AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿಗೆ ಈ ಬೌಲರ್​​ಗಳೆಂದ್ರೆ ನಡುಕ!?

ವಿರಾಟ್ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್​ನ ರನ್ ಸಾಮ್ರಾಟ. ಕೊಹ್ಲಿ ಅಪ್ರತಿಮ ಬ್ಯಾಟಿಂಗ್​ಗೆ ದಿಗ್ಗಜರ ದಾಖಲೆಗಳು ಚಿಂದಿ ಚಿಂದಿಯಾಗ್ತಿದೆ. ಕೊಹ್ಲಿಯ ಕ್ಲಾಸ್ ಅಂಡ್ ಮಾಸ್ ಪರ್ಫಾಮೆನ್ಸ್​ಗೆ ವಿಲವಿಲ ಒದ್ದಾಡೋ ಬೌಲರ್​ಗಳು, ವಿಕೆಟ್ ಪಡೆಯೋದಕ್ಕೆ ಇನ್ನಿಲ್ಲದ ಹರಸಾಹಸವನ್ನ ಪಡ್ತಿದ್ದಾರೆ. ವಿರಾಟ್ ಕೊಹ್ಲಿ ಕ್ರೀಸ್​ಗಿಳಿದ್ರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ಕೊಹ್ಲಿಯ ರನ್ ರೌದ್ರಾವತಾರಕ್ಕೆ ಎದುರಾಳಿಗಳು ಉಡೀಸ್ ಆಗಿಹೋಗ್ತಾರೆ. ಅಷ್ಟರಮಟ್ಟಿಗೆ ಆನ್​ಫೀಲ್ಡ್​ನಲ್ಲಿ ವಿರಾಟ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಪ್ರತಿಯೊಂದು ಸರಣಿಯಲ್ಲೂ ಒಂದಿಲ್ಲೊಂದು ದಾಖಲೆಗಳನ್ನ ಸೃಷ್ಟಿಸೋ ವೀರಾಧಿವೀರ ಕೊಹ್ಲಿ. ಆದ್ರೀಗ ಇದೇ ವಿರಾಟ್ […]

ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿಗೆ ಈ ಬೌಲರ್​​ಗಳೆಂದ್ರೆ ನಡುಕ!?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 08, 2020 | 11:49 AM

Share

ವಿರಾಟ್ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್​ನ ರನ್ ಸಾಮ್ರಾಟ. ಕೊಹ್ಲಿ ಅಪ್ರತಿಮ ಬ್ಯಾಟಿಂಗ್​ಗೆ ದಿಗ್ಗಜರ ದಾಖಲೆಗಳು ಚಿಂದಿ ಚಿಂದಿಯಾಗ್ತಿದೆ. ಕೊಹ್ಲಿಯ ಕ್ಲಾಸ್ ಅಂಡ್ ಮಾಸ್ ಪರ್ಫಾಮೆನ್ಸ್​ಗೆ ವಿಲವಿಲ ಒದ್ದಾಡೋ ಬೌಲರ್​ಗಳು, ವಿಕೆಟ್ ಪಡೆಯೋದಕ್ಕೆ ಇನ್ನಿಲ್ಲದ ಹರಸಾಹಸವನ್ನ ಪಡ್ತಿದ್ದಾರೆ.

ವಿರಾಟ್ ಕೊಹ್ಲಿ ಕ್ರೀಸ್​ಗಿಳಿದ್ರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ಕೊಹ್ಲಿಯ ರನ್ ರೌದ್ರಾವತಾರಕ್ಕೆ ಎದುರಾಳಿಗಳು ಉಡೀಸ್ ಆಗಿಹೋಗ್ತಾರೆ. ಅಷ್ಟರಮಟ್ಟಿಗೆ ಆನ್​ಫೀಲ್ಡ್​ನಲ್ಲಿ ವಿರಾಟ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಪ್ರತಿಯೊಂದು ಸರಣಿಯಲ್ಲೂ ಒಂದಿಲ್ಲೊಂದು ದಾಖಲೆಗಳನ್ನ ಸೃಷ್ಟಿಸೋ ವೀರಾಧಿವೀರ ಕೊಹ್ಲಿ.

