ಮಗನನ್ನು ಪರೀಕ್ಷೆಗೆ ಕರೆದೊಯ್ಯುವಾಗ ದುರ್ಘಟನೆ: ಶಿಕ್ಷಕ ಸ್ಥಳದಲ್ಲೇ ಸಾವು
ರಾಯಚೂರು: ಮಗನನ್ನು SSLC ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರ ಗ್ರಾಮದ ಬಳಿ ನಡೆದಿದೆ. 50 ವರ್ಷದ ಶಿಕ್ಷಕ ನಾಗರೆಡ್ಡಿ ಮೃತ ದುರ್ದೈವಿ. ನಾಗರೆಡ್ಡಿ ಗಬ್ಬೂರದಲ್ಲಿದ್ದ SSLC ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಗನನ್ನ ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ರಸ್ತೆ ಮಧ್ಯೆ ನಿಂತಿದ್ದ ದನಗಳಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ರಾಯಚೂರು: ಮಗನನ್ನು SSLC ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರ ಗ್ರಾಮದ ಬಳಿ ನಡೆದಿದೆ. 50 ವರ್ಷದ ಶಿಕ್ಷಕ ನಾಗರೆಡ್ಡಿ ಮೃತ ದುರ್ದೈವಿ.
ನಾಗರೆಡ್ಡಿ ಗಬ್ಬೂರದಲ್ಲಿದ್ದ SSLC ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಗನನ್ನ ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ರಸ್ತೆ ಮಧ್ಯೆ ನಿಂತಿದ್ದ ದನಗಳಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
Published On - 10:18 am, Thu, 25 June 20