AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್ಬೆರಳಿನ ಮಧ್ಯೆ ಕಂಡು ಬರುವ ನಂಜು ನಿವಾರಣೆಗೆ ಈ ಮನೆಮದ್ದನ್ನು ಮಾಡಿ

ಸಾಮಾನ್ಯವಾಗಿ ಮಳೆಗಾಲದಲ್ಲಿ ಕೊಳಚೆ ನೀರು, ನಾವು ಧರಿಸುವ ಚಪ್ಪಲಿ ಹಾಗೂ ನಂಜಿನ ಕಾರಣದಿಂದ ಕಾಲ್ಬೆರಳುಗಳ ಮಧ್ಯೆ ಅಲರ್ಜಿ, ತುರಿಕೆ ಉಂಟಾಗುತ್ತದೆ. ಕ್ರಮೇಣ ಇದು ಫಂಗಲ್‌ ಸೋಂಕನ್ನು ಹೆಚ್ಚಿಸುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಸೋಂಕನ್ನು ತಡೆಗಟ್ಟಲು ಪಾದಗಳ ಆರೈಕೆ ಸರಿಯಾಗಿ ಮಾಡಬೇಕಾಗುತ್ತದೆ. ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಹಿಡಿದು ನೀರಿನ ಅಂಶ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ. ಮಾತ್ರವಲ್ಲ ಮಳೆಗಾಲದಲ್ಲಿ ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೆಲವು ಸರಳ ಸಲಹೆಗಳನ್ನು ಅನುಸರಿಸಬೇಕಾಗಿದೆ. ಹಾಗಾದರೆ ಏನು ಮಾಡಬೇಕು? ಪಾದಗಳನ್ನು ಯಾವ ರೀತಿ ರಕ್ಷಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ಕಾಲ್ಬೆರಳಿನ ಮಧ್ಯೆ ಕಂಡು ಬರುವ ನಂಜು ನಿವಾರಣೆಗೆ ಈ ಮನೆಮದ್ದನ್ನು ಮಾಡಿ
Fungal Foot Infections
ಪ್ರೀತಿ ಭಟ್​, ಗುಣವಂತೆ
|

Updated on: Jul 18, 2025 | 4:46 PM

Share

ಮಳೆಗಾಲವಾದ್ದರಿಂದ ಪ್ರತಿನಿತ್ಯ ಹೋಗುವ ದಾರಿಯಲ್ಲಿ ನೀರು, ಕೆಸರು ಎಲ್ಲವೂ ಇರುತ್ತದೆ. ಈ ಋತುವಿನಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ಕೊಳಚೆ ನೀರಿರುವ ದಾರಿಯಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ. ಅದಲ್ಲದೆ ನಾವು ಧರಿಸುವ ಚಪ್ಪಲಿಗಳು ಸರಿಯಾಗಿ ಇಲ್ಲದಿದ್ದರೂ ಕೂಡ ನಂಜಿನ ಕಾರಣದಿಂದ ಕಾಲ್ಬೆರಳುಗಳ ಮಧ್ಯೆ ಅಲರ್ಜಿ, ತುರಿಕೆ ಉಂಟಾಗುತ್ತದೆ. ಈ ರೀತಿ ಮಳೆಗಾಲದಲ್ಲಿ (rainy season) ಬರುವ ಈ ಫಂಗಲ್‌ ಸೋಂಕಿನಿಂದ (Fungal Foot Infections) ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ, ಈ ರೀತಿ ಕಂಡು ಬರುವ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು, ಮಳೆಗಾಲದಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಕೆಲವೊಂದು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಈ ಫಂಗಲ್‌ ಸೋಂಕಿನಂತಹ ಸಮಸ್ಯೆಗೆ ಮನೆಯಲ್ಲೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ಕಾಲ್ಬೆರಳಿನ ಮಧ್ಯೆ ಕಂಡು ಬರುವ ನಂಜು ನಿವಾರಣೆಗೆ ಇಲ್ಲಿದೆ ಮನೆಮದ್ದು:

