ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ನಂತರ ಟೀಮ್​ ಇಂಡಿಯಾ ಸದಸ್ಯರಿಗೆ 3-4 ವಾರಗಳ ಮುಕ್ತ ಬಿಡುವು!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ನಂತರ ಟೀಮ್​ ಇಂಡಿಯಾ ಸದಸ್ಯರಿಗೆ 3-4 ವಾರಗಳ ಮುಕ್ತ ಬಿಡುವು!
ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾ

ಭಾರತ ತಂಡ ಇಂಗ್ಲೆಂಡ್​ಗೆ ಹೊರಡುವ ಮೊದಲು, ಪಿಟಿಐ ಸುದ್ದಿಸಂಸ್ಥೆಯು ಕೊಹ್ಲಿಗೆ 42-ದಿನಗಳ ಅಂತರ ತುಂಬಾ ಅನಿಸುವುದಿಲ್ಲವೇ ಅಂತ ಕೇಳಿತ್ತು. ಅದಕ್ಕೆ ಟೀಮ್ ಇಂಡಿಯಾ ನಾಯಕ, ಅದು ಟೀಮಿನ ಸದಸ್ಯರಿಗೆ ವೆಲ್​ಕಮ್​ ಬ್ರೇಕ್ ಆಗಲಿದೆ ಎಂದು ಹೇಳಿದ್ದರು.

TV9kannada Web Team

| Edited By: Arun Belly

Jun 08, 2021 | 8:42 PM

ಲಂಡನ್: ಸತತವಾಗಿ ದೀರ್ಘಾವಧಿಯವರೆಗೆ ಈಗ ಕಡ್ಡಾಯವಾಗಿರುವ ಬಯೋ-ಬಬಲ್​ಗಳಲ್ಲಿದ್ದು ಮಾನಸಿಕವಾಗಿ ದಣಿಯಬಹುದಾಗಿರುವ ಭಾರತೀಯ ಕ್ರಿಕೆಟ್​ ಆಟಗಾರರಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ (ಡಬ್ಲ್ಯೂಟಿಸಿ) ನಂತರ ಮೂರರಿಂದ ನಾಲ್ಕು ವಾರಗಳ ಬ್ರೇಕ್​ ನೀಡಲು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್​ ನಿರ್ಧರಿಸಿದೆ. ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಡಬ್ಲ್ಯೂಟಿಸಿ ಜೂನ್​ 18ರಿಂದ22ರವರೆಗೆ ಸೌತಾಂಪ್ಟನ್​ನ ಏಜಿಯಸ್​ ಬೋಲ್ ಮೈದಾನದಲ್ಲಿ ನಡೆಯಲಿದೆ. ಅದಾದ ನಂತರ ಸುಮಾರು 20 ದಿನಗಳವರಗೆ ಚದುರಿಹೋಗಲಿರುವ ಭಾರತೀಯ ಆಟಗಾರರರು ಇಂಗ್ಲೆಂಡ್​ ವಿರುದ್ಧ 5-ಪಂದ್ಯಗಳ ಟೆಸ್ಟ್ ಸರಣಿ ಶುರುವಾಗುವ ಮೊದಲು ತಯಾರಿ ಮತ್ತು ತರಬೇತಿಗಾಗಿ ಜುಲೈ 14 ರಂದು ಪುನಃ ಜೊತೆಗೂಡಲಿದ್ದಾರೆ. ಭಾರತ ಮತ್ತ ಇಂಗ್ಲೆಂಡ್​ ನಡುವೆ ಸರಣಿಯ ಮೊದಲ ಟೆಸ್ಟ್ ಆಗಸ್ಟ್​ 4 ರಂದು ನಾಟಿಂಗ್​ಹ್ಯಾಮ್​ನಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್​ಗೆ ಹೊರಡುವ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ನಾಯಕ ವಿರಾಟ್​ ಕೊಹ್ಲಿ ಮತ್ತು ಹೆಡ್​ ಕೋಚ್ ರವಿ ಶಾಸ್ತ್ರೀ ಹೇಳಿದ ಹಾಗೆ ಟೀಮ್ ಇಂಡಿಯಾದ ಆಟಗಾರರಿಗೆ ಬ್ರೇಕ್​ ಸಿಗಲಿದೆ. ಡಬ್ಲ್ಯೂಟಿಸಿ ಫೈನಲ್ ಮತ್ತು ಇಂಗ್ಲೆಂಡ್​ ವಿರುದ್ಧ ನಡೆಯುವ ಮೊದಲ ಟೆಸ್ಟ್​ ನಡುವೆ 6 ವಾರಗಳ ಅಂತರವಿದೆ. ಹಾಗಾಗಿ ಆಟಗಾರರ ಆರೋಗ್ಯದ ಬಗ್ಗೆ ನಾವು ಗಮನ ಹರಿಸಬೇಕಿದೆ. ಯುನೈಟೆಡ್​ ಕಿಂಗ್​ಡಮ್​ನಲ್ಲೇ ರಜೆಗಾಗಿ ಅವರು ಎಲ್ಲಾದರೂ ಹೋಗಬಹುದು. ತಮ್ಮ ಸ್ನೇಹಿತರನ್ನು, ಕುಂಟುಂಬದ ಸದಸ್ಯರನ್ನು ಭೇಟಿಯಾಗಬಹುದು,’ ಎಂದು ಹಿರಿಯ ಬಿಸಿಸಿಐ ಅಧಿಕಾರಿ ಒಬ್ಬರು ಹೇಳಿದ್ದಾರೆ.