ಆದ್ರೀಗ ಇದೇ ವಿರಾಟ್ ಕೊಹ್ಲಿಗೆ ಇದೀಗ ಇದೊಂದು ಭಯ ಕಾಡೋದಕ್ಕೆ ಶುರುವಾಗಿದೆ. ನ್ಯೂಜಿಲೆಂಡ್ ನೆಲದಲ್ಲಿ ಅಬ್ಬರಿಸಬೇಕಿದ್ದ ಕೊಹ್ಲಿ, ಆ ಭಯದಿಂದಾಗಿ ಮಂಕಾಗಿ ಹೋಗಿದ್ದಾರೆ. ಹಾಗಾದ್ರೆ, ವಿಶ್ವ ಕ್ರಿಕೆಟ್​ನ ನಂಬರ್ 1ಬ್ಯಾಟ್ಸ್​ಮನ್ ಕೊಹ್ಲಿಯನ್ನ ಕಾಡ್ತಿರೋ ಆ ಭಯ ಯಾವುದು..? ಕಿವೀಸ್ ಸರಣಿಯಲ್ಲೂ ಕಿಂಗ್ ಕೊಹ್ಲಿ ಡಲ್ ಆಗಿರೋದ್ಯಾಕೆ ಅನ್ನೋದು ಇಲ್ಲಿದೆ ನೋಡಿ.

ರನ್ ಮಷಿನ್ ಕೊಹ್ಲಿಗೆ ಲೆಗ್ ಸ್ಪಿನ್ನರ್ಸ್ ಕಂಡ್ರೆ ಭಯ? ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್​ಮನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಇದೇ ಕೊಹ್ಲಿಗೀಗ ಲೆಗ್ ಸ್ಪಿನ್ನರ್​ಗಳು ಕಂಡ್ರೆ ಭಯನಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಯಾಕಂದ್ರೆ, ಪ್ರಸಕ್ತ ನ್ಯೂಜಿಲೆಂಡ್ ಸರಣಿಯಲ್ಲಿ ಲೆಗ್ ಸ್ಪಿನ್ನರ್​ಗಳ ಓವರ್​ನಲ್ಲಿ ವಿರಾಟ್ ರನ್ ಗಳಿಸೋದಕ್ಕೆ ಪರದಾಡ್ತಿದ್ದಾರೆ. ಹ್ಯಾಮಿಲ್ಟನ್​ನ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ವಿರಾಟ್, ಲೆಗ್ ಸ್ಪಿನ್ನರ್ ಇಶ್ ಸೋದಿ ಗೂಗ್ಲಿಗೆ ಬಲಿಯಾಗಿದ್ರು.

ಕುತೂಹಲದ ವಿಷ್ಯ ಅಂದ್ರೆ, ಇದೊಂದೇ ಪಂದ್ಯದಲ್ಲಿ ಕೊಹ್ಲಿ ಲೆಗ್ ಸ್ಪಿನ್ನರ್​ಗೆ ಬಲಿಯಾಗಿದ್ರೆ, ಇಷ್ಟೊಂದು ಸುದ್ದಿಯಾಗ್ತಿರಲಿಲ್ಲ. ಆದ್ರೆ, ವಿರಾಟ್ ಕಳೆದ 4ಏಕದಿನ ಪಂದ್ಯಗಳ ಪೈಕಿ ಮೂರು ಬಾರಿ ಲೆಗ್ ಸ್ಪಿನ್ನರ್​ಗೆ ವಿಕೆಟ್ ಒಪ್ಪಿಸಿದ್ದಾರೆ.

ಆಸಿಸ್ ಸರಣಿಯಲ್ಲಿ ಕೊಹ್ಲಿಯನ್ನ ಕಾಡಿದ್ದ ಜಂಪಾ! ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ವಿರಾಟ್, ವೀಕ್​ನೆಸ್ ಕ್ರಿಕೆಟ್ ಲೋಕಕ್ಕೆ ಗೊತ್ತಾಯ್ತು. ಆಸಿಸ್​ನ ಸ್ಪಿನ್ ಮಾಂತ್ರಿಕ ಌಡಮ್ ಜಂಪಾ ಬೌಲಿಂಗ್​ನಲ್ಲಿ ಕೊಹ್ಲಿ ಎರಡು ಬಾರಿ ವಿಕೆಟ್ ಒಪ್ಪಿಸಿದ್ರು. ವಾಂಖೆಡೆ ಏಕದಿನ ಪಂದ್ಯದಲ್ಲಿ 16ರನ್​ಗಳಿಸಿ ಜಂಪಾಗೆ ಬಲಿಯಾಗಿದ್ದ ಕೊಹ್ಲಿ, ರಾಜ್​ಕೋಟ್​ನಲ್ಲಿ 78ರನ್​ಗಳಿಸಿದ್ದಾಗ ಜಂಪಾ ಜಾದೂಗೆ ಔಟಾಗಿದ್ರು.

