ಕಾಫಿನಾಡಲ್ಲಿ ವರುಣಾಘಾತ: ಬಸ್ ಮೇಲೆ ಉರುಳಿದ ಮರ, ವಾಹನ ಸಂಚಾರ ಬಂದ್
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಕುದುರೆಗುಂಡಿ ಬಳಿ ಹಲವಾರು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ 173ರಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಜೊತೆಗೆ, ಚಿಕ್ಕಮಗಳೂರು-ಮೂಡಿಗೆರೆ ನಡುವೆ ಸಂಚಾರ ಸಹ ನಿಂತಿದೆ. ಇದಲ್ಲದೆ, ಬಾಳೆಹೊನ್ನೂರು-ಕಳಸ ನಡುವೆ ವಾಹನ ಸಂಚಾರ ಬಂದ್ ಆಗಿದೆ. ಮಾಲ್ಗೋಡು ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸೇತುವೆ ಜಾಲಾವೃತವಾಗಿದೆ. ಇನ್ನು ಜಿಲ್ಲೆಯ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾಗಾಗಿ, ನದಿಯ ಇಕ್ಕೆಲಗಳಲ್ಲಿರುವ ಗದ್ದೆ, […]

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಕುದುರೆಗುಂಡಿ ಬಳಿ ಹಲವಾರು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ 173ರಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಜೊತೆಗೆ, ಚಿಕ್ಕಮಗಳೂರು-ಮೂಡಿಗೆರೆ ನಡುವೆ ಸಂಚಾರ ಸಹ ನಿಂತಿದೆ.
ಇದಲ್ಲದೆ, ಬಾಳೆಹೊನ್ನೂರು-ಕಳಸ ನಡುವೆ ವಾಹನ ಸಂಚಾರ ಬಂದ್ ಆಗಿದೆ. ಮಾಲ್ಗೋಡು ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸೇತುವೆ ಜಾಲಾವೃತವಾಗಿದೆ. ಇನ್ನು ಜಿಲ್ಲೆಯ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾಗಾಗಿ, ನದಿಯ ಇಕ್ಕೆಲಗಳಲ್ಲಿರುವ ಗದ್ದೆ, ತೋಟಗಳು ಜಲಾವೃತಗೊಂಡಿದೆ.

Published On - 8:48 am, Thu, 6 August 20



