ಒಂದೇ ಒಂದು ಮನೆ ಕಟ್ಟಿಸಿಕೊಡಿ ಸರ್ -ಸೂರಿಗಾಗಿ ಕಣ್ಣೀರಿಟ್ಟ ದಿವ್ಯಾಂಗ ಯುವಕ

ತುಮಕೂರು: ಕರುಣಾಹೀನ ಕೊರೊನಾ ಮಹಾಮಾರಿಯ ನಡುವೆ ಮಾನವೀಯತೆ ಸಹ ನಿಧಾನವಾಗಿ ಕಾಣೆಯಾಗುತ್ತಿದೆ ಎಂದು ಅನ್ನಿಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಒಂದು ಘಟನೆ ಜಿಲ್ಲೆಯ ಪಾವಗಡ ತಾಲೂಕು ಕಚೇರಿಯಲ್ಲಿ ಬೆಳಕಿಗೆ ಬಂದಿದೆ. ವಸತಿ ಯೋಜನೆಯಡಿ ಮನೆಗಾಗಿ ಅರ್ಜಿ ಹಾಕಿರುವ ದಿವ್ಯಾಂಗ ಯುವಕ ಗಣೇಶ್ ಬಾಬು ಕಳೆದ 5 ವರ್ಷದಿಂದ ಸೂರಿಗಾಗಿ ಮನವಿ ಮಾಡುತ್ತಲೇ ಬಂದಿದ್ದಾನೆ. ಆದರೆ, ಈವರೆಗೂ ಯಾವುದೇ ಅಧಿಕಾರಿಗಳು ಆತನ ಮನವಿಗೆ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ. ಇದರಿಂದ, ತೀವ್ರ ಮನನೊಂದ ಗಣೇಶ್​ ಇಂದು ತಾಲೂಕು ಕಚೇರಿಯ ಅಧಿಕಾರಿಗಳ ಮುಂದೆ […]

ಒಂದೇ ಒಂದು ಮನೆ ಕಟ್ಟಿಸಿಕೊಡಿ ಸರ್ -ಸೂರಿಗಾಗಿ ಕಣ್ಣೀರಿಟ್ಟ ದಿವ್ಯಾಂಗ ಯುವಕ
Updated By:

Updated on: Jul 28, 2020 | 1:07 AM

ತುಮಕೂರು: ಕರುಣಾಹೀನ ಕೊರೊನಾ ಮಹಾಮಾರಿಯ ನಡುವೆ ಮಾನವೀಯತೆ ಸಹ ನಿಧಾನವಾಗಿ ಕಾಣೆಯಾಗುತ್ತಿದೆ ಎಂದು ಅನ್ನಿಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಒಂದು ಘಟನೆ ಜಿಲ್ಲೆಯ ಪಾವಗಡ ತಾಲೂಕು ಕಚೇರಿಯಲ್ಲಿ ಬೆಳಕಿಗೆ ಬಂದಿದೆ.

ವಸತಿ ಯೋಜನೆಯಡಿ ಮನೆಗಾಗಿ ಅರ್ಜಿ ಹಾಕಿರುವ ದಿವ್ಯಾಂಗ ಯುವಕ ಗಣೇಶ್ ಬಾಬು ಕಳೆದ 5 ವರ್ಷದಿಂದ ಸೂರಿಗಾಗಿ ಮನವಿ ಮಾಡುತ್ತಲೇ ಬಂದಿದ್ದಾನೆ. ಆದರೆ, ಈವರೆಗೂ ಯಾವುದೇ ಅಧಿಕಾರಿಗಳು ಆತನ ಮನವಿಗೆ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ.

ಇದರಿಂದ, ತೀವ್ರ ಮನನೊಂದ ಗಣೇಶ್​ ಇಂದು ತಾಲೂಕು ಕಚೇರಿಯ ಅಧಿಕಾರಿಗಳ ಮುಂದೆ ಕಣ್ಣೀರು ಸುರಿಸಿದ. ನಾನು ಈಗ ಬೀದಿಯಲ್ಲೇ ವಾಸಿಸುತ್ತಿದ್ದೇನೆ ಸಾರ್​. ನೀವೇ ಒಮ್ಮೆ ಬಂದು ನೋಡಿ. ಆಗಲೂ ನಿಮಗೆ ನಂಬಿಕೆ ಬರದಿದ್ದರೆ ನನ್ನನ್ನ ಬೂಟು ಕಾಲಲ್ಲಿ ಒದೀರಿ ಸರ್​. ಆದರೆ, ದಯವಿಟ್ಟು ನನಗೆ ಸೂರು ಕೊಡಿಸಿ ಸಾರ್​ ಎಂದು ಬಿಕ್ಕಳಿಸಿ ಅಳುತ್ತಾ ಅಧಿಕಾರಿಗಳನ್ನ ಅಂಗಲಾಚಿದ ದೃಶ್ಯ ನೆರೆದವರ ಮನ ಕಲುಕಿತು.

Published On - 8:16 pm, Mon, 27 July 20