ವಾರಾಂತ್ಯ ಮದ್ಯರಾತ್ರಿ ಪಾರ್ಟಿ: ತೆಪ್ಪಗೆ ಮನೆಗೆ ಹೋಗದೆ, ತೆಪ್ಪದಲ್ಲಿ ಹೋಗಿ ನೀರುಪಾಲಾದ ಟೆಕ್ಕಿ?
ಬೆಂಗಳೂರು: ವಾರಾಂತ್ಯ ಬಂತೆಂದರೆ ಸಾಕು ಸಿಲಿಕಾನ್ ಸಿಟಿ ಮಂದಿ ಮೋಜು ಮಸ್ತಿಯಲ್ಲಿ ಬ್ಯುಸಿಯಾಗುತ್ತಾರೆ. ನಿನ್ನೆ ತಡರಾತ್ರಿ ರಾಮಮೂರ್ತಿ ನಗರದ ಕೆಲ್ಕೆರೆಯಲ್ಲಿ ಪಾರ್ಟಿ ಮಾಡಿದ್ದ ಇಬ್ಬರು ಟೆಕ್ಕಿಗಳು, ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಕೆಲ್ಕೆರೆಯಲ್ಲಿ ತೆಪ್ಪದಲ್ಲಿ ವಿಹಾರಕ್ಕೆ ತೆರಳಿದ್ದಾರೆ. ಈ ವೇಳೆ ತೆಪ್ಪ ಮಗುಚಿ ಇಬ್ಬರು ಟೆಕ್ಕಿಗಳು ನೀರಿಗೆ ಬಿದ್ದಿದ್ದಾರೆ. ಕೊಡಗು ಮೂಲದ ಸಚಿನ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದರು. ನಿನ್ನೆ ಗೆಳೆಯ ಉಲ್ಲಾಸ್ ಜೊತೆ ಪಾರ್ಟಿ ಮಾಡಲು ಕೆಲ್ಕೆರೆಗೆ ಬಂದಿದ್ದರು. ರಾತ್ರಿ ಪಾರ್ಟಿ ಮುಗಿಸಿಕೊಂಡು ಮಧ್ಯರಾತ್ರಿ 3 ಗಂಟೆ […]
ಬೆಂಗಳೂರು: ವಾರಾಂತ್ಯ ಬಂತೆಂದರೆ ಸಾಕು ಸಿಲಿಕಾನ್ ಸಿಟಿ ಮಂದಿ ಮೋಜು ಮಸ್ತಿಯಲ್ಲಿ ಬ್ಯುಸಿಯಾಗುತ್ತಾರೆ. ನಿನ್ನೆ ತಡರಾತ್ರಿ ರಾಮಮೂರ್ತಿ ನಗರದ ಕೆಲ್ಕೆರೆಯಲ್ಲಿ ಪಾರ್ಟಿ ಮಾಡಿದ್ದ ಇಬ್ಬರು ಟೆಕ್ಕಿಗಳು, ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಕೆಲ್ಕೆರೆಯಲ್ಲಿ ತೆಪ್ಪದಲ್ಲಿ ವಿಹಾರಕ್ಕೆ ತೆರಳಿದ್ದಾರೆ. ಈ ವೇಳೆ ತೆಪ್ಪ ಮಗುಚಿ ಇಬ್ಬರು ಟೆಕ್ಕಿಗಳು ನೀರಿಗೆ ಬಿದ್ದಿದ್ದಾರೆ.
ಕೊಡಗು ಮೂಲದ ಸಚಿನ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದರು. ನಿನ್ನೆ ಗೆಳೆಯ ಉಲ್ಲಾಸ್ ಜೊತೆ ಪಾರ್ಟಿ ಮಾಡಲು ಕೆಲ್ಕೆರೆಗೆ ಬಂದಿದ್ದರು. ರಾತ್ರಿ ಪಾರ್ಟಿ ಮುಗಿಸಿಕೊಂಡು ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಕೆರೆಯಲ್ಲಿ ವಿಹಾರಕ್ಕೆ ತೆಪ್ಪದಲ್ಲಿ ಟೆಕ್ಕಿಗಳು ತೆರಳಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ತೆಪ್ಪ ಮುಗುಚಿದೆ. ಈ ವೇಳೆ ಟೆಕ್ಕಿ ಉಲ್ಲಾಸ್ ಈಜಿಕೊಂಡು ದಡ ಸೇರಿ ಬದುಕುಳಿದ್ದಾನೆ.
ಆದ್ರೆ, ಮತ್ತೊಬ್ಬ ಟೆಕ್ಕಿ ಸಚಿನ್ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ನಾಪತ್ತೆಯಾಗಿರುವ ಟೆಕ್ಕಿ ಸಚಿನ್ಗಾಗಿ 186 ಎಕೆರೆ ವಿಸ್ತೀರ್ಣದ ಕೆಲ್ಕೆರೆಯಲ್ಲಿ ಅಗ್ನಿಶಾಮಕ ದಳ ಮತ್ತು ರಾಮಮೂರ್ತಿನಗರ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
Published On - 11:41 am, Sat, 8 February 20