ಟೀಮಿನ ಸದಸ್ಯರ ನಡುವೆ ಪಾರ್ಟಿಗಳು ನಡೆಯಲಿರುವುದು ನಿಶ್ಚಿತವಾದರೂ ಅವುಗಳಲ್ಲಿ ಭಾಗವಹಿಸುವ ಅನಿವಾರ್ಯತೆಯೇನೂ ಆಟಗಾರರಿಗೆ ಇರುವುದಿಲ್ಲ. ಬಿಡುವಿನ ಅವಧಿಯನ್ನು ತಮ್ಮ ಮನಸ್ಸಿಗೆ ಬಂದ ಹಾಗೆ ಕಳೆಯಲು ಅವರು ಮುಕ್ತರಾಗಿದ್ದಾರೆ, ಎಂದು ಅವರು ಹೇಳಿದ್ದಾರೆ.

‘ಟೀಮ್ ಇಂಡಿಯಾದ ಸದಸ್ಯರಲ್ಲಿ ಬಹಳಷ್ಟು ಜನ ಹಲವಾರು ಬಾರಿ ಇಂಗ್ಲೆಂಡ್​​ಗೆ ಹೋಗಿರುವುರಿಂದ ಸ್ನೇಹಿತರನ್ನು ಮಾಡಿಕೊಂಡಿದ್ದಾರೆ. ಹಾಗಾಗಿ, ಕೆ ದಿನಗಳ ಮಟ್ಟಿಗೆ ಅವರು ಕ್ರಿಕೆಟ್​ನಿಂದ ದೂರ ಇದ್ದು ಸಂತೋಷವಾಗಿ ಕಾಲ ಕಳೆದರೆ ಮಾನಸಿಕವಾಗಿ ಪ್ರಫುಲ್ಲಗೊಳ್ಳುತ್ತಾರೆ,’ ಎಂದು ಅವರು ಹೇಳಿದ್ದಾರೆ.

ಭಾರತ ತಂಡ ಇಂಗ್ಲೆಂಡ್​ಗೆ ಹೊರಡುವ ಮೊದಲು, ಪಿಟಿಐ ಸುದ್ದಿಸಂಸ್ಥೆಯು ಕೊಹ್ಲಿಗೆ 42-ದಿನಗಳ ಅಂತರ ತುಂಬಾ ಅನಿಸುವುದಿಲ್ಲವೇ ಅಂತ ಕೇಳಿತ್ತು. ಅದಕ್ಕೆ ಟೀಮ್ ಇಂಡಿಯಾ ನಾಯಕ, ಅದು ಟೀಮಿನ ಸದಸ್ಯರಿಗೆ ವೆಲ್​ಕಮ್​ ಬ್ರೇಕ್ ಆಗಲಿದೆ ಎಂದು ಹೇಳಿದ್ದರು.

‘ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ನಂತರ ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ಮತ್ತು ಲವಲವಿಕೆಯನ್ನು ವಾಪಸ್ಸು ತಂದುಕೊಳ್ಳಲು ಈ ಅಂತರ ಅತ್ಯುತ್ತಮ ಅವಕಾಶವೆಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್​ನಲ್ಲಿ ಕೋವಿಡ್ ಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದರೆ ನಾವು ನಮ್ಮ ಕ್ವಾರಂಟೀನ್ ಅವಧಿಗಳನ್ನು ಪೂರೈಸಿಕೊಳ್ಳಬಹುದು, ಮತ್ತು ಕ್ರಿಕೆಟ್​ನಿಂದ ಸಂಪರ್ಕ ಕಡಿದುಕೊಂಡು ರಿಲ್ಯಾಕ್ಸ್ ಮಾಡಬಹುದು,’ ಎಂದು ಕೊಹ್ಲಿ ಹೇಳಿದ್ದರು.

