ಸಾರಿಗೆ ಸಚಿವ ಶ್ರೀರಾಮುಲು ಅಂಜನಾದ್ರಿ ಬೆಟ್ಟ ಹತ್ತಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು
ಬೆಟ್ಟದ ತುದಿಯಲ್ಲಿರುವ ಆಂಜನೇಯನ ದೇಗುಲ ತಲುಪಬೇಕಾದರೆ 575 ಮೆಟ್ಟಿಲುಗಳನ್ನು ಹತ್ತಬೇಕು, ಶ್ರೀರಾಮುಲು ಕೊಂಚವೂ ಆಯಾಸಗೊಳ್ಳದೆ ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದರು.
Koppal: ಕೆಲವು ತಿಂಗಳುಗಳಿಂದ ಚರ್ಚೆಯಲ್ಲಿರುವ ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಜನಾದ್ರಿ ಬೆಟ್ಟವನ್ನು (Anjanadri hill) ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರು ತಮ್ಮ ಕೆಲ ಸಂಗಡಿಗರೊಂದಿಗೆ ಗುರುವಾರ ಬೆಳ್ಳಂಬೆಳಗ್ಗೆಯೇ ಬೆಟ್ಟ ಹತ್ತಿ ಆಂಜನೇಯನ (Anjaneya) ದರ್ಶನ ಪಡೆದು ಒಂದು ವಿಶೇಷ ಪೂಜೆಯನ್ನು ಸಲ್ಲಿಸಿದರು. ಸಚಿವರ ಆಪ್ತರು ಹೇಳುವ ಹಾಗೆ ಅವರು ಆಂಜನೇಯನ ಪರಮ ಭಕ್ತರು. ಇಲ್ಲಿ ಮತ್ತೊಂದು ಸಂಗತಿಯನ್ನು ಉಲ್ಲೇಖಿಸಬೇಕು. ಬೆಟ್ಟದ ತುದಿಯಲ್ಲಿರುವ ಆಂಜನೇಯನ ದೇಗುಲ ತಲುಪಬೇಕಾದರೆ 575 ಮೆಟ್ಟಿಲುಗಳನ್ನು ಹತ್ತಬೇಕು, ಶ್ರೀರಾಮುಲು ಕೊಂಚವೂ ಆಯಾಸಗೊಳ್ಳದೆ ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos