ಪೇಪರ್ ಬ್ಯಾಗ್​​ನ್ನು ಎಸೆಯುವುದಕ್ಕೂ ಮುನ್ನ ಕೊಂಚ ಯೋಚಿಸಿ! ಏಕೆಂಬುದು ತಿಳಿಯಿರಿ

ಈ ಪೇಪರ್ ಬ್ಯಾಗ್​ನ್ನು ಎಸೆಯುವ ಬದಲು ಮರುಬಳಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಪ್ಲಾಸ್ಟಿಕ್ ನಿಷೇಧದಿಂದ ಪೇಪರ್ ಬ್ಯಾಗ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಪೇಪರ್ ಬ್ಯಾಗ್​​ನ್ನು ಎಸೆಯುವುದಕ್ಕೂ ಮುನ್ನ ಕೊಂಚ ಯೋಚಿಸಿ! ಏಕೆಂಬುದು ತಿಳಿಯಿರಿ
paper bag (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 21, 2022 | 10:15 PM

ಪ್ರತಿಯೊಂದು ವಸ್ತುವನ್ನು ಮರುಬಳಕೆ ಮಾಡುವುದರಿಂದ ಪರಿಸರವನ್ನು ರಕ್ಷಿಸುವುದರೊಂದಿಗೆ ನಮ್ಮ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡುತ್ತಿದೆ. ಹಾಗಾಗಿ ಜನರು ಹೆಚ್ಚು ಪೇಪರ್ ಬ್ಯಾಗ್ (paper bags) ​ನ್ನು ಬಳಸುತ್ತಿದ್ದಾರೆ. ಈ ಪೇಪರ್ ಬ್ಯಾಗ್​ನ್ನು ಎಸೆಯುವ ಬದಲು ಮರುಬಳಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಪ್ಲಾಸ್ಟಿಕ್ ನಿಷೇಧದಿಂದ ಪೇಪರ್ ಬ್ಯಾಗ್‌ಗಳಿಗೆ ಬೇಡಿಕೆ ಹೆಚ್ಚಿದೆ. ಜನರು ಹಣ್ಣು, ತರಕಾರಿ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಪೇಪರ್ ಬ್ಯಾಗ್​ನಲ್ಲಿ ತರುತ್ತಾರೆ. ಆನ್‌ಲೈನ್ ಕಂಪನಿಗಳು ಪ್ಲಾಸ್ಟಿಕ್ ಕವರ್‌ಗಳ ಬದಲಿಗೆ ಪೇಪರ್ ಬ್ಯಾಗ್‌ಗಳಲ್ಲಿ ಪಾರ್ಸೆಲ್‌ಗಳನ್ನು ನೀಡುತ್ತಿದ್ದಾರೆ. ಈ ಪೇಪರ್ ಬ್ಯಾಗ್​ ಮರುಬಳಕೆಯ ವಸ್ತುವಾಗಿದೆ. ಪೇಪರ್ ಬ್ಯಾಗ್​ನ್ನು ನೀವು ಹೇಗೆ ಮರುಬಳಕೆ ಮಾಡಬಹುದು ಎಂಬುದು ಈ ಲೇಖನದ ಮೂಲಕ ತಿಳಿಯಬಹುದು.

ಪೇಪರ್ ಬ್ಯಾಗ್​ನ ಉಪಯೋಗಗಳು:

ತರಕಾರಿ ಅಥವಾ ಇತರೆ ಸಾಮಾಗ್ರಿ ತಂದಿರುವ ಕಾಗದದ ಚೀಲವನ್ನು ಎಸೆಯಬಾರದು. ಮನೆಯ ಕನ್ನಡಿ ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸಲು ಇದನ್ನು ಬಳಸಬಹುದು. ಕನ್ನಡಕವನ್ನು ಸ್ವಚ್ಛಗೊಳಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಮೊದಲು ಕ್ಲೀನಿಂಗ್ ಸ್ಪ್ರೇನೊಂದಿಗೆ ಗಾಜಿನನ್ನು ಸಿಂಪಡಿಸಿ. ನಂತರ ಗಾಜಿನನ್ನು ಕಾಗದದ ಚೀಲದಿಂದ ಉಜ್ಜಿಕೊಳ್ಳಿ. ಇದು ಗಾಜು ಅಥವಾ ಕಿಟಕಿಯನ್ನು ಹೊಳೆಯುವಂತೆ ಮಾಡುತ್ತದೆ. ಬಾಳೆಹಣ್ಣನ್ನು ಬೇಗ ಹಣ್ಣಾಗಲು ಪೇಪರ್ ಬ್ಯಾಗ್ ಬಳಸಬಹುದಾಗಿದೆ. ಹೌದು ಯಾವುದೇ ಹಣ್ಣು ಬೇಗ ಹಣ್ಣಾಗಲು ಪೇಪರ್ ಬ್ಯಾಗ್ ಬಳಸಬಹುದು. ಪೇಪರ್ ಬ್ಯಾಗ್​ನಲ್ಲಿಟ್ಟರೆ ಹಣ್ಣು ಬೇಗ ಹಣ್ಣಾಗುತ್ತದೆ. ಇಲ್ಲಿ ಬಾಳೆಹಣ್ಣು ಮಾತ್ರವಲ್ಲದೆ ಪೇರಳೆ, ಆವಕಾಡೊ ಇತ್ಯಾದಿಗಳನ್ನು ಇಡಬಹುದು.

