‘ಬದುಕಿದ್ದೇವೆಂದು ತೋರಿಸಿಕೊಳ್ಳಲು ಧರಣಿ ಮಾಡ್ತಿದ್ದಾರೆ’ ಸಿಎಂ ಹೇಳಿಕೆಗೆ ಮಂಗಳಮುಖಿಯರ ಆಕ್ರೋಶ
‘ಬದುಕಿದ್ದೇವೆಂದು ತೋರಿಸಿಕೊಳ್ಳಲು ರೈತ ಮುಖಂಡರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರು: ‘ಬದುಕಿದ್ದೇವೆಂದು ತೋರಿಸಿಕೊಳ್ಳಲು ರೈತ ಮುಖಂಡರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ರೈತರ ಹೋರಾಟ ಶಾಂತ ರೀತಿಯಲ್ಲಿ ನಡೆದರೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಅವರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆಂದು ಅವರಿಗೇ ಗೊತ್ತಿಲ್ಲ. ಅವರ ಬೇಡಿಕೆ ಏನೆಂಬುದೆಂದು ಕೂಡ ಹೇಳುತ್ತಿಲ್ಲ. ಏನು ತಿಳಿಯದೆ ಸುಮ್ಮನೆ ಜನರನ್ನ ತಪ್ಪು ದಾರಿಗೆ ಏಳೆಯುವ ಕೆಲ್ಸ ಮಾಡ್ತಿದ್ದಾರೆ ಎಂದು ಸಿಎಂ ಬಿ.ಎಸ್.ವೈ ಹೇಳಿದ್ರು.
ಇನ್ನು ‘ಬದುಕಿದ್ದೇವೆಂದು ತೋರಿಸಿಕೊಳ್ಳಲು ಧರಣಿ ಮಾಡ್ತಿದ್ದಾರೆ’ ಎಂಬ ಸಿಎಂ ಹೇಳಿಕೆಗೆ ಮಂಗಳಮುಖಿಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ರೈತರು ಬದುಕಿದ್ದೇವೆಂದು ತೋರಿಸಿಕೊಳ್ಳೋದು ಬೇಕಿಲ್ಲ. ಸಿಎಂ ಮಾತಾಡುವಾಗ ಯೋಚನೆ ಮಾಡಿ ಮಾತಾಡಬೇಕು. ಸಿಎಂ ಬಿಎಸ್ ವೈಗೆ ಮುಂದೆ ಬರಬಾರದ ಪರಿಸ್ಥಿತಿ ಬರುತ್ತೆ ಎಂದು ಸಿಎಂ ಹೇಳಿಕೆ ವಿರುದ್ಧ ಮಂಗಳಮುಖಿಯರು ಕಿಡಿಕಾರಿದ್ದಾರೆ.
ನಾವು ಯಾವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನೂ ಮಾಡಿಲ್ಲ -ಸಿಎಂ ಯಡಿಯೂರಪ್ಪ ತಿರುಗೇಟು