  • ನಾವು ದಿನನಿತ್ಯ ಬಳಸುವ ಅಡಿಗೆ ಸೋಡಾ ನೈಸರ್ಗಿಕ ಸೋಂಕು ನಿವಾರಕವಾಗಿದೆ. ಇದು ತುರಿಕೆ ಕಡಿಮೆ ಮಾಡುತ್ತದೆ ಮತ್ತು ಬೇರೆಡೆ ಹರಡದಂತೆ ತಡೆಯುತ್ತದೆ. ನಿಮಗೂ ಕಾಲ್ಬೆರಳಿನ ಮಧ್ಯೆ ತುರಿಕೆ ಕಂಡು ಬಂದರೆ ಸ್ವಲ್ಪ ಬಿಸಿ ನೀರಿಗೆ 2 ಚಮಚ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ನೀರಿನಲ್ಲಿ ಇಪ್ಪತ್ತು ನಿಮಿಷಗಳ ಕಾಲ ಪಾದಗಳನ್ನು ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮಕ್ಕೆ ರಿಲೀಫ್ ಸಿಗುತ್ತದೆ. ತುರಿಕೆ ಕೂಡ ಕಡಿಮೆಯಾಗುತ್ತದೆ.
  • ತೆಂಗಿನೆಣ್ಣೆಯು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಇದು ಚರ್ಮಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಕಾಲಿನ ಬೆರಳುಗಳ ಮಧ್ಯೆ ಕಂಡು ಬರುವಂತಹ ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಪಾದಗಳಿಗೆ ಹಚ್ಚಿ ಮಲಗಿರಿ. ಕ್ರಮೇಣ ಇದು ತುರಿಕೆಯಿಂದ ಪರಿಹಾರ ನೀಡುತ್ತದೆ.
  • ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ತುರಿಕೆ ಮತ್ತು ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಈ ರೀತಿ ಮಳೆಗಾಲದಲ್ಲಿ ಕಂಡುಬರುವ ಸೋಂಕನ್ನು ಕಡಿಮೆ ಮಾಡಲು ಬೇವಿನ ಎಲೆಗಳನ್ನು ಬಳಸಿಕೊಳ್ಳಬಹುದು. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ನೀರು ತಣ್ಣಗಾದ ನಂತರ ಅದನ್ನು ತುರಿಕೆ ಅಥವಾ ಸೋಂಕಿತ ಭಾಗಕ್ಕೆ ಅನ್ವಯಿಸುವುದರಿಂದ ತುರಿಕೆ ಕಡಿಮೆಯಾಗಿ ಫಂಗಲ್‌ ಸೋಂಕಿನಿಂದ ಮುಕ್ತಿ ಸಿಗುತ್ತದೆ.

ಹೇಗೆ ತಡೆಯಬಹುದು?

ಪಾದಗಳನ್ನು ಸ್ವಚ್ಛಗೊಳಿಸುವುದು:

ಮಳೆಗಾಲದಲ್ಲಿ ಕೊಳಚೆ ನೀರು, ನಾವು ಧರಿಸುವ ಚಪ್ಪಲಿ ಹಾಗೂ ನಂಜಿನ ಕಾರಣದಿಂದ ಕಾಲ್ಬೆರಳುಗಳ ಮಧ್ಯೆ ಅಲರ್ಜಿ, ತುರಿಕೆ ಉಂಟಾಗುತ್ತದೆ. ಈ ಫಂಗಲ್‌ ಸೋಂಕಿನಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಈ ರೀತಿ ಆಗದಿರಲು ಮಳೆಗಾಲದಲ್ಲಿ ನಮ್ಮ ಪಾದಗಳನ್ನು ಮರೆಯದೆಯೇ ಸ್ವಚ್ಛಗೊಳಿಸಿಕೊಳ್ಳಬೇಕು. ವಿಶೇಷವಾಗಿ ಮಳೆಯಲ್ಲಿ ಒದ್ದೆಯಾಗಿ ಮನೆಗೆ ಬಂದ ನಂತರ, ನಿಮ್ಮ ಪಾದಗಳನ್ನು ಸೌಮ್ಯವಾದ ಸೋಪ್ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಪಾದಗಳನ್ನು ಶಿಲೀಂಧ್ರ ಸೋಂಕು ಅಥವಾ ಇತರ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು.

ನಿಮ್ಮ ಪಾದಗಳನ್ನು ನೀರಿನ ಅಂಶ ಇಲ್ಲದಂತೆ ಒಣಗಿಸುವುದು:

ನಿಮ್ಮ ಪಾದಗಳು, ಕಾಲ್ಬೆರಳುಗಳು ಮತ್ತು ವಿಶೇಷವಾಗಿ ಕಾಲ್ಬೆರಳುಗಳ ನಡುವೆ ಮೃದುವಾದ ಟವಲ್‌ನಿಂದ ನೀರು ಇಲ್ಲದಂತೆ ಚೆನ್ನಾಗಿ ಒಣಗಿಸಿ. ಹೀಗೆ ಮಾಡುವುದರಿಂದ, ಕಾಲ್ಬೆರಳುಗಳಲ್ಲಿ ನೀರು ಸಂಗ್ರಹವಾಗುವುದನ್ನು ನೀವು ತಡೆಯಬಹುದು. ಇದು ನಂಜಾಗದಂತೆ ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ
Image
ಕೇವಲ 5 ಮುನ್ನೆಚ್ಚರಿಕೆಗಳನ್ನು ಅನುಸರಿಸಿ, ಹೃದಯಾಘಾತ ಸಂಭವಿಸುವುದಿಲ್ಲ
Image
ಮಧುಮೇಹಿಗಳು ಯಾವ ತರಕಾರಿ ತಿನ್ನಬಾರದು ಗೊತ್ತಾ?
Image
ಪೇರಳೆ ಹಣ್ಣು ಇಷ್ಟನಾ? ಆದ್ರೆ ನಿಮಗೆ ಈ ಖಾಯಿಲೆ ಇದ್ರೆ ತಿನ್ನಬೇಡಿ
Image
ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಮಾಯಿಶ್ಚರೈಸಿಂಗ್:

ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಜಿಡ್ಡು ಇಲ್ಲದಂತಹ ಮಾಯಿಶ್ಚರೈಸರ್ ಹಚ್ಚಿ. ವಿಶೇಷವಾಗಿ ನಿಮ್ಮ ಪಾದಗಳು ಬೆವರುತ್ತಿದ್ದರೆ, ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಆಂಟಿಫಂಗಲ್ ಪೌಡರ್ ಬಳಸಿ.

ಉಗುರಿನ ಆರೈಕೆ ಮಾಡಿ:

ನಿಮ್ಮ ಕಾಲಿನ ಉಗುರುಗಳ ಕೆಳಗೆ ಕೊಳಕು ಮತ್ತು ಕಸ ಸಂಗ್ರಹವಾಗುವುದನ್ನು ತಡೆಯಲು, ಅವುಗಳನ್ನು ನಿಯಮಿತವಾಗಿ ಕತ್ತರಿಸಿ. ನೀವು ಇದನ್ನು ಮಾಡದಿದ್ದರೆ, ಉಗುರುಗಳಲ್ಲಿ ಕೊಳಕು ಸಂಗ್ರಹವಾಗಬಹುದು, ಇದು ಪಾದಗಳಲ್ಲಿ ಫಂಗಲ್‌ ಸೋಂಕಿಗೆ ಕಾರಣವಾಗಬಹುದು.

ಇದನ್ನೂ ಓದಿ: ಎಷ್ಟೇ ಕಡಿಮೆ ಬೆಲೆ ಇರಲಿ, ಮಳೆಗಾಲದಲ್ಲಿ ಮಾತ್ರ ಈ ಹಣ್ಣುಗಳನ್ನು ಮನೆಗೆ ತರಬೇಡಿ

ಶೂಗಳಿಲ್ಲದೆ ನಡೆಯಬೇಡಿ:

ಒದ್ದೆ ಅಥವಾ ಹೆಚ್ಚಿನ ನೀರಿರುವ ಪ್ರದೇಶಗಳಲ್ಲಿ ಬರಿಗಾಲಿನಲ್ಲಿ ನಡೆಯಬೇಡಿ, ಆದಷ್ಟು ಶೂ ಬಳಕೆ ಮಾಡಿ. ಏಕೆಂದರೆ ಇದು ನಿಮ್ಮ ಪಾದಗಳಲ್ಲಿ ಫಂಗಲ್‌ ಸೋಂಕಿಗೆ ಕಾರಣವಾಗಬಹುದು. ನೀವು ಹೊರಗೆ ಹೋಗಿ ಬಂದ ನಂತರ ಕಡಿತ ಆರಂಭವಾದರೆ ತಕ್ಷಣ ನಂಜುನಿರೋಧಕ ಕ್ರೀಮ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