ಕರಕುಶಲ ವಸ್ತು:

ಕಾಗದದ ಚೀಲಗಳನ್ನು ವ್ಯರ್ಥ ಮಾಡಬೇಡಿ. ಮನೆಗೆ ತಂದ ಕಾಗದದ ಚೀಲವನ್ನು ಸರಿಯಾಗಿ ಕತ್ತರಿಸುವ ಮೂಲಕ ನೀವು ಕ್ರಾಫ್ಟ್ ಮಾಡಬಹುದು. ಕರಕುಶಲ ವಸ್ತುಗಳನ್ನು ವಿವಿಧ ಆಕಾರಗಳಲ್ಲಿ ಮಾಡಬಹುದು. ಕಾಗದದ ಚೀಲ ಖಾಲಿಯಾಗಿದ್ದರೆ ಡ್ರಾಯಿಂಗ್ ಮಾಡಬಹುದು.

ರಸಗೊಬ್ಬರ:

ರಸಗೊಬ್ಬರ ಮಾಡಲು ಪೇಪರ್ ಬ್ಯಾಗ್​ನ್ನು ಬಳಸಬಹುದು. ಮೊದಲು ನೀವು ತರಕಾರಿ ಮತ್ತು ಹಣ್ಣಿನ ಚರ್ಮವನ್ನು ಕಾಗದದ ಚೀಲದಲ್ಲಿ ಹಾಕಿ. ನಂತರ ಅವುಗಳನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಿ. ಮಣ್ಣಿನೊಂದಿಗೆ ಮಿಶ್ರಣ ಮಾಡುವಾಗ ಕಾಗದದ ಚೀಲವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಶೀಘ್ರದಲ್ಲೇ ಅದು ಮಣ್ಣಿನಲ್ಲಿ ಕರಗುತ್ತದೆ. ನೀವು ಉತ್ತಮ ರಸಗೊಬ್ಬರಗಳನ್ನು ಮಾಡಬಹುದು.

ಗಿಫ್ಟ್ ಪ್ಯಾಕ್:

ನೀವು ಮನೆಗೆ ತಂದ ಪೇಪರ್ ಬ್ಯಾಗ್​ನ್ನು ಮರುಬಳಕೆ ಮಾಡಲು ಬಯಸಿದರೆ, ನೀವು ಅದನ್ನು ಉಡುಗೊರೆ ಪ್ಯಾಕ್ ಮಾಡಲು ಬಳಸಬಹುದು. ಸಣ್ಣ ಉಡುಗೊರೆಗಳನ್ನು ಪ್ಯಾಕ್ ಮಾಡಲು ಪೇಪರ್ ಚೀಲಗಳು ಒಳ್ಳೆಯದು. ಕಾಗದದ ಚೀಲವನ್ನು ನೀವು ಬಯಸಿದ ಗಾತ್ರಕ್ಕೆ ಕತ್ತರಿಸಿ ಉಡುಗೊರೆಯನ್ನು ಅದರಲ್ಲಿ ಇರಿಸಬಹುದು ಮತ್ತು ನಂತರ ಪ್ಯಾಕ್ ಮಾಡಿ ನೀಡಬಹುದು.

ಕಸ ತುಂಬಲು:

ಅನೇಕರು ಕಸ ತುಂಬಲು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಾರೆ. ಇದು ಒಳ್ಳೆಯದಲ್ಲ. ಆದ್ದರಿಂದ ನೀವು ಮನೆಯಲ್ಲಿ ಹಸಿರು ಅಥವಾ ಒಣ ಕಸವನ್ನು ತುಂಬಲು ಕಾಗದದ ಚೀಲವನ್ನು ಬಳಸಬಹುದು.

ಮತ್ತಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:11 pm, Fri, 21 October 22

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