ಕೊಹ್ಲಿ ವಾಂಖೆಡೆ ಮತ್ತು ರಾಜ್​ಕೋಟ್​ನಲ್ಲಿ ಮಾತ್ರವಲ್ಲ. ಒಟ್ಟು 7 ಬಾರಿ ಅಡಮ್ ಜಂಪಾ ಬೌಲಿಂಗ್​ನಲ್ಲೇ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಕೊಹ್ಲಿಯನ್ನ ಹೇಗೆ ಬಲಿಪಡೆಯಬೇಕು ಅನ್ನೋದ್ರ ಬಗ್ಗೆ, ಜಂಪಾ ಬಹಿರಂಗವಾಗೇ ಹೇಳಿದ್ರು. ಕೊಹ್ಲಿ ಕ್ರೀಸ್​ಗೆ ಬಂದು ಸೆಟಲ್ ಆಗೋಕ್ಕಿಂತ ಮುಂಚೆ, ಲೆಗ್ ಸ್ಪಿನ್ನರ್​ಗಳಿಗೆ ಪರದಾಡ್ತಾರಂತೆ. ಆ ಸಮಯದಲ್ಲಿ ಲೆಗ್ ಸ್ಪಿನ್ನರ್​ಗೆ ಬೌಲಿಂಗ್ ನೀಡಿದ್ರೆ, ಕೊಹ್ಲಿ ವಿಕೆಟ್ ಪಡೆಯಬಹುದು ಅಂತಾ ಜಂಪಾ ಸೀಕ್ರೆಟ್ ಬಿಚ್ಚಿಟ್ಟಿದ್ದ.

17 ಬಾರಿ ಲೆಗ್ ಸ್ಪಿನ್ನರ್​ಗೆ ವಿಕೆಟ್ ಒಪ್ಪಿಸಿರೋ ಕೊಹ್ಲಿ!ವಿರಾಟ್ ಕೊಹ್ಲಿಗೆ ಲೆಗ್ ಸ್ಪಿನ್ನರ್​ಗಳ ಭಯ ಕಾಡೋದಕ್ಕೆ ಶುರುವಾಗಿದ್ದೇ, 2018ರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ. ಲೆಗ್ ಸ್ಪಿನ್ನರ್ ಅದಿಲ್ ರಶೀದ್ ಸ್ಪಿನ್ ಮೋಡಿಗೆ ಬಲಿಯಾಗಿದ್ದ ಕೊಹ್ಲಿ, ಮೊದಲ ಬಾರಿ ತಮ್ಮ ವೀಕ್​ನೆಸ್ ಬಿಟ್ಟುಕೊಟ್ಟಿದ್ರು. ವಿರಾಟ್ ಇದುವರೆಗೂ 185ಬಾರಿ ಔಟಾಗಿದ್ದಾರೆ. ಆದ್ರೆ, ಲೆಗ್ ಸ್ಪಿನ್ನರ್​ಗಳಿಗೆ ಒಟ್ಟು 17ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇದುವರೆಗೂ ಯಾವೊಬ್ಬ ಬ್ಯಾಟ್ಸ್​ಮನ್ ಕೂಡ, ಲೆಗ್ ಸ್ಪಿನ್ನರ್​ಗೆ ಇಷ್ಟೊಂದು ಬಾರಿ ಔಟಾಗಿಲ್ಲ. ಆದ್ರೆ, ಕೊಹ್ಲಿ 17ಬಾರಿ ಅತೀ ಹೆಚ್ಚು ಬಾರಿ ಲೆಗ್ ಸ್ಪಿನ್ನರ್​ಗೆ ಬಲಿಯಾಗಿದ್ದಾರೆ.

ಇನ್ನೂ ಕಲರ್​ಫುಲ್ ಟೂರ್ನಿ ಐಪಿಎಲ್​ನಲ್ಲೂ ವಿರಾಟ್ ಲೆಗ್ ಸ್ಪಿನ್ನರ್​ಗೆ ಒಟ್ಟು 10ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಅದ್ರಲ್ಲೂ ರಾಜಸ್ಥಾನ ರಾಯಲ್ಸ್ ತಂಡ ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಗೆ, ವಿರಾಟ್ ಬಲಿಯಾಗಿರೋದೇ ಹೆಚ್ಚು. ಒಟ್ನಲ್ಲಿ ವಿಶ್ವ ಕ್ರಿಕೆಟ್​ನ ರನ್ ಮಷೀನ್​ಗೆ ಲೆಗ್ ಸ್ಪಿನ್ನರ್​ಗಳ ಭಯ ಕಾಡೋದಕ್ಕೆ ಶುರುವಾಗಿದೆ. ಕೊಹ್ಲಿ ಆದಷ್ಟು ಬೇಗನೇ ಈ ವೀಕ್​ನೆಸ್​ನಿಂದ ಹೊರಬರಬೇಕಿದೆ.

Published On - 9:44 am, Sat, 8 February 20

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!