AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ವಾಡಿ ‘ಪ್ರಸಾದ’ ದುರಂತಕ್ಕೆ 2 ವರ್ಷ: ಇನ್ನೂ ಈಡೇರಿಲ್ಲ ಸರಕಾರದ ಭರವಸೆ, ಸಂಕಷ್ಟದಲ್ಲಿ ಸಂತ್ರಸ್ಥರು

ಅಸ್ವಸ್ಥರಾದವರ ಕುಟುಂಬಗಳಿಗೆ 12 ತಿಂಗಳ ಕಾಲ ₹ 10 ಸಾವಿರ ಸಹಾಯಧನ, ಒಂದು ವರ್ಷ ಪಡಿತರ ಆಹಾರ, ಗುಡಿಕೈಗಾರಿಕೆ ಆರಂಭಿಸುವ ಮೂಲಕ ಉದ್ಯೋಗ ಕಲ್ಪಿಸುವ ಭರವಸೆಯನ್ನು ಅಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೀಡಿದ್ದರು.

ಸುಳ್ವಾಡಿ ‘ಪ್ರಸಾದ’ ದುರಂತಕ್ಕೆ 2 ವರ್ಷ: ಇನ್ನೂ ಈಡೇರಿಲ್ಲ ಸರಕಾರದ ಭರವಸೆ, ಸಂಕಷ್ಟದಲ್ಲಿ ಸಂತ್ರಸ್ಥರು
ಕಿಚ್ಚುಗುತ್ತಿ ಮಾರಮ್ಮ ದೇಗುಲ ಮತ್ತು ಆರೋಪಿ ಇಮ್ಮಡಿ ಮಹದೇವ ಸ್ವಾಮಿ
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 16, 2020 | 7:44 AM

Share

ಚಾಮರಾಜನಗರ: ಇಡೀ ರಾಜ್ಯ ತಲ್ಲಣಿಸುವಂತೆ ಮಾಡಿದ್ದ ಹನೂರು ತಾಲ್ಲೂಕು ಸುಳ್ವಾಡಿ ಗ್ರಾಮದ ಪ್ರಸಿದ್ಧ ಕಿಚ್ಚುಗತ್ತಿ ಮಾರಮ್ಮ ದೇಗುಲದಲ್ಲಿ ವಿಷ ಬೆರೆಸಿದ ಪ್ರಸಾದ ವಿತರಣೆ ಭೀಕರ ಕೃತ್ಯಕ್ಕೆ ಸೋಮವಾರ (ಡಿ.14) ಎರಡು ವರ್ಷ ಆಗಿದೆ. ವಿಷ ಬೆರೆಸಿದ್ದ ಟೊಮೆಟೊ ಬಾತ್ ಪ್ರಸಾದ ಸೇವಿಸಿದ್ದ 12 ಮಂದಿ ಮೃತಪಟ್ಟಿದ್ದರು. 120ಕ್ಕೂ ಹೆಚ್ಚು ಮಂದಿಗೂ ನಾನಾ ಸಂಕಷ್ಟ ಅನುಭವಿಸುತ್ತಾ ದಿನದೂಡುತ್ತಿದ್ದಾರೆ.

ದೇಶದ ಗಮನ ಸೆಳೆದಿದ್ದ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಗುಡುಗಿದ್ದರು. ಬಿದರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿ, ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ, ಎರಡು ಎಕರೆ ಜಾಗ, ಒಂದು ವರ್ಷ ಉಚಿತ ಪಡಿತರ, ಗುಡಿ ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಹೇಳಿದ್ದರು.

ಅಸ್ವಸ್ಥರಾದವರ ಕುಟುಂಬಗಳಿಗೆ 12 ತಿಂಗಳ ಕಾಲ ₹ 10 ಸಾವಿರ ಸಹಾಯಧನ, ಒಂದು ವರ್ಷ ಪಡಿತರ ಆಹಾರ, ಗುಡಿಕೈಗಾರಿಕೆ ಆರಂಭಿಸುವ ಮೂಲಕ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದರು. ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಬಿಟ್ಟರೆ ಬೇರೆ ಇನ್ಯಾವುದೇ ಸೌಲಭ್ಯ ನಮಗೆ ತಲುಪಿಲ್ಲ ಎಂದು ಕುಟುಂಬಗಳ ಸದಸ್ಯರು ಆರೋಪಿಸಿದ್ದಾರೆ.

ಕಿಚ್ಚಗುತ್ತಿ ಮಾರಮ್ಮ ದೇವಾಲಯದ ಟ್ರಸ್ಟ್ ಮೇಲೆ ಹಿಡಿತ ಸಾಧಿಸುವ ಸಲುವಾಗಿ ದೇವರ ಹೆಸರಿನಲ್ಲಿ ತಯಾರಿಸಿದ್ದ ಟೊಮೆಟೊ ಬಾತ್​ಗೆ ವಿಷ ಬೆರೆಸಲಾಗಿತ್ತು. ಏನೂ ಅರಿಯದ ಓಂ ಶಕ್ತಿ ಮಾಲಾಧಾರಿಗಳು ಸೇರಿದಂತೆ ಸುಳ್ವಾಡಿ, ಮಾರ್ಟಳ್ಳಿ, ದೊರೆಸ್ವಾಮಿ ಮೇಡು, ಬಿದರಳ್ಳಿ ಗ್ರಾಮಗಳ ಭಕ್ತರು ಪ್ರಸಾದ ಸೇವಿಸಿ ಸಾವನ್ನಪ್ಪಿದ್ದರು. ಕೋಟೆ ಪೊದೆ ಗ್ರಾಮದ ಮೈಲಿಬಾಯಿಯಲ್ಲಿ ಹೆಣ್ಣು ಮಕ್ಕಳು (ಪ್ರಿಯಾ ಮತ್ತು ರಾಣಿ) ಮತ್ತು ಓರ್ವ ಗಂಡು ಮಗ ಹಾಗೂ ಬಿದರಳ್ಳಿ ಗ್ರಾಮದ ಐಶ್ವರ್ಯ ತಂದೆ ತಾಯಿ ಇಲ್ಲದೆ ಅನಾಥರಾಗಿದ್ದಾರೆ.

ಸೆರೆಮನೆಯಲ್ಲಿ ಆರೋಪಿಗಳು ದೇಗುಲ ಪ್ರಸಾದಕ್ಕೆ ವಿಷ ಬೆರೆಸಿದ್ದ ಆರೋಪಿಗಳಾದ ಇಮ್ಮಡಿ ಮಹದೇವ ಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಕಳೆದ ಎರಡು ವರ್ಷದಿಂದ ಮೈಸೂರಿನ ಕಾರಾಗೃಹದಲ್ಲಿದ್ದಾರೆ. ಈ ಪ್ರಕರಣದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಾದಿಸುವುದಿಲ್ಲ ಎಂದು ಜಿಲ್ಲಾ ವಕೀಲರ ಸಂಘ ಹೇಳಿತ್ತು. ನವೆಂಬರ್ ತಿಂಗಳಲ್ಲಿ ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ.

ತೆಗೆದಿದೆ ದೇಗುಲ ಟ್ರಸ್ಟ್​ ನಿರ್ವಹಿಸುತ್ತಿದ್ದ ಕಿಚ್ಚುಗತ್ತಿ ಮಾರಮ್ಮ ದೇವಾಲಯಕ್ಕೆ ಕಳೆದ 22 ವರ್ಷದಿಂದ ಬೀಗ ಜಡಿಯಲಾಗಿತ್ತು. ಈಗ ದೇವಾಲಯವನ್ನು ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು, ಬಾಗಿಲು ತೆಗೆಸಿದೆ. ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ‌. -ಎಂ.ಇ ಮಂಜುನಾಥ್

ಸುಳ್ವಾಡಿ ವಿಷ ಪ್ರಸಾದ: ಪ್ರಮುಖ ಆರೋಪಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್

ದೇವರ ಪ್ರಸಾದವೆಂದು ವಿಷವುಣಿಸಿದ್ದ ಸ್ವಾಮಿ ಜೈಲಿನಲ್ಲಿದ್ದುಕೊಂಡೇ ಮಾಡಿದ್ದೇನು ಗೊತ್ತಾ?

Published On - 7:35 am, Wed, 16 December 20

ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