‘ಆಸ್ಟ್ರೇಲಿಯ ಪ್ರವಾಸದಲ್ಲಿ ಎಲ್ಲ ಮೂರು ಸರಣಿಗಳು ಮುಗಿಯುವವರೆಗೂ ನಾವು ಬಯೋ-ಬಬಲ್​ನಲ್ಲಿ ಇರಬೇಕಾಗಿದ್ದ ಸ್ಥಿತಿಯಂತೆ ಇಲ್ಲೂ ಆಗಿದ್ದರೆ ನಮಗೆಲ್ಲ ಬಹಳ ಕಷ್ಟವಾಗುತ್ತಿತ್ತು. ಹೊರಗಡೆ ಸುತ್ತಾಡಲು ಮತ್ತು ನಮಗೆ ಅಗತ್ಯವಿರುವ ವಸ್ತಗಳನ್ನು ಕೊಳ್ಳಲು ನಮಗೆ ಒಂದಷ್ಟು ಸ್ವಾಂತಂತ್ರ್ಯ ಸಿಕ್ಕರೆ ಪುನಃ ಫ್ರೆಶ್​ ಆಗಲು ಮತ್ತು ಮಾನಸಿಕ ತಯಾರಿ ಮಾಡಿಕೊಳ್ಳಲು ನೆರವಾಗುತ್ತದೆ. ಹಾಗಾಗಿ ಈ ಅಂತರವು ನಮಗೆ ಧೀರ್ಘಾವಧಿಯ ಟೆಸ್ಟ್​ ಸರಣಿಗೆ ಮಾನಸಿಕ ಮತ್ತು ದೈಹಿಕ ಸಿದ್ಧತೆ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ,’ ಎಂದು ಕೊಹ್ಲಿ ಹೇಳಿದ್ದರು.

ಇಂಗ್ಲೆಂಡ್ ಅನ್ನು ಅದರ ಹಿತ್ತಲಲ್ಲೇ ಎದುರಿಸಿ ಆಡುವುದು ಸುಲಭವಲ್ಲ, ಈ ಸರಣಿ ನಮಗೆ ದೊಡ್ಡ ಸವಾಲಿನದು ಎಂದು ಕೊಹ್ಲಿ ಹೇಳಿದ್ದರು.

‘ಒಂದು ಕಠಿಣ ಮತ್ತು ದೀರ್ಘಾವಧಿಯ ಸರಣಿ ಆಡುವ ಮೊದಲು ಈ ತೆರನಾದ ಸೆಟ್-ಅಪ್​ ಬಹಳ ಮುಖ್ಯ. ಇಂಗ್ಲೆಂಡ್​ನಲ್ಲಿ ನಡೆಯುವ ಸರಣಿ ಎದೆಗುಂದಿಸುವಂಥದ್ದು ಮತ್ತು ಭಾರೀ ಸವಾಲಿನದು, ಹೀಗಾಗಿ ಸರಣಿ ಆರಂಭಗೊಳ್ಳುವ ಮೊದಲು ನಮಗೆ ಸಾಕಷ್ಟು ಪ್ರಮಾಣದ ಬಿಡುವಿನ ಅವಶ್ಯಕತೆಯಿತ್ತು,’ ಎಂದು ಕೊಹ್ಲಿ ಹೊರಡುವ ಮೊದಲು ಹೇಳಿದ್ದರು.

ನಾಯಕ ಕೊಹ್ಲಿ ಹೇಳಿದ್ದನ್ನೇ ಕೋಚ್​ ರವಿ ಶಾಸ್ತ್ರೀ ಪುನರುಚ್ಛರಿಸಿದ್ದರು.

‘ಆರು ವಾರಗಳ ಅವಧಿಯಲ್ಲಿ 5 ಟೆಸ್ಟ್​ಗಳನ್ನಾಡುವುದು ತಮಾಷೆಯಲ್ಲ. ಆಟಗಾರರ ದೈಹಿಕವಾಗಿ ಮಾತ್ರ ಅಲ್ಲ, ಮಾನಸಿಕವಾಗಿಯೂ ದಣಿಯುತ್ತಾರೆ. ಹಗಲಿರುಳೂ ಮಾಡಿದ್ದನ್ನೇ ಮಾಡು ಅಂತ ಹೇಳಿದರೆ ಮಾನಸಿಕ ಸದೃಢತೆ ಎಷ್ಟೇ ಗಟ್ಟಿಯಾಗಿದ್ದರೂ ಅದು ಶಿಥಿಲಗೊಳ್ಳಲಾರಂಭಿಸುತ್ತದೆ,’ ಎಂದು ಶಾಸ್ತ್ರೀ ಹೇಳಿದ್ದರು.

ಇದನ್ನೂ ಓದಿ: WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಕಿರೀಟ ಯಾರ ಮುಡಿಗೆ? ಭವಿಷ್ಯ ನುಡಿದ ಯುವರಾಜ್; ಕೊಹ್ಲಿ ಪಡೆಗೆ ನಡುಕ!

Follow us on

Related Stories

Most Read Stories

Click on your DTH Provider to Add TV9 Kannada