ಧಾರಾವಾಹಿ ಪಾಂಡಿಯನ್ ಸ್ಟೋರ್ಸ್‌ ಖ್ಯಾತಿಯ ನಟಿ ಚಿತ್ರಾ ಆತ್ಮಹತ್ಯೆ
ನಟಿ ಚಿತ್ರಾ

Updated on: Dec 09, 2020 | 2:18 PM

ಹೈದರಾಬಾದ್: ತಮಿಳು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದ ವಿಜೆ ಚಿತ್ರಾ(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನೈ ಬಳಿಯ ಖಾಸಗಿ ಹೋಟೆಲ್‌ನ ತಾವು ತಗ್ಗಿದ್ದ ಕೋಣೆಯೊಂದರಲ್ಲಿ ನಟಿ ಚಿತ್ರಾ ನೇಣಿಗೆ ಶರಣಾಗಿದ್ದಾರೆ.

ನಟಿ ಚಿತ್ರಾಳಿಗೆ ಚೆನ್ನೈ ಮೂಲದ ಹೇಮಂತ್ ಜೊತೆ‌‌ ಕುಟುಂಬಸ್ಥರು ವಿವಾಹ‌ ನಿಶ್ಚಯ ಮಾಡಿದ್ದರು. ಆತ್ಮಹತ್ಯೆ ಕಾರಣವೇನೆಂಬುವುದು ಇನ್ನು ತಿಳಿದು ಬಂದಿಲ್ಲ. ಪೂನಮಲ್ಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಶೂಟಿಂಗ್ ಮುಗಿಸಿ ಹೋಟೆಲ್ ಕೋಣೆಗೆ ಬಂದ ನಟಿ ಆತ್ಮಹತ್ಯೆ:
ಜನಪ್ರಿಯ ಧಾರವಾಹಿ ಪಾಂಡಿಯನ್ ಸ್ಟೋರ್ಸ್‌ನಲ್ಲಿ ಮುಲ್ಲೈ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಚಿತ್ರಾ ನಜರೆತ್‌ಪೆಟ್ಟೈನ ಪಂಚತಾರಾ ಹೋಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಚಿತ್ರಾ ಇವಿಪಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ಇಂದು ಮುಂಜಾನೆ 2:30 ಕ್ಕೆ ತನ್ನ ಹೋಟೆಲ್ ಕೋಣೆಗೆ ಮರಳಿದ್ದರು ಎಂದು ಮೂಲಗಳು ತಿಳಿಸಿವೆ. ನಟಿ ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹೇಮಂತ್ ಜೊತೆ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಚಿತ್ರಾ ತಮಿಳಿನ ಹಲವು ಟಿವಿ ಚಾನೆಲ್‌ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದು ಮುಲ್ಲೈ ಪಾತ್ರದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದರು. ಅಲ್ಲದೆ, ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಫೋಟೋಗಳು ಮತ್ತು ಪೋಸ್ಟ್‌ಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

ಧಾರವಾಹಿಗಳಲ್ಲಿ ನಟಿಸುತ್ತಿದ್ದ ಸಮೀರ ಮತ್ತು ಅನುಪಮಾ ಆತ್ಮಹತ್ಯೆ

Published On - 9:25 am, Wed, 9 December 20